ನಾಗವಲ್ಲಿ ಕತೆ ಹೇಳಿ ಮೂವತ್ತು ಲಕ್ಷ ವಂಚಿಸಿದ ಕಳ್ಳ ಜ್ಯೋತಿಷಿ
ಬೆಂಗಳೂರು, ಆಗಸ್ಟ್ 21: ಆಪ್ತಮಿತ್ರ ಸಿನಿಮಾದ ನಾಗವಲ್ಲಿಯ ಕತೆ ಹೇಳಿ ಜ್ಯೋತಿಷಿಯೊಬ್ಬ ಮೂವತ್ತು ಲಕ್ಷ ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಜ್ಯೋತಿಷಿ ಎಂದು ಹೇಳಿಕೊಂಡಿದ್ದ ವೆಂಟಕ ಕೃಷ್ಣಾಚಾರಿ, ವಿಜಯನಗರದ ಮನೆಯೊಂದರಲ್ಲಿ ವಾಸ್ತುದೋಷವಿದೆ ಎಂದು ಹೇಳಿ ಹೋಮ ಮಾಡಿಸಿದ್ದ. ನಂತರ ಅದೇ ಮನೆಯ ಯುವತಿಯ ಆತ್ಮೀಯತೆ ಗಿಟ್ಟಿಸಿಕೊಂಡು ಮೊಬೈಲ್ ಮೂಲಕ ಸಂಪರ್ಕ ಮಾಡುತ್ತಿದ್ದ.
ಯುವತಿಗೆ 'ನೀನು ಹಿಂದಿನ ಜನ್ಮದಲ್ಲಿ ನೃತ್ಯಗಾರ್ತಿಯಾಗಿದ್ದೆ, ಕಳೆದ ಮೂರು ಜನ್ಮದಿಂದಲೂ ನಾನು-ನೀನು ಗಂಡ ಹೆಂಡತಿ ಆಗಿದ್ದೇವು. ಕಳೆದ ಜನ್ಮದಲ್ಲಿ ನಿನ್ನ ಸಾವಿಗೆ ನಾನೇ ಕಾರಣ ಆಗಿದ್ದೆ ಹಾಗಾಗಿ ಈ ಬಾರಿ ನಾವು ಒಂದಾಗಿಲ್ಲ. ನೀನು ನನ್ನ ಮದುವೆ ಆದರೆ ಮಾತ್ರವೇ ನಿನಗೆ ಮೋಕ್ಷ ಸಿಗುತ್ತದೆ' ಎಂದು ಹೇಳಿದ್ದಾನೆ.

ಈಗಾಗಲೇ ಮದುವೆಯಾಗಿ ಮಕ್ಕಳೂ ಇರುವ ಸ್ವಾಮೀಜಿ, ಯುವತಿಗೆ ಪುನರ್ಜನ್ಮದ ಕತೆ ಹೇಳಿ ನಂಬಿಸಿ, ಆಕೆಯ ಹೆಸರಲ್ಲಿ ವಿವಿಧ ಬ್ಯಾಂಕುಗಳಲ್ಲಿ ಮೂವತ್ತು ಲಕ್ಷ ರೂಪಾಯಿ ಸಾಲ ಪಡೆದಿದ್ದಾನೆ.
ಯುವತಿಯ ಬ್ಯಾಗಿನಲ್ಲಿ ನಿಂಬೆಹಣ್ಣು, ಹಣ್ಣಿನ ಬೊಂಬೆ ಇನ್ನೂ ಏನೇನೋ ವಸ್ತುಗಳನ್ನು ಹಾಕಿದ್ದ ಜ್ಯೋತಿಷಿ ಆಕೆಯನ್ನು ತನ್ನ ಅಪಾರ್ಟ್‌ಮೆಂಟ್‌ಗೆ ಕರೆದುಕೊಂಡು ಹೋಗಿ ಏನೇನೋ ಪೂಜೆ ಸಹ ಮಾಡಿಸಿದ್ದ. ಖಾಸಗಿ ಸಂಸ್ಥೆಯಲ್ಲಿ ಚಾರ್ಟೆಡ್ ಅಕೌಂಟೆಟ್ ಆಗಿದ್ದ ಯುವತಿ ಜ್ಯೋತಿಷಿ ಹೇಳಿದಂತೆ ಕೇಳುತ್ತಿದ್ದಳು.
ನಿನ್ನೆ ಹನುಮಂತನಗರದಲ್ಲಿನ ಜ್ಯೋತಿಷಿ ಮನೆಗೆ ತೆರಳಿದ ಯುವತಿಯ ಪೋಷಕರು ಹಾಗೂ ಸಂಬಂಧಿಗಳು ಜ್ಯೋತಿಷಿಗೆ ಗೂಸಾ ಕೊಟ್ಟಿದ್ದಾರೆ. ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್












Click it and Unblock the Notifications