ಚಿಕಿತ್ಸೆ ಪಡೆಯಲು ಬೆಂಗಳೂರಿಗೆ ಬಂದ ಕೇಜ್ರಿವಾಲ್

ಬೆಂಗಳೂರು, ಮಾ.5 : ಕೆಮ್ಮು ಮತ್ತು ಮಧುಮೇಹಕ್ಕೆ ಚಿಕಿತ್ಸೆ ಪಡೆಯಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಗಳೂರಿಗೆ ಆಗಮಿಸಿದ್ದಾರೆ. ವಿಮಾನ ನಿಲ್ದಾಣದಿಂದ ಖಾಸಗಿ ಕಾರಿನಲ್ಲಿ ಜಿಂದಾಲ್‌ ಚಿಕಿತ್ಸಾ ಕೇಂದ್ರಕ್ಕೆ ತೆರಳಿದರು. ಆಪ್ ನಾಯಕ ಪೃಥ್ವಿ ರೆಡ್ಡಿ ಕೇಜ್ರಿವಾಲ್ ಅವರ ಜೊತೆಗಿದ್ದಾರೆ.

ಅರವಿಂದ್ ಕೇಜ್ರಿವಾಲ್ ಗುರುವಾರ ಮಧ್ಯಾಹ್ನ 12.30ರ ಸುಮಾರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಬೆಂಗಳೂರು ಪೊಲೀಸರು ಕೇಜ್ರಿವಾಲ್‌ ಅವರು ಜಿಂದಾಲ್‌ಗೆ ತೆರಳಲು ಸರ್ಕಾರಿ ಕಾರಿನ ವ್ಯವಸ್ಥೆಯನ್ನು ಮಾಡಿದ್ದರು.

Arvind Kejriwal

ಆದರೆ, ಸರ್ಕಾರಿ ಕಾರು ಬಳಸಲು ನಿರಾಕರಿಸಿದ ಕೇಜ್ರಿವಾಲ್ ಆಪ್ ನಾಯಕ ಪೃಥ್ವಿರೆಡ್ಡಿ ಅವರ ಕಾರಿನಲ್ಲಿ ಜಿಂದಾಲ್‌ಗೆ ತೆರಳಿದರು. ಗುರುವಾರದಿಂದ 10 ದಿನಗಳ ಕಾಲ ಕೇಜ್ರಿವಾಲ್ ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದು, ಕೆಮ್ಮು ಮತ್ತು ಮಧುಮೇಹಕ್ಕೆ ಚಿಕಿತ್ಸೆ ಪಡೆಯಲಿದ್ದಾರೆ. [ಪ್ರಕೃತಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರ್ತಾರೆ ಕೇಜ್ರಿವಾಲ್]

ಇಂದು ಪರೀಕ್ಷೆ : ಗುರುವಾರ ಮಧ್ಯಾಹ್ನ ವೈದ್ಯರು ಅರವಿಂದ್ ಕೇಜ್ರಿವಾಲ್ ಅವರಿಗೆ ವಿವಿಧ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದ ಚಿಕಿತ್ಸೆಗಳು ಆರಂಭವಾಗಲಿದೆ. ಪ್ರತಿನಿತ್ಯ ಬೆಳಗ್ಗೆ 5.30ರಿಂದ ಚಿಕಿತ್ಸೆ ಆರಂಭವಾಗಲಿದ್ದು ಸಂಜೆ 7 ಗಂಟೆಯವರೆಗೆ ಮುಂದುವರಿಯಲಿದೆ. ಮಧ್ಯೆ 4 ಗಂಟೆಗಳ ಕಾಲ ವಿಶ್ರಾಂತಿ ನೀಡಲಾಗುತ್ತದೆ. [ಕೇಜ್ರಿವಾಲ್ ಡಾಕ್ಟರ್ ಅಪಾಯಿಂಟ್ಮೆಂಟ್ ಕೇಳಿಲ್ಲವಂತೆ]

ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ಬಬಿನಾ ನೇತೃತ್ವದ ತಂಡ ಅರವಿಂದ್ ಕೇಜ್ರಿವಾಲ್ ಅವರಿಗೆ ಚಿಕಿತ್ಸೆ ನೀಡಲಿದೆ. ಕೇಜ್ರಿವಾಲ್ ಅವರ ಜೊತೆಗೆ ತಾಯಿ ಗೀತಾ ದೇವಿ ಜಿಂದಾಲ್‌ಗೆ ಆಗಮಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಕೇಜ್ರಿವಾಲ್ ಭೇಟಿ ಮಾಡಲು ಚಿಕಿತ್ಸಾ ಕೇಂದ್ರಕ್ಕೆ ಆಗಮಿಸುವಂತಿಲ್ಲ.

ತುಮಕೂರು ರಸ್ತೆಯಲ್ಲಿ ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರವಿದ್ದು, ಕೆಲವು ತಿಂಗಳ ಹಿಂದೆ ಅಣ್ಣಾ ಹಜಾರೆ ಅವರು ಇಲ್ಲಿ ಚಿಕಿತ್ಸೆ ಪಡೆದಿದ್ದರು. ಕೇಜ್ರಿವಾಲ್ ದೆಹಲಿಗೆ ಮರಳುವ ತನಕ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆಡಳಿತವನ್ನು ನೋಡಿಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+