ಸರ್ಕಾರಿ ಸೀರೆ ಬೇಡವೆಂದ ಅಂಗನವಾಡಿ ಕಾರ್ಯಕರ್ತೆಯರು

ಬೆಂಗಳೂರು, ಮೇ 10: ಪ್ರಧಾನ ಮಂತ್ರಿಗಳ ಮಹತ್ವಕಾಂಕ್ಷೆಯ ಪೋಷಣ್‌ ಅಭಿಯಾನದ ಬರಹವಿರುವ ಸೀರೆಯನ್ನು ಧರಿಸಲು ಕರ್ನಾಟಕದ ಅಂಗನವಾಡಿ ಕಾರ್ಯಕರ್ತೆಯರು ನಿರಾಕರಿಸಿದ್ದಾರೆ.

ಸುಮಾರು 10 ಕೋಟಿ ಮೌಲ್ಯದ 2.5 ಲಕ್ಷ ಸೀರೆಗಳು ರಾಜ್ಯಕ್ಕೆ ಬಂದಿವೆ. ಈ ಸೀರೆಗಳನ್ನು ಸುಮಾರು 1 ಲಕ್ಷ ಮಂದಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮವಸ್ತ್ರವಾಗಿ ವಿತರಿಸಬೇಕಿತ್ತು. ಪೋಷಣ್‌ ಅಭಿಯಾನದ ಮುಂಚೂಣಿ ಪ್ರಚಾರಕರಾಗಿರುವ ಕಾರ್ಯಕರ್ತೆಯರು ಗರ್ಭಿಣಿಯರು, ಪೌಷ್ಟಿಕ ಆಹಾರ ಮಕ್ಕಳ ಬಗೆಗಿನ ಅಭಿಯಾನದಲ್ಲಿ ಸಾಕಷ್ಟು ಶ್ರಮವಹಿಸುತ್ತಾ ಬಂದಿದ್ದಾರೆ.

ಪೋಷಣ್‌ ಅಭಿಯಾನದ ಭಾಗವಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು 62,580 ಕೇಂದ್ರಗಳು ಹಾಗೂ 3,331 ಚಿಕ್ಕ ಕೇಂದ್ರಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಂದ ಸೀರೆ ಪಡೆಯಬೇಕಿತ್ತು.

Anganwadi Workers Say No to Government Saree

ಸೀರೆಗೆ ಬೆಲೆ ಎಷ್ಟು?; ಪ್ರತಿ ಸೀರೆಗೆ 385.7 ರುಪಾಯಿಗಳ ಖರೀದಿ ಬೆಲೆಯೊಂದಿಗೆ ಬಣ್ಣ, ಗುಣಮಟ್ಟ ಮತ್ತು ವಿನ್ಯಾಸವನ್ನು ಅಂತಿಮಗೊಳಿಸಿದ ನಂತರ ಟೆಂಡರ್‌ ಕರೆದು 7 ತಿಂಗಳ ಹಿಂದೆ ಸರ್ಕಾರ 2.5 ಲಕ್ಷಕ್ಕೂ ಹೆಚ್ಚು ಸೀರೆಗಳನ್ನು ಖರೀದಿಸಿತ್ತು. ಆದರೆ ಸೀರೆಯ ಅಂಚಿನಲ್ಲಿ ಪೋಷಣ್‌ ಅಭಿಯಾನ ಎಂಬ ಪದಗಳನ್ನು ದಪ್ಪವಾಗಿ ಮುದ್ರಿಸಿರುವುದರಿಂದ ಅವರು ಈ ಸೀರೆಗಳನ್ನು ಪಡೆಯಲು ನಿರಾಕರಿಸಿದ್ದಾರೆ.

ಸೀರೆಯೂ ವಿಚಿತ್ರ ಹೂವಿನ ಚಿತ್ರವನ್ನು ಹೊಂದಿದ್ದು, ಸರ್ಕಾರಿ ಬ್ಯಾನರ್‌ ಮಾದರಿಯನ್ನು ಒಳಗೊಂಡಿದೆ. ಆದ್ದರಿಂದ ಸೀರೆಯನ್ನು ನಿರಾಕರಿಸಿದ್ದೇವೆ ಎಂದು ಕಾರ್ಯಯರ್ತೆಯರೊಬ್ಬರು ತಿಳಿಸಿದ್ದಾರೆ. ಅದ್ಯಾಗೂ ಕಾರ್ಯಕರ್ತೆಯರನ್ನು ಮನವೊಲಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

