ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂ ಹಲ್ಲೆ ಪ್ರಕರಣಕ್ಕೆ 3 ವರ್ಷ: ತನಿಖೆ ನೆನೆಗುದಿಗೆ

ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಅವರ ಮೇಲೆ ಎಟಿಎಂ ಕಿಯೋಸ್ಕ್ ನಲ್ಲಿ ಮಾರಣಾಂತಿಕ ಹಲ್ಲೆ ನಡೆದ ಪ್ರಕರಣಕ್ಕೆ ನಾಳೆಗೆ ಮೂರು ವರ್ಷ ತುಂಬಲಿದೆ.ಆರೋಪಿಯ ಸುಳಿವು ಕೂಡಾ ಇನ್ನೂ ಪತ್ತೆಯಾಗಿಲ್ಲ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 18: ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಅವರ ಮೇಲೆ ಎಟಿಎಂ ಕಿಯೋಸ್ಕ್ ನಲ್ಲಿ ಮಾರಣಾಂತಿಕ ಹಲ್ಲೆ ನಡೆದ ಪ್ರಕರಣಕ್ಕೆ ನಾಳೆಗೆ ಮೂರು ವರ್ಷ ತುಂಬಲಿದೆ.

ಆರೋಪಿಯ ಸುಳಿವು ಕೂಡಾ ಇನ್ನೂ ಪತ್ತೆಯಾಗಿಲ್ಲ. ತನಿಖಾಧಿಕಾರಿಗಳು ಈ ಪ್ರಕರಣವನ್ನು ನೆನೆಗುದಿಗೆ ಹಾಕಿದ್ದಾರೆ. ಅಂದರೆ, ಹೊಸ ಸುಳಿವು ಪತ್ತೆಯಾಗುವ ತನಕ ಈ ಕೇಸ್ ಶೈತ್ಯಾಗರದಲ್ಲಿಡಲಾಗುತ್ತದೆ. [ಘಟನೆ ಬಗ್ಗೆ ಜ್ಯೋತಿ ಉದಯ್ ಹೇಳಿದ್ದೇನು?]

ATM attack case undetected: Bengaluru police tell court

ಎಟಿಎಂನಲ್ಲಿ ದುಷ್ಕರ್ಮಿಯಿಂದ ಹಲ್ಲೆಗೊಳಗಾದ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡು ಮತ್ತೆ ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ದಾಳಿ ನಡೆದು ಮೂರು ವರ್ಷಗಳು ಕಳೆದರೂ ಆರೋಪಿಯ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲದ ಕಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟಿಗೆ 'ಸಿ' ರಿಪೋರ್ಟ್ ಸಲ್ಲಿಸಲಾಗಿದೆ. ಹೊಸ ಸುಳಿವು, ಆರೋಪಿ ಪತ್ತೆಯಾದರೆ ಕೇಸ್ ಮತ್ತೆ ಓಪನ್ ಆಗುತ್ತದೆ.

ATM attack case undetected: Bengaluru police tell court

ನ.19, 2013ರ ಮಂಗಳವಾರ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಮುಂಜಾನೆ 7 ಗಂಟೆ ಸುಮಾರಿಗೆ ಜ್ಯೋತಿ ಉದಯ್ ಅವರ ಮೇಲೆ ದುಷ್ಕರ್ಮಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದ. ಜ್ಯೋತಿ ಉದಯ್ ಅವರ ತಲೆ ಮತ್ತು ಮುಖಕ್ಕೆ ಗಾಯಗಳಾಗಿತ್ತು. ನಂತರ ಅವರಿಗೆ ಬಿಜಿಎಸ್ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗಿತ್ತು.

ಆದರೆ, ಅವರ ಮೇಲೆ ಹಲ್ಲೆ ನಡೆಸಿದ ಆರೋಪಿಯ ಕುರಿತು ಇದುವರೆಗೂ ಸುಳಿವು ಪತ್ತೆಯಾಗಿಲ್ಲ. ಮೂರು ವರ್ಷಗಳು ಕಳೆದರೂ ಆತನ ಬಂಧನವಾಗಿಲ್ಲ.

ATM attack case undetected: Bengaluru police tell court

ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆರೋಪಿಯ ಬಗ್ಗೆ ಸುಳಿವು ಕೊಟ್ಟವರಿಗೆ ಸರ್ಕಾರ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು.

ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆದ ಬಳಿಕ ಪೊಲೀಸರು ಎಟಿಎಂಗಳಲ್ಲಿ ಜನರ ಸುರಕ್ಷತೆಗಾಗಿ ನೀಡಿರುವ ಮಾರ್ಗಸೂಚಿ ಎಲ್ಲಾ ಎಟಿಎಂಗಳಲ್ಲೂ ಪಾಲನೆಯಾಗುತ್ತಿಲ್ಲ. ಇಂದಿಗೂ ಹಲವು ಎಟಿಎಂಗಳಲ್ಲಿ ಸೈರನ್, ಸಿಸಿಟಿವಿ ಮತ್ತು ಸೆಕ್ಯೂರಿಟಿ ಗಾರ್ಡ್‌ಗಳಿಲ್ಲ.ಈಗಂತೂ ಎಟಿಎಂಗಳಲ್ಲಿ ಹಣವಲ್ಲ ಎಂಬ ಬೋರ್ಡ್ ಕಾಣಿಸುತ್ತದೆ.

English summary
Almost three years after the chilling case of a bank employee being hacked in an ATM kiosk in Bengaluru, the city police have filed a C report in the case. There is no trace of the assailant even after almost 3 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X