ಸೆಪ್ಟೆಂಬರ್‌ನಲ್ಲಿ ಆರು ಬೋಗಿಗಳ ಮತ್ತೊಂದು ಮೆಟ್ರೋ ಆರಂಭ
ಬೆಂಗಳೂರು, ಆಗಸ್ಟ್ 10: ಆರು ಬೋಗಿಗಳ ಮತ್ತೊಂದು ಮೆಟ್ರೋ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಸೆಪ್ಟೆಂಬರ್ ತಿಂಗಳಿನಿಂದಲೇ ಸಂಚಾರ ಆರಂಭವಾಗುವ ಎನಿರೀಕ್ಷೆಯಿದೆ.
ನಮ್ಮ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹಾಗಾಗಿ ಆರು ಬೋಗಿ ಮೆಟ್ರೋ ಸಂಚಾರವನ್ನು ಆರಂಭಿಸಲಾಗಿತ್ತು.
ಒಟ್ಟು 2019ರೊಳೆ 150 ಬೋಗಿಗಳನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದರು, ಇದೀಗ ಮತ್ತೊಂದು ಮೆಟ್ರೋಗೆ ಆರು ಬೋಗಿಗಳನ್ನು ಅಳವಡಿಸಲಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ರೈಲಿಗೆ ಸುರಕ್ಷತಾ ಆಯುಕ್ತರ ಅನುಮತಿಯ ಅಗತ್ಯವಿಲ್ಲದಿರುವುದರಿಂದ ಸೆಪ್ಟೆಂಬರ್‌ನಲ್ಲೇ ಕಾರ್ಯಾರಂಭ ಮಾಡಲಿದೆ. 1,463 ಕೋಟಿ ವೆಚ್ಚದಲ್ಲಿ 150 ಬೋಗಿಗಳನ್ನು ಬಿಇಎಂಎಲ್‌ನಿಂದ ಖರೀದಿಸಲು ಬಿಎಂಆರ್‌ಸಿಎಲ್ ಒಪ್ಪಂದ ಮಾಡಿಕೊಂಡಿತ್ತು.
ಆಗಸ್ಟ್ 3 ನೇ ವಾರದಲ್ಲೇ ಹಸ್ತಾಂತರಗೊಳ್ಳುವ ನಿರೀಕ್ಷೆ ಇದೆ. ಮೊದಲ ಆರು ಬೋಗಿಯ ರೈಲು ಬಂದಾಗ ಪರೀಕ್ಷಾರ್ಥ ಸಂಚಾರ ನಡೆಸಿ ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಪಡೆಯಲಾಗಿತ್ತು. ಮೊದಲ ಆರು ಬೀಗಿ ರೈಲಿಗೆ ಅನುಮತಿ ಪಡೆದ ನಂತರ ಮುಂದೆ ಬರುವ ಆರು ಬೋಗಿಯ ರೈಲುಗಳಿಗೆ ಅನುಮತಿ ಅಗತ್ಯವಿಲ್ಲ.
ನಾಗಸಂದ್ರ-ಯಲಚೇನಹಳ್ಳಿ ಹಾಗೂ ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಒಟ್ಟು 50 ರೈಲುಗಳು ಸಂಚಾರ ನಡೆಸುತ್ತಿವೆ. ಎಲ್ಲ ರೈಲುಗಳನ್ನು ಆರು ಬೋಗಿ ರೈಲಾಗಿ ಪರಿವರ್ತಿಸಲು 2016ರಲ್ಲೇ ಯೋಜನೆ ರೂಪಿಸಲಾಗಿತ್ತು.
ಇದು ಹಂತ ಹಂತವಾಗಿ ಸಾಕಾರಗೊಳ್ಳುತ್ತಿದೆ. 2018ರ ಫೆ.14ರಂದು ಮೊದಲ ಆರು ಬೋಗಿಗಳನ್ನು ಬಿಇಎಂಎಲ್ ಹಸ್ತಾಂತರಿಸಿತ್ತು. ಈ ರೈಲಿಗೆ ಸುಂಆರು 80 ತಂತ್ರಾಂಶಗಳನ್ನು ಅಳವಡಿಸಿ ನಾಲ್ಕು ತಿಂಗಳ ಕಾಲ ಪರೀಕ್ಷೆ ಒಳಪಡಿಸಲಾಗಿತ್ತು.












Click it and Unblock the Notifications