Namma Metro: ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಏಷ್ಯಾದ ಅತೀ ದೊಡ್ಡ ಮೆಟ್ರೋ ನಿಲ್ದಾಣದ ಉದ್ಘಾಟನೆ ಯಾವಾಗ?
Namma Metro: ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ರೈಲು ಕೂಡ ಒಂದಾಗಿದೆ. ಇಲ್ಲಿನ ಬಹುತೇಕ ಮಂದಿ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಳ್ಳಲು ಮೆಟ್ರೋವನ್ನೇ ಅವಲಂಬಿಸಿದ್ದಾರೆ. ಇನ್ನು ಇದೀಗ ನಗರದ ಈ ಭಾಗದಲ್ಲಿ ಏಷ್ಯಾದ ಅತೀ ಎತ್ತರದ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ. ಹಾಗಾದರೆ ಎಲ್ಲಿ ಹಾಗೂ ನಿರ್ಮಾಣ ಕಾಮಗಾರಿ ಆರಂಭ ಯಾವಾಗ ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ತಿಳಿಯಿರಿ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಏಷ್ಯಾದ ಅತಿ ಎತ್ತರದ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಹಾಗಾದರೆ ಇದು ಎಲ್ಲಿ ನಿರ್ಮಾಣವಾಗಲಿದೆ ಹಾಗೂ ಯಾರಿಲ್ಲ ಪ್ರಯೋಜನಾ ಆಗಲಿದೆ ಎಂದು ಇಲ್ಲಿ ಗಮನಿಸಿ.

ನಗರದ ಜಯದೇವ ಮೆಟ್ರೋ ಜಂಕ್ಷನ್ ಏಷ್ಯಾದ ಅತಿದೊಡ್ಡ ಮೆಟ್ರೋ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರ ಆಗಲಿದೆ. ಈ ಮೆಟ್ರೋ ನಿಲ್ದಾಣ ಇದೇ ವರ್ಷಾಂತ್ಯಕ್ಕೆ ಆರಂಭ ಆಗುವ ಸಾಧ್ಯತೆ ಇದೆ. ಬನ್ನೇರುಘಟ್ಟ ರಸ್ತೆಯಲ್ಲಿರುವ ಬಹುಹಂತದ ಮೆಟ್ರೋ ಇಂಟರ್‌ಚೇಂಜ್ ನಿಲ್ದಾಣ ಇದಾಗಿದ್ದು, ಹಳದಿ ಮತ್ತು ಗುಲಾಬಿ ಮೆಟ್ರೋ ರೈಲು ಮಾರ್ಗದ ಭಾಗವಾಗಿ ಡಿಸೆಂಬರ್ 2024ರಿಂದ ಕಾರ್ಯಾರಂಭ ಆಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಡಬಲ್ ಎಲಿವೇಟೆಡ್ ರಸ್ತೆ ಜೊತೆಗೆ 6 ಹಂತಗಳನ್ನು ಹೊಂದಿರುವ ಮೆಟ್ರೋ ನಿಲ್ದಾಣವನ್ನು ಬಿಎಂಆರ್‌ಸಿಎಲ್ ನಿರ್ಮಾಣವಾಗುತ್ತಿದೆ. ಇದು ಬೆಂಗಳೂರಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಮೆಟ್ರೋ ನಿಲ್ದಾಣ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದು ಬೆಂಗಳೂರಿನ ಜಯದೇವ ಆಸ್ಪತ್ರೆ ಬಳಿ. ಈ ಮೆಟ್ರೋ ನಿಲ್ದಾಣವನ್ನು ಕೆಳಗಿನ ರಸ್ತೆಯಿಂದ 29 ಮೀಟರ್ ಎತ್ತರದಲ್ಲಿ ನಿರ್ಮಿಸಲಾಗುತ್ತಿದ್ದು, ಅಂದಾಜು 200 ಕೋಟಿ ರೂಪಾಯಿಗೂ ಹೆಚ್ಚು ಹಣ ವೆಚ್ಚ ಮಾಡಲಾಗುತ್ತಿದೆ.
ಈ ಮೆಟ್ರೋ ನಿಲ್ದಾಣದ 6 ಹಂತಗಳನ್ನು ನೋಡುವುದಾದರೆ, ಮೊದಲ ಹಂತದಲ್ಲಿ ಡೈರಿ ಸರ್ಕಲ್‌ನಿಂದ ಬನ್ನೇರುಘಟ್ಟದವರೆಗೆ ಅಂಡರ್ ಪಾಸ್ ರಸ್ತೆ, 2ನೇ ಹಂತದಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ರಸ್ತೆಯಿದೆ. ಇದೇ ಮಾರ್ಗದ 3ನೇ ಹಂತದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಇದ್ದು, 4ನೇ ಹಂತದಲ್ಲಿ ಜಯದೇವ ಸರ್ಕಲ್‌ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಎಲಿವೇಟೆಡ್ ರಸ್ತೆ, 5ನೇ ಹಂತದಲ್ಲಿ ಗೊಟ್ಟಿಗೆರೆಯಿಂದ ನಾಗವಾರದವರೆಗೆ ಮೆಟ್ರೋ ಲೇನ್, 6ನೇ ಹಂತದಲ್ಲಿ ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ ಮೆಟ್ರೋ ಲೇನ್ ಇರಲಿದೆ.












Click it and Unblock the Notifications