Bengaluru Real Estate: ಅರವಿಂದ್ ಸ್ಮಾರ್ಟ್‌ಸ್ಪೇಸ್ ಸಂಸ್ಥೆಯಿಂದ ₹ 400 ಕೋಟಿ ಮೌಲ್ಯದ ವಸತಿ ಯೋಜನೆ- ಅಂಕಿಅಂಶ, ವಿವರ
ಬೆಂಗಳೂರು, ಅಕ್ಟೋಬರ್ 23: ಬೆಂಗಳೂರಿನಲ್ಲಿ ಸುಮಾರು ₹ 400 ಕೋಟಿ ಮಾರಾಟ ಸಾಮರ್ಥ್ಯ ಹೊಂದಿರುವ ಹೊಸ ವಸತಿ ಯೋಜನೆಗೆ ಅರವಿಂದ್ ಸ್ಮಾರ್ಟ್‌ಸ್ಪೇಸ್ ಸಹಿ ಹಾಕಿದೆ. ಈ ಯೋಜನೆಯನ್ನು ಎಚ್‌ಡಿಎಫ್‌ಸಿ ಪ್ಲಾಟ್‌ಫಾರ್ಮ್- 2 ರ ಅಡಿಯಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಂಪನಿಯು, 'ಬೆಂಗಳೂರಿನಲ್ಲಿ ಹೊಸ ವಸತಿ ಅಪಾರ್ಟ್‌ಮೆಂಟ್ ಯೋಜನೆಗೆ ಸಹಿ ಹಾಕಲಾಗಿದೆ. ಸುಮಾರು 4.6 ಲಕ್ಷ ಚದರ ಅಡಿಗಳಲ್ಲಿ ( ಮಾರಾಟದ ವಿಸ್ತೀರ್ಣ ) ಒಟ್ಟು ಈ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ. ಸುಮಾರು ₹ 400 ಕೋಟಿಯ ಮಾರಾಟದ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ' ಎಂದು ಹೇಳಿದೆ.

'ಬೆಂಗಳೂರು ಮತ್ತು ಅಹಮದಾಬಾದ್‌ನಲ್ಲಿ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲು ನಾವು ತೀರ್ಮಾನಿಸಿದ್ದೇವೆ. ನಮ್ಮ ಯೋಜನೆಗಳು ಆದಷ್ಟೂ ಶೀಘ್ರವೇ ಕಾರ್ಯರೂಪಕ್ಕೆ ಬರಲಿವೆ' ಎಂದು ಅರವಿಂದ್ ಸ್ಮಾರ್ಟ್‌ಸ್ಪೇಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕಮಲ್ ಸಿಂಗಲ್ ಹೇಳಿದ್ದಾರೆ.
ಈ ಮಹತ್ವ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ತಜ್ಞರನ್ನು ನೇಮಿಸಿಕೊಂಡಿದ್ದೇವೆ. ಇದು ನಮ್ಮ ಕಂಪನಿಯ ಅತೀ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನ ಪ್ರಮುಖ ಮೈಕ್ರೋ ಮಾರ್ಕೆಟ್ ಆಗಿರುವ ಬನ್ನೇರುಘಟ್ಟದಲ್ಲಿ ನಿರ್ಮಾಣವಾಗಲಿದೆ. ಈ ಯೋಜನೆಯಿಂದ ದಕ್ಷಿಣ ಬೆಂಗಳೂರಿನಲ್ಲಿ ಕಂಪನಿಯ ಹೆಸರು ಇನ್ನಷ್ಟು ವಿಸ್ತರಗೊಳ್ಳಲಿದೆ ಎಂದು ಸಿಂಗಲ್ ಅಭಿಪ್ರಾಯ ಪಟ್ಟಿದ್ದಾರೆ.

'ಈ ಯೋಜನೆಯು ನಮ್ಮ ಕಂಪನಿಯ ವ್ಯಾಪಾರ ಅಭಿವೃದ್ಧಿಯನ್ನು ಹೆಚ್ಚಿಸಲಿದೆ. ನಮ್ಮ ವ್ಯವಹಾರ ಸಾಮರ್ಥ್ಯವು ಪ್ರಸ್ತುತ ವರ್ಷಕ್ಕೆ ₹ 2,800 ಕೋಟಿಗಿಂತ ಹೆಚ್ಚಿದೆ' ಎಂದು ಸಿಂಗಲ್ ಮಾಹಿತಿ ನೀಡಿದ್ದಾರೆ.
ಲಾಲ್‌ಭಾಯ್ ಗ್ರೂಪ್‌ನ ಭಾಗವಾಗಿರುವ ಅರವಿಂದ್ ಸ್ಮಾರ್ಟ್‌ಸ್ಪೇಸ್ ಅನ್ನು 2008 ರಲ್ಲಿ ಸ್ಥಾಪಿಸಲಾಯಿತು. ಇದು ಅಹಮದಾಬಾದ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.
ಅಹಮದಾಬಾದ್, ಗಾಂಧಿನಗರ, ಬೆಂಗಳೂರು ಮತ್ತು ಪುಣೆಯಾದ್ಯಂತ ಸುಮಾರು 60 ಮಿಲಿಯನ್ ಚದರ ಅಡಿ ರಿಯಲ್ ಎಸ್ಟೇಟ್ ಯೋಜನೆಗಳನ್ನು ಹೊಂದಿದೆ.

ಬನ್ನೇರುಘಟ್ಟವು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಮಾರುಕಟ್ಟೆಯಾಗಿದೆ. ಇದು ಬನ್ನೇರುಘಟ್ಟ ಮುಖ್ಯ ರಸ್ತೆ, ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಐಟಿ ಕಂಪನಿಗೆ ಅತ್ಯುತ್ತಮ ಸಂಪರ್ಕವನ್ನು ಹೊಂದಿದೆ.
ಬನ್ನೇರುಘಟ್ಟ ರಸ್ತೆಯಲ್ಲಿ ಹಲವಾರು ಐಟಿ ಕಂಪನಿಗಳು ಮತ್ತು ಟೆಕ್ ಪಾರ್ಕ್‌ಗಳು ಕಾರ್ಯನಿರ್ವಹಿಸುತ್ತವೆ.
ಸುಂದರವಾದ ತಾಣಗಳಾದ ಎಂಎಂ ಹಿಲ್ಸ್, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಸೇಂಟ್ ಮಾರ್ಕ್ಸ್ ಕ್ಯಾಥೆಡ್ರಲ್, ಪರ್ಲ್ ವ್ಯಾಲಿ, ಇಸ್ಕಾನ್ ದೇವಸ್ಥಾನ, ಮೀನಾಕ್ಷಿ ಮಾಲ್ ಸೇರಿದಂತೆ ಇತ್ಯಾದಿಗಳಿಗೆ ಹತ್ತಿರದಲ್ಲಿದೆ.












Click it and Unblock the Notifications