ಸೂಜಿ ಕ್ಯೂ ಬಾರ್‌ನಲ್ಲಿ ಧಾರವಾಡ ಮಾಜಿ ಸಂಸದ ಪುತ್ರನ ಮೇಲೆ ಹಲ್ಲೆ

ಬೆಂಗಳೂರು ಜ. 27: ಕುಡಿದ ಅಮಲಿನಲ್ಲಿ ಧಾರವಾಡ ಮಾಜಿ ಸಂಸದ ಮಂಜುನಾಥ್ ಅವರ ಪುತ್ರನ ಮೇಲೆ ಆತನ ಸ್ನೇಹಿತರೇ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಚಂದ್ರಶೇಖರ್ ಕುನ್ನೂರ್ ಹಲ್ಲೆಗೆ ಒಳಾಗಿದ್ದು, ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಇಂಡಿಯನ್ಎಕ್ಸ್ ಪ್ರೆಸ್ ಸಮೀಪ ಇರುವ ಸೂಜಿ ಕ್ಯೂ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಚಂದ್ರಶೇಖರ್ ಕುನ್ನೂರ್ ಮೇಲೆ ಹಲ್ಲೆ ನಡೆದಿದೆ.

ಜ. 23 ರಂದು ಉದ್ಯಮಿಯಾಗಿರುವ ಚಂದ್ರಶೇಖರ್ ಕುನ್ನೂರ್ ಊಟಕ್ಕೆಂದು ಮೀರಜ್ ಹೋಟೆಲ್ ಗೆ ತೆರಳಿದ್ದರು. ಯುವರಾಜ್, ಪೃಥ್ವಿಗೌಡ, ಪ್ರಸನ್ನ ಜಯಪ್ಪ ಮತ್ತಿತರರೊಂದಿಗೆ ತೆರಳಿದ್ದರು. ಇದೇ ವೇಳೆ ಪಕ್ಕದ ಟೇಬಲ್ ನಲ್ಲಿ ಕೂತಿದ್ದ ಚೇತನ್ ಹೆಗ್ಡೆ, ಪ್ರಶಾಂತ್ ರೆಡ್ಡಿ ಸೂಜಿ ಪಬ್‌ಗೆ ಊಟಕ್ಕೆ ಆಹ್ವಾನಿಸಿದ್ದಾರೆ. ಚೇತನ್ ಹೆಗಡೆಗೆ ಸೇರಿದೆ ಎನ್ನಲಾದ ಸೂಜಿ ಕ್ಯೂ ಪಬ್‌ಗೆ ಆಹ್ವಾನಿಸಿದ್ದಾರೆ. ಆಹ್ವಾನ ಸ್ವೀಕರಿಸಿ ಪಬ್‌ಗೆ ಚಂದ್ರಶೇಖರ್ ಕುನ್ನೂರ್ ತನ್ನ ಸ್ನೇಹಿತರೊಂದಿಗೆ ತೆರಳಿದ್ದಾರೆ.

Bengaluru: Assault on Dharwad Former MP Manjunath Kunnur’s Son by His Friends

ರಾತ್ರಿ ಹನ್ನಂದು ಗಂಟೆಯಾದರೂ ಊಟ ತಂದುಕೊಟ್ಟಿಲ್ಲ. ಹೀಗಾಗಿ ಬೇಗ ಊಟ ಕೊಡುವಂತೆ ಚಂದ್ರಶೇಖರ್ ಕುನ್ನೂರ್ ಸಿಬ್ಬಂದಿಗೆ ಕೇಳಿದ್ದಾರೆ. ಇಷ್ಟಾಗಿಯೂ ಅನಾಯಸವಾಗಿ ಮತ್ತೆ ಅರ್ಧ ತಾಸು ಕಾಯಿಸಲಾಗಿದೆ. ಈ ವೇಳೆ ಏಕಾಏಕಿ ಚಂದ್ರಶೇಖರ್ ಕುನ್ನೂರ್ ಬಳಿ ಬಂದ ಪ್ರಶಾಂತ್ ರೆಡ್ಡಿ ಏಕಾ ಏಕಿ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾನೆ. ಈತ ಯಾರು ಎಂದು ಕೇಳಿದಾಗ, ಆತ ನನ್ನ ಸ್ನೇಹಿತ, ಇದು ನಮ್ಮ ಅಡ್ಡ. ಯಾವಾಗ ಊಟ ಬರುತ್ತೋ ಅವಾಗ ತಿನ್ನಬೇಕು ಎಂದು ಧಮ್ಕಿ ಹಾಕಿದ್ದಾನೆ. ಇದೇ ವೇಳೆ ಚಂದ್ರಶೇಖರ್ ಕಪಾಳಕ್ಕೆ ಪ್ರಶಾಂತ್ ರೆಡ್ಡಿ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಕೋವಿಡ್ ನಿಯಮ ಉಲ್ಲಂಘನೆ ಬಗ್ಗೆ ದೂರು ನೀಡಲಾಗಿದೆ.

v

ಚಂದ್ರಶೇಖರ್ ಕುನ್ನೂರು ನೀಡಿದ ದೂರಿನ ಮೇಲೆ ಆರೋಪಿಗಳ ವಿರುದ್ಧ ಎಫ್ಐಆರ್ ಆಗಿದ್ದು, ಘಟನೆ ಬಳಿಕ ತಲೆ ಮರೆಸಿಕೊಂಡಿದ್ದಾರೆ. ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆ ವೇಳೆ ಹೊಯ್ಸಳ ಪೊಲೀಸರ ನೆರವಿನಿಂದ ತಪ್ಪಿಸಿಕೊಂಡು ಬಂದಿದ್ದಾಗಿ ಚಂದ್ರಶೇಖರ್ ಹೇಳಿಕೊಂಡಿದ್ದಾರೆ.

Recommended Video

      ಕರ್ನಾಟಕದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ ಗೌರವ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+