ಬೆಂಗಳೂರಿನ ಉಪ ಮಹಾಪೌರರಾದ ಹೇಮಲತಾ ಆಸ್ತಿ ವಿವರ
ಬೆಂಗಳೂರು, ಸೆ. 11: ಬೆಂಗಳೂರಿನ ಮಹಾಪೌರರಾಗಿ ಕಾಂಗ್ರೆಸ್ಸಿನ ಬಿಬಿಎಂಪಿ ಸದಸ್ಯ ಮಡಿವಾಳ ವಾರ್ಡಿನ ಬಿ.ಎನ್ ಮಂಜುನಾಥ್ ಅವರು ಶುಕ್ರವಾರ ಆಯ್ಕೆಯಾಗಿದ್ದಾರೆ. ಉಪ ಮಹಾಪೌರರಾಗಿ ಹಾಲಿ ಶಾಸಕ ಗೋಪಾಲಯ್ಯ ಅವರ ಪತ್ನಿ ಹೇಮಲತಾ ಎಸ್. ಪಿ ಅವರು ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ಬಿಬಿಎಂಪಿ ಸದಸ್ಯರಾದ ಬೆನ್ನಲ್ಲೇ ಉಪ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ.
ಬಿಬಿಎಂಪಿ ಚುನಾವಣೆಗೂ ಮುನ್ನ ಆಯೋಗಕ್ಕೆ ಹೇಮಲತಾ ಅವರು ಸಲ್ಲಿಸಿದ್ದ ಸಲ್ಲಿಸಿದ್ದ ಅಫಿಡವಿಟ್ ಆಧಾರದ ಮೇಲೆ ಮಂಜುನಾಥ್ ರೆಡ್ಡಿ ಅವರ ಆಸ್ತಿ ವಿವರ ಮುಂದಿದೆ. [ಮಂಜುನಾಥ್ ರೆಡ್ಡಿ ವ್ಯಕ್ತಿ ಚಿತ್ರ]
ಬೆಂಗಳೂರು ಉತ್ತರ ಜಿಲ್ಲೆಯ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ(156)ದ ವೃಷಭಾವತಿ ನಗರ (102) ವಾರ್ಡ್ ನಿಂದ ಸ್ಪರ್ಧಿಸಿದ್ದ ಹೇಮಲತಾ ಅವರು ಬಿಜೆಪಿಯ ಗಂಗಮ್ಮ ಹಾಗೂ ಕಾಂಗ್ರೆಸ್ ನ ಎಚ್ ಮಂಜುಳಾ ಅವರನ್ನು ಸೋಲಿಸಿ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.[ಮಹಾಪೌರ ಮಂಜುನಾಥ್ ರೆಡ್ಡಿ ಆಸ್ತಿ ವಿವರ]
ಹೇಮಲತಾ ಎಸ್ .ಪಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ಕೇಸ್ ದಾಖಲಾಗಿಲ್ಲ. ಹೇಮಲತಾ ಎಸ್ .ಪಿ ಅವರ ಆಸ್ತಿ ಮೇಲೆ ಅವಲಂಬಿತರು, ಚರಾಸ್ತಿ, ಸ್ಥಿರಾಸ್ತಿ, ಬ್ಯಾಂಕ್ ಠೇವಣಿ ವಿವರಗಳು ಇಲ್ಲಿವೆ.[ಉಪ ಮೇಯರ್ ಆಗಿ ಎಸ್‌ಪಿ ಹೇಮಲತಾ]
ಹೇಮಲತಾ ಎಸ್ .ಪಿ ಅವರು ಅಫಿಡವಿಟ್ ನಲ್ಲಿ ಶಾಲೆ, ಕಾಲೇಜು ವಿವರಗಳನ್ನು ನಮೂದಿಸಿಲ್ಲ. ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಓದಿರುವುದಾಗಿ ಹಾಸನ ಜಿಲ್ಲೆ ಶ್ರವಣಬೆಳಗೊಳದ ಬಾಹುಬಲಿ ಪಾಲಿಟೆಕ್ನಿಕ್ ನಿಂದ 1992ರಲ್ಲಿ ಕೋರ್ಸ್ ಮುಗಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಪ್ಯಾನ್ ಕಾರ್ಡ್ ನಂಬರ್/ ಸಾಲ ಸೋಲ
* ಇವರ ಪ್ಯಾನ್ ಕಾರ್ಡ್ ನಂಬರ್ : AXUPSA23A
* ಮನೆ ವಿಳಾಸ: ಹೇಮಲತಾ ಎಸ್ .ಪಿ (41 ವರ್ಷ), ನಂ. 91/2, 11ನೇ ಮುಖ್ಯರಸ್ತೆ, ವೃಷಭಾವತಿ ನಗರ, ಕಾಮಾಕ್ಷಿಪಾಳ್ಯ ಬೆಂಗಳೂರು -560079
* ಮಕ್ಕಳು ಜಿ ಮಂಜುನಾಥ್ ಗೌಡ ಹಾಗೂ ಜಿ ಸಂಜಯ್ ಗೌಡ
ಸಾಲ ಸೋಲ ವಿವರ:
* ಕೆನರಾ ಬ್ಯಾಂಕ್ , ಕುಣಿಗಲ್ (6159 ಅಕೌಂಟ್ ನಂಬರ್) : 38,74,729 ರು ಸಾಲ
* ಜನತಾ ಸೇವಾ ಬ್ಯಾಂಕ್, ಮಹಾಲಕ್ಷ್ಮಿಪುರಂ, ಬೆಂಗಳೂರು: 61,73,140 ರು

