ಅಪೊಲೊ ಆಸ್ಪತ್ರೆಯಿಂದ ಮನೆ ಮನೆಗೆ ಕೋವಿಡ್-19 ಲಸಿಕೆ

ಬೆಂಗಳೂರು, ಏಪ್ರಿಲ್ 16: ಬೆಂಗಳೂರಿನಾದ್ಯಂತ ಇರುವ ಅಪಾರ್ಟ್ ಮೆಂಟ್ ನಿವಾಸಿಗಳ ಬಾಗಿಲಿಗೆ ಬಂದು ಕೋವಿಡ್-19 ಲಸಿಕೆ ನೀಡುವ ಕಾರ್ಯಕ್ರಮವನ್ನು ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ ಹಮ್ಮಿಕೊಂಡಿದೆ.

ಇದರ ಮೊದಲ ಭಾಗವಾಗಿ ಅಪೊಲೊ ಕ್ರೆಡಲ್ ನಗರದ ಅತಿದೊಡ್ಡ ಅಪಾರ್ಟ್ಮೆಂಟ್ ಸಂಕೀರ್ಣಗಳಾದ ಪ್ರೆಸ್ಟೀಜ್ ಶಾಂತಿ ನಿಕೇತನ ಮತ್ತು ಸ್ಟರ್ಲಿಂಗ್ ಶಾಲೋಮ್‌ನ ರೆಸಿಡೆಂಟ್ ವೆಲ್ಫೇರ್ ಅಸೋಸಿಯೇಷನ್‌ಗಳೊಂದಿಗೆ ಕೈ ಜೋಡಿಸಿ, ಯಶಸ್ವಿಯಾಗಿ 230 ಕ್ಕೂ ಹೆಚ್ಚು ಫಲಾನುಭವಿಗಳೊಂದಿಗೆ, ತನ್ನ ಮೊದಲ ಲಸಿಕೆಯ ಹಂತವನ್ನು ಪೂರ್ಣಗೊಳಿಸಿದೆ.

ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ, ಏಪ್ರಿಲ್ 21, 2021 ರವರೆಗೆ ತನ್ನ ಎರಡನೆಯ ಹಂತದಲ್ಲಿ ನಗರದಾದ್ಯಂತ ಪ್ರಾರಂಭಿಸಲಿದೆ, ಈ ಸೇವೆಯು ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದ ಸಾರ್ವಜನಿಕ ಹಿತಾಸಕ್ತಿಗಾಗಿ ಆರಂಭಿಸಲಾಗಿದೆ.

Apollo Cradle & Children’s Hospital takes COVID-19 vaccination to doorsteps of apartments across Bengaluru

ಅಪೊಲೊ ಕ್ರೆಡಲ್ ಮತ್ತು ಮಕ್ಕಳ ಆಸ್ಪತ್ರೆ ಸಿಒಒ ಅನುಭವ್ ಪ್ರಶಾಂತ್ ಮಾತನಾಡಿ, "ಕೋವಿಡ್-19 ಲಸಿಕೆಯ ಆಯಾ ಸ್ಥಳದಲ್ಲಿ ಇರುವ ಬೆಂಗಳೂರಿನ ಅಪಾರ್ಟ್ಮೆಂಟ್ ಸಂಘಗಳು ಮತ್ತು ನಿವಾಸಿ ಕಲ್ಯಾಣ ಸಂಘಗಳೊಂದಿಗೆ (ಆರ್ ಡಬ್ಲ್ಯೂಎ) ಆಡಳಿತದಲ್ಲೇ ಈ ಯೋಜನೆ ನಿರ್ವಹಿಸಲು ನಾವು ಸಂತೋಷಪಡುತ್ತೇವೆ. ಕರ್ನಾಟಕದಲ್ಲಿ, 60 ವರ್ಷಕ್ಕಿಂತ ಮೇಲ್ಪಟ್ಟ ಅಂದಾಜು 50 ಲಕ್ಷ ಜನರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 14 ಲಕ್ಷ ಜನರು ಮತ್ತು ಕೊಮೊರ್ಬಿಡಿಟಿಗಳನ್ನು ಹೊಂದಿದ್ದಾರೆ. ಈ ರೀತಿಯ ಉಪಕ್ರಮವು ಲಸಿಕೆ ನೀಡಿಕೆಯ ನಿರ್ವಹಣೆಯನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ''ಎಂದರು.

Apollo Cradle & Children’s Hospital takes COVID-19 vaccination to doorsteps of apartments across Bengaluru

ವೈದ್ಯಕೀಯ ಸೇವೆಗಳ ನಿರ್ದೇಶಕ ಡಾ. ಅಜಯ್ ಗಂಗೋಲಿ, ಮಾತನಾಡಿ , ''70 ವರ್ಷಗಳಿಗಿಂತ ಹೆಚ್ಚಿನ ಜನರಿಗೆ ಸೇವೆಯನ್ನು ನೀಡುತ್ತಿದ್ದು, ವೇಗವಾಗಿ ಹರಡುತ್ತಿರುವ ಈ ಸಾಂಕ್ರಾಮಿಕ ಖಾಯಿಲೆಗೆ ಲಸಿಕೆ ಪಡೆಯಲು ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವವರಿಗೆ ಮತ್ತು ಹೆಚ್ಚು ಸಂಚಾರ ಮಾಡದ ದುರ್ಬಲ, ಅಸಹಾಯಕರಿಗೆ ಈ ಯೋಜನೆ ಅನುಕೂಲವಾಗಲಿದೆ"ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+