ಬ್ಲೇಡ್‌ನಿಂದ ಬಾಲಕನ ಕತ್ತುಕೊಯ್ದ ಅಂಗನವಾಡಿ ಶಿಕ್ಷಕಿ
ಬೆಂಗಳೂರು, ಜು.4: ಕ್ಷುಲ್ಲಕ ಕಾರಣಕ್ಕೆ ಅಂಗನವಾಡಿ ಶಿಕ್ಷಕಿ ಬ್ಲೇಡ್‌ನಿಂದ ಬಾಲಕನ ಕತ್ತು ಕೊಯ್ದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕಸಘಟ್ಟ ಗ್ರಾಮದಲ್ಲಿ ನಡೆದಿದೆ.
ಅಂಗನವಾಡಿ ಮಕ್ಕಳ ಮನಸ್ಥಿತಿ ಹೇಗಿರುತ್ತೆ ಎಂದು ಎಲ್ಲರಿಗೂ ತಿಳಿದೇ ಇದೆ, ಆ ಮುಗ್ಧ ಮಕ್ಕಳು ಆಟ, ನಲಿದಾಟದ ಜತೆಗೆ ಜಗಳ, ಹೊಡೆದಾಟವನ್ನೂ ಮಾಡುತ್ತವೆ, ಮಕ್ಕಳೆಂದ ಮೇಲೆ ಇದೆಲ್ಲಾ ಸಹಜ ಪ್ರಕ್ರಿಯೆಯಾಗಿದೆ, ಆದರೆ ಇದೇ ಜಗಳವನ್ನು ಗಂಭೀರವಾಗಿ ತೆಗೆದುಕೊಂಡು ಮಗುವಿನ ಮೇಲೆ ದಾಳಿ ನಡೆಸಿರುವ ಮನಕಲಕುವ ಘಟನೆ ನಡೆದಿದೆ.

ಅಂಗನವಾಡಿ ಶಿಕ್ಷಕಿ ಮುನಿರತ್ನಮ್ಮ ಮೊಮ್ಮಗ ಹಾಗೂ ಬಾಲಕ ಪೃಥ್ವಿರಾಜ್ ಮಧ್ಯದಲ್ಲಿ ಜಗಳವಾಗಿದೆ ಆ ಇಬ್ಬರು ಮಕ್ಕಳನ್ನು ಮನವೊಲಿಸಲು ಯತ್ನಿಸಿದ್ದಾರೆ ಅದು ಯಶಸ್ವಿಯಾಗಿತ್ತು, ಮರುದಿನವೂ ಈ ಘಟನೆ ಅತಿರೇಕಕ್ಕೇರಿದಾಗ ಶಿಕ್ಷಕಿ ಕೋಪದಲ್ಲಿ ಬ್ಲೇಡಿನಿಂದ ಕತ್ತು ಕೊಯ್ದಿದ್ದಾರೆ. ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications