ಮಾತೃಪೂರ್ಣ ಯೋಜನೆ ಆಹಾರ, ಬಾಣಂತಿಯರಿಗೆ ನೇರವಾಗಿ ತಲುಪಿಸಲು ಒತ್ತಾಯ
ಬೆಂಗಳೂರು, ಡಿಸೆಂಬರ್ 05 : ರಾಜ್ಯ ಸರ್ಕಾರ ಮಾತೃಪೂರ್ಣ ಯೋಜನೆಯಲ್ಲಿ ಪೂರೈಕೆಯಾಗುವ ಆಹಾರವನ್ನು ಬಾಣಂತಿಯರ ಮನೆಗೆ ಪೂರೈಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
18 ಸಾವಿರ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾವಿರಾರು ಅಂಗನವಾಡಿ ಕಾರ್ಯಕರ್ತರು ಸಿಟಿ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ನಾಗರತ್ನಮ್ಮ ಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದ್ದಾರೆ. ಮನವಿ ಸ್ವೀಕರಿಸಿ ಮಾತನಾಡಿದ ಜಂಟಿ ನಿರ್ದೇಶಕಿ ನಾಗರತ್ನಮ್ಮ, ಮಾತೃ ಪೂರ್ಣ ಅತ್ಯಂತ ಮಹತ್ವ ಯೋಜನೆ. ಇದಕ್ಕೆ ಸಾಕಷ್ಟು ತೊಂದರೆ ಇದೆ ಎಂದು ಮನವಿ ಮಾಡಿದ್ದಾರೆ. ಸರ್ಕಾರ ಮಟ್ಟದಲ್ಲಿ ಚರ್ಚೆ ಮಾಡಿದ ನಂತರ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಡಿ. 17 ರವರೆಗೆ ಗಡುವು ನೀಡಿದ್ದು, ಬೇಡಿಕೆ ಪೂರೈಸದಿದ್ದರೆ ಮತ್ತೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ಮಾತೃ ಪೂರ್ಣ ಯೋಜನೆಗೆ ಪೂರೈಕೆ ಆಗುವ ಆಹಾರವನ್ನು ಬಾಣಂತಿಯರ ಮನೆಗೆ ಪೂರೈಸುವಂತೆ ಅಂಗನವಾಡಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.












Click it and Unblock the Notifications