ಬೆಂಗಳೂರಿನಲ್ಲಿ ವೇದ ವಿಜ್ಞಾನ ಸಮ್ಮೇಳನ ಆರ್ಷಧಾರಾ 2013

ಬೆಂಗಳೂರು, ಡಿ. 26 : "ಧರ್ಮ ಜಾಗೃತಿ" ಸಂಸ್ಥೆಯು ಭಾರತೀಯ ಪರಂಪರೆ ವೇದಗಳಲ್ಲಿರುವ ಜ್ಞಾನ, ವಿಜ್ಞಾನ ಮತ್ತು ಪ್ರಜ್ಞಾನಗಳ ಪ್ರಚಾರ ಮತ್ತು ಪ್ರಸಾರ ಮಾಡಲು, ವಿಶೇಷವಾಗಿ ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ವೇದ ಸಂಬಂಧಿ ವಿಷಯಗಳ ಶೋಧನಾಕಾರ್ಯಗಳಲ್ಲಿ ಪಾಲ್ಗೊಳ್ಳಲೆಂದು ಎರಡು ದಿನಗಳ ರಾಷ್ಟ್ರೀಯ ವೇದ ವಿಜ್ಞಾನ ಸಮ್ಮೇಳನವನ್ನು ಆಯೋಜಿಸಿದೆ.

ಸಮಾಜೋನ್ಮುಖ ಬೆಳವಣಿಗೆಗಳನ್ನು ತರಬೇಕೆಂಬ ಉದ್ದೇಶದಿಂದ ಕಳೆದ ವರ್ಷದಂತೆ ಈ ಬಾರಿಯೂ ಡಿಸೆಂಬರ್ 28, 29 ಶನಿವಾರ ಮತ್ತು ಭಾನುವಾರದಂದು 2 ದಿನಗಳ ರಾಷ್ಟ್ರೀಯ ಮಟ್ಟದ ವೇದ ವಿಜ್ಞಾನ ಸಮ್ಮೇಳನವನ್ನು "ಮಿಥಿಕ್ ಸೊಸೈಟಿ", ನೃಪತುಂಗ ರಸ್ತೆ, ಬೆಂಗಳೂರಿನಲ್ಲಿ ಆಯೋಜನೆ ಮಾಡಿಲಾಗಿದೆ. ಈ ಕಾರ್ಯಕ್ರಮಮನ್ನು ಹರಿದ್ವಾರದ ಪತಂಜಲಿ ಯೋಗಪೀಠದ ಯೋಗಗುರು ಬಾಬಾ ರಾಮದೇವರವರು 28ರ ಬೆಳಗ್ಗೆ 9:30ಕ್ಕೆ ಉದ್ಘಾಟಿಸಲಿದ್ದಾರೆ. [ಮೋದಿ ಪ್ರಧಾನಿಯಾಗಲಿ : ಬಾಬಾ ರಾಮದೇವ್]

ಸಂತ ಗೋಷ್ಠಿಯ ಅಧ್ಯಕ್ಷತೆ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥರು ವಹಿಸಲಿದ್ದಾರೆ. ಬೇಲಿ ಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳು, ಮುಂತಾದ ಸಂತರು ಲೋಕಸಭಾ ಸದಸ್ಯರಾದ ಅನಂತಕುಮಾರ್, ದೇಶದ ವಿವಿಧ ರಾಜ್ಯಗಳಿಂದ ವೇದ ವಿದ್ವಾಂಸರು-ವಿಜ್ಞಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Arshadhara 2013 : National conference on Vedic Sciences

SVYASAದ ಉಪಕುಲಪತಿ ರಾಮಚಂದ್ರ ಭಟ್ಟ ಕೋಟೆಮನೆ, ಒರಿಸ್ಸಾ ವಿ.ವಿಯ ಉಪಕುಲಪತಿ ಪ್ರೊಫೆಸರ್ ರಾಮರತ್ನಂ, ಕರ್ನಾಟಕ ಸಂಸ್ಕೃತ ವಿ.ವಿಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ|| ಮಲ್ಲೇಪುರಂ ಜಿ. ವೆಂಕಟೇಶ್, ನಾಡಿನ ಹಿರಿಯರಾದ ಶತಾಯುಷಿ ಜಿ. ವೆಂಕಟಸುಬ್ಬಯ್ಯ, ಮಧ್ಯಪ್ರದೇಶದ MSRVVPಯ ಸಚಿವರಾದ ಡಾ|| ರೂಪಕಿಶೋರ ಶಾಸ್ತ್ರಿ, ಪ್ರೊ|| ವನಿತಾ ರಾಮಸ್ವಾಮಿ, ಸುಧಾಕರ ಶರ್ಮ ಮೊದಲಾದ ವಿದ್ವಾಂಸರು ವೈದಿಕ ವಿಚಾರಗಳ ಬಗ್ಗೆ ಪರಂಪರೆಯ ಬಗ್ಗೆ ವಿಚಾರ ಮಂಥನ, ಮಂಡನೆ ಮಾಡಲಿದ್ದಾರೆ.

ಈ ಸಮ್ಮೇಳನವನ್ನು ಬಾಲಗೋಷ್ಠಿ, ಮಹಿಳಾಗೋಷ್ಠಿ, ಸಂತ ಗೋಷ್ಠಿ, ಯುವಗೋಷ್ಠಿ, ಮಾಧ್ಯಮಗೋಷ್ಠಿ ಮತ್ತು ಜ್ಞಾನ ಪ್ರಜ್ಞಾನಗಳೆಂಬ 6 ಭಾಗಗಳಾಗಿ ವಿಭಾಗಿಸಲಾಗಿದ್ದು, ಬಾಲಕರಿಂದಲೇ ನಡೆಯುವ ಬಾಲಗೋಷ್ಠಿ, ಈ ಕಾರ್ಯಕ್ರಮದ ವಿಶೇಷ ಆಕರ್ಷಣೆ. ಜೊತೆಗೆ, ಸಮಾಜದ ಅಭಿವೃದ್ಧಿಗಾಗಿ ಅತ್ಯುಪಯುಕ್ತವಾದ ವಿಷಯಗಳ ಮಂಥನ, ಮಂಡನೆಯನ್ನು ವಿದ್ವಾಂಸರುಗಳು ಮಾಡಲಿದ್ದು ನಮಗೆಲ್ಲಾ ಜ್ಞಾನದ ರಸದೌತಣವನ್ನು ಉಣಬಡಿಸಲಿದ್ದಾರೆ.

ಭಾರತೀಯ ಸಂಸ್ಕೃತಿ ಪರಂಪರೆಯ ಬಗ್ಗೆ ತಿಳಿಯಲು ಸಾರ್ವಜನಿಕರಿಗೆ ಇದೊಂದು ಸದವಕಾಶ. ಎಲ್ಲರಿಗೂ ಮುಕ್ತ ಪ್ರವೇಶಾವಕಾಶ. ಕಳೆದ ಬಾರಿಯ ಆರ್ಷಧಾರಾದ ಪರಿಚಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+