Anganwadi Workers Say No to Government Saree

"ಸುಮಾರು 12ರಿಂದ 13 ಜಿಲ್ಲೆಗಳ ನೌಕರರಿಗೆ ಈ ಸೀರೆಗಳನ್ನು ವಿತರಿಸಲಾಗಿದೆ" ಎಂದು ಆಶಾ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್‌ ಯಾದಗಿರಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕರ್ನಾಟಕ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್‌. ವರಲಕ್ಷ್ಮೀ, "ನಾವು ಹೆಸರು ಇರುವ ಸೀರೆಗಳನ್ನು ಧರಿಸುವುದಿಲ್ಲ. ಅದರ ವಿನ್ಯಾಸವನ್ನು ನೋಡಿ ನಂತರ ಅವುಗಳನ್ನು ತಕ್ಷಣವೇ ಕಚೇರಿಗೆ ಹಿಂದುರುಗಿಸಿದ್ದೇವೆ. ಅವರು ಅಂಗನವಾಡಿ ಕಾರ್ಯಕತೆಯರನ್ನು ಜಾಹೀರಾತು ಪದರ್ಶನದ ಗೋಡೆಗಳಂತೆ ಭಾವಿಸಿದ್ದಾರೆ. ಅವರು ನಮಗೆ ಸರಳವಾದ ಸೀರೆಗಳನ್ನು ಕೊಟ್ಟರೆ ಹಾಕುತ್ತೇವೆ ಇಲ್ಲದಿದ್ದರೆ ಇಲ್ಲ" ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಮಾತನಾಡಿ, "ಸರಕಾರವು ಈಗಾಗಲೇ ಬಣ್ಣ ಮತ್ತು ವಿನ್ಯಾಸವನ್ನು ಅಂತಿಮಗೊಳಿಸಿದ ನಂತರ ಅವುಗಳನ್ನು ಖರೀದಿಸಿದೆ. ಈಗ ಯೋಜಿಸಿದಂತೆ ಅವುಗಳನ್ನು ಬಳಸದೆ ಬೇರೆ ಮಾರ್ಗವಿಲ್ಲ" ಎಂದು ಹೇಳಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಇಲಾಖೆಯ ಕಾರ್ಯದರ್ಶಿ ಎಂ. ಟಿ. ರಾಜು, "ಅನೇಕ ಅಂಗನವಾಡಿ ಕೇಂದ್ರಗಳಿಗೆ ಸೀರೆಗಳನ್ನು ತಲುಪಿಸಲಾಗಿತ್ತು. ಆದರೆ ಕಾರ್ಯಕರ್ತೆಯರು ಸ್ವೀಕರಿಸಲು ನಿರಾಕರಿಸಿದ್ದಾರೆ. ಅಂಗನವಾಡಿ ನೌಕರರ ಜೊತೆ ಮಾತನಾಡಿ ಸೌಹಾರ್ದಯುತವಾಗಿ ಪರಿಹಾರ ಕಂಡುಕೊಳ್ಳುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೀರೆಗಳ ವಿಚಾರದಲ್ಲಿ ದಕ್ಷಿಣ ಕನ್ನಡದಲ್ಲೂ ಸಹ ಅಕ್ಷೇಪ ವ್ಯಕ್ತವಾಗಿದೆ. ಜಿಲ್ಲೆಯ ಅಂಗನವಾಡಿ ನೌಕರರು ಸೀರೆಯನ್ನು ಧರಿಸಲು ನಿರಾಕರಿದ್ದಾರೆ. ಈ ಹಿನ್ನೆಲೆಯಲ್ಲಿ ಗೋದಾಮಿನಲ್ಲೇ ಸೀರೆಗಳು ಉಳಿದಿವೆ.

ಪೋಷಣ ಅಭಿಯಾನದ ಮಾಹಿತಿ; ತಾಯಿ ಮತ್ತು ಮಗುವಿಗೆ 1000 ದಿನಗಳವರೆಗೆ ಪೌಷ್ಠಿಕ ಆಹಾರ ಸಿಗುವಂತೆ ಮಾಡುವುದು ಈ ಅಭಿಯಾನದ ಉದ್ದೇಶವಾಗಿದೆ. ಅಂಗನವಾಡಿ ನೌಕರರಿಗೆ ತಲಾ ಎರಡು ಸೀರೆಗಳಂತೆ ವಿತರಿಸಲು ಈ ಸೀರೆಗಳನ್ನು ಖರೀದಿಸಲಾಗಿದೆ. ಈಗ ಅವು ಗೋದಾಮುಗಳಲ್ಲೇ ಉಳಿಯುವಂತಾಗಿದೆ.
ಸೀರೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಅಂಗನವಾಡಿ ನೌಕರರು ಸರ್ಕಾರಕ್ಕೆ ಪತ್ರ ಬರೆದು 7 ತಿಂಗಳಾದರೂ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ಬಗ್ಗೆ ಮಾತನಾಡಿರುವ ರಾಜ್ಯ ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷೆ ಜಯಲಕ್ಷ್ಮೀ ಬಿ., "ಕಷ್ಟಪಟ್ಟು ದುಡಿಯುವ ನೌಕರರಿಗೆ ಉತ್ತಮ ಸೀರೆಗಳನ್ನು ಕೊಡಬೇಕು ಇಲ್ಲದಿದ್ದರೆ ಕೊಡಬಾರದು" ಎಂದು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+