ಬೆಂಗಳೂರಿನಲ್ಲೇ ತೆರೆದುಕೊಂಡ ಕ್ರಿಸ್ ಮಸ್ ಆಚರಣೆಯ 'ಹೊಸಲೋಕ'!

ಬೆಂಗಳೂರು, ಡಿಸೆಂಬರ್.06: ಬೆಂಗಳೂರು ಅಂದರೆ ಹಾಗೆ. ಇದೊಂದು ರಂಗಿನ ಲೋಕ. ಇಲ್ಲಿ ಎಲ್ಲ ಅಭಿರುಚಿಯ ಜನರು ಇದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಎಲ್ಲ ಹಬ್ಬಗಳನ್ನೂ ಅದ್ಧೂರಿಯಾಗಿ ವಿಜೃಂಭಣೆಯಿಂದ ಆಚರಿಸುತ್ತಾರೆ.

ಇನ್ನು, ಡಿಸೆಂಬರ್ ತಿಂಗಳು ಎಂದರೆ ಮೊದಲಿಗೆ ನೆನಪಿಗೆ ಬರುವುದೇ ಕ್ರಿಸ್ ಮಸ್ ಹಬ್ಬ. ಈ ಹಬ್ಬ ಕೇವಲ ನಮ್ಮ ದೇಶವಷ್ಟೇ ಅಲ್ಲ, ವಿಶ್ವದಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇದರ ಮಧ್ಯೆ ಕ್ರಿಸ್ ಮಸ್ ಆಚರಣೆಗಾಗಿ ಬೆಂಗಳೂರಿನಲ್ಲಿ ಹೊಸ ಪ್ರಪಂಚವೇ ತೆರೆದುಕೊಂಡಿದೆ.

ಕ್ರಿಸ್ ಮಸ್ ಪ್ರಯುಕ್ತ ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಆರ್ಟಿ ಜಾನ್ ಬಜಾರ್ ಪ್ರದರ್ಶನವನ್ನು ಉದ್ಘಾಟನೆ ಮಾಡಲಾಯಿತು. ಡಿಸೆಂಬರ್.06 ರಿಂದ ಡಿಸೆಂಬರ್.16ರವರೆಗೆ 10 ದಿನಗಳ ಕಾಲ ಪ್ರದರ್ಶನ ನಡೆಯಲಿದೆ.

Arti-jan Bazaar Exhibition In Karnataka Chitrakala Parishat

ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ನಡೆಯಲಿರುವ ಆರ್ಟಿ ಜಾನ್ ಬಜಾರ್ ಪ್ರದರ್ಶನದಲ್ಲಿ ಕ್ರಿಸ್ ಮಸ್ ಹಬ್ಬಕ್ಕೆ ಮತ್ತಷ್ಟು ರಂಗು ತುಂಬುವಂತಾ ವಸ್ತುಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಈ ಪ್ರದರ್ಶನದಲ್ಲಿ ಮಣ್ಣಿನ ದೀಪ, ಹಿತ್ತಾಳೆ ದೀಪ, ಲಕ್ಷ್ಮಿ ದೀಪ, ಗಜರಾಜ ದೀಪ, ಹೀಗೆ ಹತ್ತು ಹಲವಾರು ಬಗೆಯ ದೀಪಗಳನ್ನು ಮಾರಾಟಕ್ಕೂ ಇರಿಸಲಾಗಿತ್ತು. ದೇಶದ ಎಲ್ಲಾ ಭಾಗದ ಕರಕುಶಲ ಕರ್ಮಿಗಳು ತಯಾರಿಸಿದ ವಿಭಿನ್ನ ಬಗೆಯ ದೀಪಗಳನ್ನು ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ.

Arti-jan Bazaar Exhibition In Karnataka Chitrakala Parishat

ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಪ್ರಮುಖ ಆಕರ್ಷಣೆಯೇ ತಹರೇವಾರಿ ದೀಪಗಳು. ಒಂದೇ ವೇದಿಕೆಯಲ್ಲಿ ವಿಭಿನ್ನ ರೀತಿಯ ತಹರೇವಾರಿ ದೀಪಗಳನ್ನು ಖರೀದಿಸಬಹುದು. ಇದರ ಜೊತೆಗೆ ಹಬ್ಬಕ್ಕೆ ಬೇಕಾಗಿರುವ ಎಲ್ಲ ರೀತಿಯ ಸಾಮಗ್ರಿಗಳನ್ನು ಕೊಂಡುಕೊಳ್ಳಬಹುದು. ಅಲಂಕಾರಿಕ ವಸ್ತುಗಳ ಜೊತೆ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ಖರೀದಿಸಬಹುದು.

Arti-jan Bazaar Exhibition In Karnataka Chitrakala Parishat

ಮಣ್ಣು, ಕಲ್ಲು, ಮರಗಳಿಂದ ತಯಾರಿಸಿದ ವಿಭಿನ್ನ ವಸ್ತುಗಳೇ ಮುಖ್ಯ ಆಕರ್ಷಣೆಯಾಗಿದ್ದವು. 100ಕ್ಕೂ ಹೆಚ್ಚು ಅಂಗಡಿಗಳಿದ್ದು, ದೇಶದ ಎಲ್ಲ ಭಾಗಗಳಿಂದ ಆಗಮಿಸಿದ ಕಲಾಕಾರರು ತಮ್ಮ ಕಲೆಯನ್ನು ಪ್ರದರ್ಶಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+