ಅನಂತಮೂರ್ತಿ ಕೃತಿ ಬಗ್ಗೆ ನಿಮಗನಿಸಿದ್ದು ಬರೆದು ಕಳಿಸಿ
ಬೆಂಗಳೂರು, ಜೂ.9: ಇವತ್ತಿನ ಹೊಸಕಾಲದ ಯುವಮನಸ್ಸುಗಳ ಓದು, ಗ್ರಹಿಕೆ, ವಿಮರ್ಶೆ, ಒಳನೋಟಗಳನ್ನು ಒಳಗೊಂಡ ಸಂಚಿಕೆಗಳನ್ನು ಹೊರತರುವ ಮೊದಲ ಪ್ರಯತ್ನವಾಗಿ 'ಅನೇಕ' , ಕನ್ನಡದ ಬಹುಮುಖ್ಯ ಬರಹಗಾರರಾದ ಯು.ಆರ್. ಅನಂತಮೂರ್ತಿಯವರಿಗೆ ನುಡಿಕಾಣಿಕೆಯೊಂದನ್ನು ಸಲ್ಲಿಸಲು ಪ್ರಯತ್ನಿಸುತ್ತಿದೆ.
ಇವತ್ತಿನ ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಯು.ಆರ್. ಅನಂತಮೂರ್ತಿ ಅವರಿಗೆ ನೈತಿಕವಾದ ಬೆಂಬಲವೊಂದನ್ನು ಸೂಚಿಸುವುದೇ ಇದರ ