ನ್ಯಾ. ವಿಶ್ವನಾಥ ಶೆಟ್ಟಿಗೆ ಚೂರಿ ಇರಿತಕ್ಕೆ ಭದ್ರತಾ ವೈಫಲ್ಯವೇ ಕಾರಣ
ಬೆಂಗಳೂರು, ಮಾರ್ಚ್ 07: ಈ ಕೊಲೆ ಪ್ರಯತ್ನ ಯಾರೋ ಸಾಮಾನ್ಯರ ಮೇಲೆ ಆಗಿರುವುದಲ್ಲ, ದಾಳಿ ಆಗಿರುವುದು ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ಮೇಲೆ. ಕೊಲೆ ಪ್ರಯತ್ನ ಮಾಡಿದವನು ಹೊಂಚು ಹಾಕಿ, ಯೋಜನೆಗಳನ್ನು ಮಾಡಿ ಚೂರಿ ಹಾಕಿದ್ದಲ್ಲ, ನೇರವಾಗಿ ಚಾಕುವಿನೊಂದಿಗೆ ಕಚೇರಿಗೆ ನುಗ್ಗಿ ಮೂರು ಬಾರಿ ಇರಿದಿದ್ದಾನೆ.
ಭದ್ರತಾ ವೈಫಲ್ಯವೇ ಈ ಘಟನೆಗೆ ಕಾರಣ ಎಂಬುದು ಸುಸ್ಪಷ್ಟ, ಸಾಮಾನ್ಯ ವ್ಯಕ್ತಿಯೊಬ್ಬ ಚಾಕುವಿನೊಂದಿಗೆ ಲೋಕಾಯುಕ್ತ ನ್ಯಾಯಮೂರ್ತಿಗಳ ಕಚೇರಿ ಪ್ರವೇಶಿಸುತ್ತಾನೆ ಎಂದರೆ ಭದ್ರತೆ ಹೊಣೆ ಹೊತ್ತಿರುವವರು ಎಷ್ಟು ಹೊಣೆಗೇಡಿಯಾಗಿ ಕಾರ್ಯ ನಿರ್ವಹಿಸುತ್ತಿರಬೇಕು ಎಂಬುದು ಅರಿವಾಗುತ್ತದೆ.
ಜೇಬಿನಲ್ಲಿ ಚಾಕು ಇದ್ದರೂ ಸಹಿತ ಎಂಎಸ್ ಬಿಲ್ಡಿಂಗ್‌ನಲ್ಲಿನ ಲೋಕಾಯುಕ್ತ ಕಚೇರಿಯ ಮೆಟಲ್ ಡಿಟೆಕ್ಟರ್ ಅನ್ನು ಆತ ಸುಲಭವಾಗಿ ದಾಟಿ ಬಂದಿದ್ದಾನೆ. ಆ ನಂತರ ಆತ ಲೋಕಾಯುಕ್ತ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಅವಕಾಶ ಕೇಳಿದ್ದಾನೆ. ಆತನಿಗೆ ಚೀಟಿ ಕೊಟ್ಟು ಕರೆಯುವುದಾಗಿ ಕೂರಿಸಲಾಗಿದೆ. ಆ ನಂತರ ಆತನಿಗೆ ನ್ಯಾಯಮೂರ್ತಿಗಳನ್ನು ಭೇಟಿ ಮಾಡಲು ಹೇಳಲಾಗಿದೆ ಆದರೆ ಅಲ್ಲಿಯೂ ಕೂಡ ಆತನ ತಪಾಸಣೆ ನಡೆದಿಲ್ಲ.

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರಿಗೆ ಗನ್ ಮ್ಯಾನ್ ನೀಡಲಾಗಿದೆ. ಆತನೂ ಕೂಡ ಆರೋಪಿ ತೇಜರಾಜ್ ಶರ್ಮಾನನ್ನು ತಪಾಸಣೆ ಮಾಡಿಲ್ಲ. ನಿಯಮದ ಪ್ರಕಾರ ಯಾರೊಬ್ಬರು ಲೋಕಾಯುಕ್ತರಿಗೆ ದೂರು ನೀಡಬೇಕಾದರೆ ಅಲ್ಲಿ ದೂರುದಾರರನ್ನು ಹೊರತುಪಡಿಸಿ ಯಾರೂ ಇರುವಂತಿಲ್ಲ ಹಾಗಾಗಿ ಗನ್ ಮ್ಯಾನ್ ಕೂಡಾ ಹೊರಗೆ ಹೋಗಿದ್ದಾನೆ. ಅದೇ ಸಮಯದಲ್ಲಿ ತೇಜ್‌ರಾಜ್ ಚಾಕು ತೆಗೆದು ನ್ಯಾಯಮೀರ್ತಿಗಳಿಗೆ ಇರಿದಿದ್ದಾನೆ.
ಕಚೇರಿಯ ಮೆಟಲ್ ಡಿಟೆಕ್ಟರ್ ಸರಿ ಇದ್ದಿದ್ದರೆ, ದೂರು ದಾರ ತನ್ನ ಆಗಮನ, ಭೇಟಿ ಉದ್ದೇಶವನ್ನು ವಿಸಿಟರ್ಸ್ ಡೈರಿಯಲ್ಲಿ ಬರೆಯಬೇಕಾದರೆ ಸರಿಯಾಗಿ ವಿಚಾರಿಸಿದ್ದರೆ, ವಿಶ್ವಾನಾಥ ಶೆಟ್ಟಿ ಅವರ ಕಚೇರಿ ಒಳಗೆ ತೇಜ್ ರಾಜ್ ಶರ್ಮಾ ಪ್ರವೇಶಿಸಬೇಕಾದರೆ ಆತನನ್ನು ಸರಿಯಾಗಿ ತಪಾಸಣೆ ಮಾಡಿದ್ದರೆ ಇಂದು ಈ ಘಟನೆ ನಡೆಯುತ್ತಿರಲಿಲ್ಲ.
ಪುಣ್ಯವಶಾತ್ ವಿಶ್ವನಾಥ ಶೆಟ್ಟಿ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವಿಠಲ್ ಮಲ್ಯಾ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಅಕಸ್ಮಾತ್ ಜೀವಕ್ಕೆ ಹಾನಿಯಾಗಿದ್ದರೆ ರಾಜ್ಯದ ಘನತೆಗೆ ಕಪ್ಪು ಚುಕ್ಕೆ ಯಾಗುತ್ತಿತ್ತು ಈ ಘಟನೆ.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Water4Life: ಅತ್ಯಮೂಲ್ಯ ಜಲಮೂಲಗಳ ಸಂರಕ್ಷಣೆಗೆ ರಿಲಯನ್ಸ್ ಫೌಂಡೇಷನ್ನಿಂದ ಜನ ಚಳವಳಿ, ಡಿಟೇಲ್ಸ್ ಇಲ್ಲಿದೆ -
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ












Click it and Unblock the Notifications