ಉಳಿತಾಯ ಖಾತೆ ವಿವರ
* ಜನತಾ ಸೇವಾ ಕೋ ಆಪ್ ಬ್ಯಾಂಕ್, ಮಹಾಲಕ್ಷ್ಮಿಪುರಂ, ಬೆಂಗಳೂರು(ಖಾತೆ 2309) 94,010 ರು
* ಕೆನರಾ ಬ್ಯಾಂಕ್ (ನಂ. 24662) 1,264 ರು
* ಬ್ಯಾಂಕ್ ಆಫ್ ಬರೋಡಾ (19030100002095)- 25,853 ರು
* ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಬಸವೇಶ್ವರನಗರ (62279163035)-1,182 ರು
* ಜನತಾ ಸೇವಾ ಕೋ ಆಪ್ ಬ್ಯಾಂಕ್, ಮಹಾಲಕ್ಷ್ಮಿಪುರಂ(6454) -1,360 ರು
* ಬಾಂಡ್: ಜನತಾ ಸೇವಾ ಕೋ ಆಪ್ ಬ್ಯಾಂಕ್ 3,000 ರು ಷೇರುಗಳು
* ಎಲ್ ಐಸಿ ಇನ್ನಿತರೆ: 5 ಲಕ್ಷ 10 ಲಕ್ಷ 8.50 ಲಕ್ಷ ಪಾಲಿಸಿ

ವಾಹನ, ಒಡವೆಗಳು
ವಾಹನಗಳು: ಇಲ್ಲ
ಒಡವೆಗಳು: ಬಂಗಾರ 1 ಕೆಜಿ 385 ಗ್ರಾಂ 40,00,000 ರು
ಬೆಳ್ಳಿ: 9 ಕೆಜಿ 300 ಗ್ರಾಂ- 5,00,000ರು
* ಚೆನ್ನಿಗರಾಯಸ್ವಾಮಿ ಕ್ರಷರ್ ನಿಂದ 34,99,890 ರು ಆದಾಯ
ಪತಿ ಬಳಿ ಇರುವ ವಾಹನಗಳು: ಮಹೀಂದ್ರಾ ಜೀಪ್, ಟೊಯೋಟಾ ಇನ್ನೊವಾ, ಕ್ವಾಲೀಸ್,
ಪತಿ ಬಳಿ ಆಭರಣ: 120ಗ್ರಾಂ ಚಿನ್ನ, 3,60,000ರು, ಬೆಳ್ಳಿ 3 ಕೆಜಿ 1,80,000ರು
ಮಕ್ಕಳ ಬಳಿ: 60ಗ್ರಾಂ ಚಿನ್ನ-1,80,000ರು, ಬೆಳ್ಳಿ: 1 ಕೆಜಿ 100ಗ್ರಾಂ 70,000ರು
* 65ಗ್ರಾಂ 2,00,000ರು, ಬೆಳ್ಳಿ: 1 ಕೆಜಿ 200ಗ್ರಾಂ 95,000ರು

