ಗಣೇಶ ಹಬ್ಬದ ಸಂಭ್ರಮಕ್ಕೆ ಮೆರೆಗು ನೀಡಲಿರುವ ಆರ್ಟಿಸನ್ಸ್‌ ಬಜಾರ್‌

Recommended Video

      Karnataka Chitrakala Parishath : ವರ್ಣಚಿತ್ರಕಾರ ಎಬಿ ಎನ್ ಜೋಸೆಫ್ ಅವರ ಅದ್ಭುತ ಪೇಯಿಂಟಿಂಗ್

      ಬೆಂಗಳೂರು ಆಗಸ್ಟ್‌ 20, 2019: ಈ ಬಾರಿಯ ಚತುರ್ಥಿಗೆ ಇನ್ನಷ್ಟು ಮೆರಗು ತುಂಬಲು ಹಾಗೂ ದೇಶದ ಮೂಲೆ ಮೂಲೆಗಳಿಂದ ಆಗಮಿಸಲಿರುವ ಕಲಾವಿದರ ಕೈಚಳಕದ ಕಲಾಕೃತಿಗಳನ್ನು ನೋಡುವ ಮತ್ತು ಕೊಂಡುಕೊಳ್ಳುವ ಉತ್ತಮ ಅವಕಾಶವನ್ನು ಗ್ರಾಂಡ್‌ ಫ್ಲಿಯಾ ಮಾರ್ಕೆಟ್ ಹಾಗೂ ಚಿತ್ತಾರ ನಿಮ್ಮ ಮುಂದೆ ಇಡುತ್ತಿದೆ. ಇದೇ ಆಗಸ್ಟ್‌ 23 ರಿಂದ ಸೆಪ್ಟೆಂಬರ್‌ 1, 2019 ರ ವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಆರ್ಟಿಸನ್ಸ್‌ ಬಜಾರ್‌ ನ್ನು ಆಯೋಜಿಸಿದೆ.

      ನಗರದ ಮಧ್ಯಭಾಗದ ಕರಕುಶಲ ವಸ್ತುಗಳಿಗೊಸ್ಕರವೇ ಬಹಳಷ್ಟು ಪ್ರಸಿದ್ದಿಯನ್ನು ಹೊಂದಿರುವ ಚಿತ್ರಕಲಾ ಪರಿಷತ್‌ ಆವರಣದಲ್ಲಿ ಇಂತಹದೊಂದು ವಿಶಿಷ್ಟ್ಯ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಮುಂಬರುವ ಗಣೇಶ ಹಬ್ಬಕ್ಕೆ ಮನೆಯನ್ನು ವಿಭಿನ್ನವಾಗಿ ಅಲಂಕರಿಸಲು ಹಾಗೂ ಒಂದು ಸಂಪೂರ್ಣ ದಿನದ ಶಾಪಿಂಗ್‌ ನ ಅನುಭವ ಪಡೆಯಲು ಈ ಮೇಳ ಸೂಕ್ತ ಆಯ್ಕೆಯಾಗಿರಲಿದೆ.

      Artisan Bazaar during Ganesha Festival Chitrakala Parishat, Bengaluru

      ನೂರಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ನಿಮ್ಮ ಮನೆಯ ಗಾರ್ಡನ್‌ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್‌ ಲೂಮ್‌ ಸ್ಯಾರಿಯನ್ನು ಸೆಲೆಕ್ಟ್‌ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ.

      ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.

      Artisan Bazaar during Ganesha Festival Chitrakala Parishat, Bengaluru

      ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್‍ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್‍ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.

      ಆಗಸ್ಟ್‌ 23 ರಿಂದ ಸೆಪ್ಟೆಂಬರ್‌ 1 ರ ವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ.

      ಆರ್ಟಿಸನ್ಸ್‌ ಬಜಾರ್‌

      ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್

      (ಶಿವಾನಂದ ವೃತ್ತದ ಬಳಿ)

      ದಿನಾಂಕ: ಆಗಸ್ಟ್‌ 23 ರಿಂದ ಸೆಪ್ಟೆಂಬರ್‌ 1 ವರೆಗೆ

      ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+