ಎಟಿಎಂ ಹಣ ಕದ್ದ ಚಾಲಕನ ಹೊಸ ಕಹಾನಿ:
ಬೆಂಗಳೂರು, ಫೆಬ್ರವರಿ 08: ಎಟಿಎಂನಲ್ಲಿ ತುಂಬ ಬೇಕಿದ್ದ ಹಣದ ಜತೆ ಪರಾರಿಯಾಗಿರುವ ಚಾಲಕ ಯೋಗೀಶ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹಣ ದೋಚಿದ ಬಳಿಕ ಹೆಂಡತಿಯನ್ನು ಬಿಟ್ಟು ತನ್ನ ಲವರ್ ಜತೆ ಎಸ್ಪೇಪ್ ಆಗಿರುವ ಸಂಗತಿ ಬಯಲಾಗಿದೆ.

ಹೆಂಡ್ತೀನ ಬಿಟ್ಟು ಹೊಸ ಲವರ್ ಜತೆ ಎಸ್ಕೇಪ್ !
ಕೆಲ ದಿನಗಳ ಹಿಂದೆ ಸುಬ್ರಮಣ್ಯನಗರದಲ್ಲಿ ಎಟಿಎಂನಲ್ಲಿ ತುಂಬಿದ್ದ 63 ಲಕ್ಷ ರೂಪಾಯಿ ಹಣ ಬೇರೆ ಎಟಿಎಂಗೆ ತುಂಬುವ ಬದಲಿಗೆ ತೆಗೆದುಕೊಂಡು ಸೆಕ್ಯೂರ್ ವ್ಯಾಲ್ಯೂ ಸಂಸ್ಥೆ ಚಾಲಕ ಯೋಗೀಶ್ ಪರಾರಿಯಾಗಿದ್ದ. ಈತನ ವಿರುದ್ಧ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು.

ಹೆಂಡ್ತೀನ ಬಿಟ್ಟು ಹೊಸ ಲವರ್ ಜತೆ ಎಸ್ಕೇಪ್ !
ಮಂಡ್ಯದ ಮಳವಳ್ಳಿ ಮೂಲದ ಯೋಗೀಶ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಪತ್ನಿ ಜತೆಗೆ ಯೋಗೀಶ್ ವಾಸವಾಗಿದ್ದ. ಆದರೆ ಪತ್ನಿ ಹಾಗೂ ಮಕ್ಕಳಿಗೆ ಗೊತ್ತಿಲ್ಲದಂತೆ ಅತ್ತೆ ಮಗಳನ್ನು ಪ್ರೀತಿ ಮಾಡುತ್ತಿದ್ದ. ಮದುವೆಯಾಗಿ ಗಂಡನನ್ನು ಬಿಟ್ಟಿದ್ದ ಆಕೆ ಕೂಡ ಯೋಗೀಶ್ ನನ್ನು ಪ್ರೀತಿಸುತ್ತಿದ್ದರು. ಕೈ ತುಂಬಾ ಹಣ ಬಂದ ಬಳಿಕ ಇಬ್ಬರೂ ಎಸ್ಕೇಪ್ ಆಗುವ ಬಗ್ಗೆ ಪ್ಲಾನ್ ರೂಪಿಸಿದ್ದಾರೆ.

ಹೆಂಡ್ತೀನ ಬಿಟ್ಟು ಹೊಸ ಲವರ್ ಜತೆ ಎಸ್ಕೇಪ್ !
ಪ್ರೇಯಿಸಿಗೆ ಕೊಟ್ಟ ಮಾತಿನಂತೆ ಎಟಿಎಂಗೆ ತುಂಬ ಬೇಕಿದ್ದ ಹಣದ ಬ್ಯಾಗ್ ಸಮೇತ ಎಸ್ಪೇಪ್ ಆಗಿದ್ದಾನೆ. ಎಸ್ಕೇಪ್ ಗೂ ಮೊದಲು ತನ್ನ ಪ್ರೇಯಸಿಯನ್ನು ರೆಡಿಯಾಗುವಂತೆ ತಿಳಿಸಿ ಆಕೆಯನ್ನೂ ಕರೆದುಕೊಂಡು ಪರಾರಿಯಾಗಿರುವ ಸಂಗತಿ ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಇನ್ನು ಪತಿಯ ಪ್ರೇಮ ಕಹಾನಿ ಪೊಲೀಸರಿಂದ ಪತ್ನಿಗೆ ಗೊತ್ತಾಗಿದ್ದು, ಇದೀಗ ಅಕೆಯೂ ಕಂಗಾಲಾಗಿದ್ದಾರೆ.
Recommended Video

ಹೆಂಡ್ತೀನ ಬಿಟ್ಟು ಹೊಸ ಲವರ್ ಜತೆ ಎಸ್ಕೇಪ್ !
ಯೋಗೀಶ್ ತನ್ನ ಅತ್ತೆಯ ವಿವಾಹಿತ ಮಗಳ ಜತೆ ಓಡಿ ಹೋಗುವ ಮುನ್ನ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಉತ್ತರ ಭಾರತದ ಕಡೆ ಹೋಗಿರುವ ಶಂಕೆ ವ್ಯಕ್ತವಾಗಿದೆ. ಯೋಗೀಶ್ ಪ್ರಯಾಣಿಸಿರುವ ಮಾರ್ಗ ಕುರಿತು ಮಾಹಿತಿ ಸಂಗ್ರಹಿಸುತ್ತಿರುವ ಸುಬ್ರಮಣ್ಯ ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ. ಆದರೆ ಯೋಗೀಶ್ ನ ಸುಳಿವು ಸಿಕ್ಕಿಲ್ಲ. ಮೊಬೈಲ್ ಬಳಸದ ಕಾರಣ ಟವರ್ ಲೊಕೇಷನ್ ಜಾಡು ಹಿಡಿದು ತನಿಖೆ ಮಾಡುವ ಪೊಲೀಸರ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ಸಣ್ಣ ಸುಳಿವು ಇಲ್ಲದಂತೆ ಯೋಗೀಶ್ ತಲೆ ಮರೆಸಿಕೊಂಡಿದ್ದಾನೆ.












Click it and Unblock the Notifications