ಕಾಲಿಗೆ ಬಿದ್ದರೂ ಚಿಕಿತ್ಸೆ ನೀಡಲಿಲ್ಲ: ಆಸ್ಪತ್ರೆಯಲ್ಲೇ ರೋಗಿ ಸಾವು
ಬೆಂಗಳೂರು, ಮೇ 11: ಬೆಂಗಳೂರಿನ ಅಪೋಲೋ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ಗ್ಯಾಸ್ಟಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಸತ್ಯಮ್ಮ ಎಂಬುವವರನ್ನು ಆಸ್ಪತ್ರೆ ಸಿಬ್ಬಂದಿ ಅಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕಿದ್ದು, ರೋಗಿ ಸಾವನಪ್ಪಿದ್ದಾರೆ.
ಬೆಂಗಳೂರಿನ ಜಯನಗರ 3ನೇ ಬ್ಲ್ಯಾಕ್‌ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಈ ಅವಾಂತರ ನಡೆದಿದೆ. ಸತ್ಯಮ್ಮ ಗ್ಯಾಸ್ಟಿಕ್‌ನಿಂದ ಹೊಟ್ಟೆ ನೋವಾಗಿ ಪಕ್ಕದಲ್ಲಿರುವ ಖಾಸಗಿ ಆಸ್ಪತ್ರೆಗೆಯೊಂದಕ್ಕೆ ಬಂದಿದ್ದರು. ಅಲ್ಲಿ ಅಪೋಲೋ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸೂಚಿಸಿದ್ದರು.
ಆದರೆ, ಅಪೋಲೋ ಆಸ್ಪತ್ರೆಯಲ್ಲಿ ಕೊರೊನಾ ಭೀತಿಯಿಂದ ಸತ್ಯಮ್ಮನನ್ನು ಅಡ್ಮಿಟ್ ಮಾಡಿಕೊಳ್ಳಲಿಲ್ಲ. ಆಸ್ಪತ್ರೆಗೆ ಬಂದು 1 ಗಂಟೆಯಾದರೂ ಪರೀಕ್ಷೆ ಮಾಡಲಿಲ್ಲ. ಗಂಭೀರ ಕೇಸ್‌ಗಳನ್ನು ಅಡ್ಮಿಟ್ ಮಾಡಿಕೊಳ್ಳುತ್ತಿಲ್ಲ. ಸಿಬ್ಬಂದಿ ಕಾಲಿಗೆ ಬಿದ್ದರೂ ಚಿಕಿತ್ಸೆ ನೀಡಲಿಲ್ಲ ಎಂದು ಸತ್ಯಮ್ಮ ಕಡೆಯವರು ಆರೋಪ ಮಾಡಿದ್ದಾರೆ.

ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ, ಆಸ್ಪತ್ರೆಯ ಆವರಣದಲ್ಲೇ ಸತ್ಯಮ್ಮ ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಆಸ್ಪತ್ರೆ ಹೋಗುವಾಗ ಆರಾಮಾಗಿ ನಡೆದುಕೊಂಡು ಹೋಗಿದ್ದ ಸತ್ಯಮ್ಮ ಹೊಟ್ಟೆ ನೋವು ಜಾಸ್ತಿಯಾಗಿ ಮೃತಪಟ್ಟಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ಸತ್ಯಮ್ಮ ಜೀವ ಕಳೆದುಕೊಂಡಿದ್ದಾರೆ.












Click it and Unblock the Notifications