ಕೆ ಗೋಪಾಲಯ್ಯ ಉಳಿತಾಯ ಖಾತೆ
* ಜನತಾ ಸೇವಾ ಕೋ ಆಪ್ ಬ್ಯಾಂಕ್, ಮಹಾಲಕ್ಷ್ಮಿಪುರಂ, ಬೆಂಗಳೂರು (ಖಾತೆ 237) 984 ರು
* ಜನತಾ ಸೇವಾ ಕೋ ಆಪ್ ಬ್ಯಾಂಕ್, ಮಹಾಲಕ್ಷ್ಮಿಪುರಂ(ಖಾತೆ 1421) -5,390 ರು
* ಬ್ಯಾಂಕ್ ಆಫ್ ಇಂಡಿಯಾ (849210100020090)- 23, 442 ರು
* ಅಪೆಕ್ಸ್ ಬ್ಯಾಂಕ್,ವಿಧಾನಸೌಧ ಶಾಖೆ(0020316) -1,65,859 ರು
* ಬ್ಯಾಂಕ್ ಆಫ್ ಹೈದರಾಬಾದ್, ಬಸವೇಶ್ವರನಗರ(62279165500)-2,746ರು

ಬಾಂಡ್. ಡಿಬೆಂಚರ್ಸ್
ಬಾಂಡ್. ಡಿಬೆಂಚರ್ಸ್: ಜನತಾ ಸೇವಾ ಕೋ ಆಪ್ ಬ್ಯಾಂಕ್ 1,75,000 ರು ಷೇರುಗಳು
* ಎಲ್ ಐಸಿ ಇನ್ನಿತರ ಸಾಧನಗಳು: 2 ಲಕ್ಷ, 15 ಲಕ್ಷ ಪಾಲಿಸಿ
* ಮಕ್ಕಳ ಹೆಸರಲ್ಲಿ ಪಾಲಿಸಿ: 1,05,000 ರು ಹಾಗೂ 50,000 ರು
* 1,05,000 ರು ಹಾಗೂ 50,000 ರು

ಸ್ಥಿರಾಸ್ತಿ ವಿವರ, ವ್ಯವಸಾಯ ಜಮೀನು
* ಕುಣಿಗಲ್ ತಾಲೂಕು, ಯಡಿಯೂರು ಹೋಬಳಿ ನಡೆಮಾವಿನಪುರ 5 ಎಕರೆ , 17 ಗುಂಟೆ 41, 88,000ರು.
* ತುಮಕೂರುಜಿಲ್ಲೆಯ ಹಿರೇಹಳ್ಳಿ -9,25,000 ರು ಮೌಲ್ಯ.
* ಮಾಚೋಹಳ್ಳಿ ಬಳಿ 3.5 ಗುಂಟೆ 14,00,000ರು ಮೌಲ್ಯ.
* ಮಾಚೋಹಳ್ಳಿ 85,50,000 ರು ಮೌಲ್ಯರ ವ್ಯವಸಾಯ ಜಮೀನು
* ನಿವೇಶನ ವೃಷಭಾವತಿ ನಗರ, 1,00,02,000 ರು ಮೌಲ್ಯ.












Click it and Unblock the Notifications