ಕೊರೊನಾ ವೈರಸ್ ಕಥೆ; ಫ್ರಾನ್ಸ್ ನಿಂದ ಸೋಂಕು ಹೊತ್ತು ತಂದಳಾ ಮಹಿಳೆ?
ಬೆಂಗಳೂರು, ಮಾರ್ಚ್.12: ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿರುವ ಕೊರೊನಾ ವೈರಸ್ ಬೆಂಗಳೂರಿನಲ್ಲೂ ಭೀತಿ ಹುಟ್ಟಿಸುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಈಗಾಗಲೇ ಐವರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿರುವುದು ಸ್ಪಷ್ಟವಾಗಿದೆ.
ಇದರ ಮಧ್ಯೆ ಫ್ರಾನ್ಸ್ ನಿಂದ ಬೆಂಗಳೂರಿಗೆ ಆಗಮಿಸಿದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬೆಂಗಳೂರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಗೆ ಒಳಪಡಿಸಿದಾಗ ಮಹಿಳೆಯಲ್ಲಿ ಸೋಂಕಿತ ಲಕ್ಷಣಗಳು ಕಂಡು ಬಂದಿವೆ.
ಮಹಿಳೆಯು ಕೊರೊನಾ ವೈರಸ್ ಗೆ ತುತ್ತಾಗಿರುವ ಶಂಕೆ ಹಿನ್ನೆಲೆಯಲ್ಲಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಮಹಿಳೆಯನ್ನು ರವಾನೆ ಮಾಡಲಾಯಿತು. ಈಗಾಗಲೇ ಮಹಿಳೆಯ ರಕ್ತದ ಮಾದರಿ ಮತ್ತು ಗಂಟಲಿನ ದ್ರವ್ಯವನ್ನು ಸಂಗ್ರಹಿಸಿ ತಪಸಾಣೆಗೆ ಕಳುಹಿಸಲಾಗಿದೆ.

ವರದಿ ಬಂದ ನಂತರವಷ್ಟೇ ಸ್ಪಷ್ಟ ಮಾಹಿತಿ:
ಮಹಿಳೆಯ ರಕ್ತದ ಮಾದರಿ ಮತ್ತು ಗಂಟಲಿನ ದ್ರವ್ಯವನ್ನು ಲ್ಯಾಬೋರೇಟರಿಗೆ ರವಾನೆ ಮಾಡಲಾಗಿದ್ದು, ಅಂತಿಮ ವರದಿ ಬಂದ ನಂತರವಷ್ಟೇ ಮಹಿಳೆಯಲ್ಲಿ ಕೊರೊನಾ ವೈರಸ್ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.












Click it and Unblock the Notifications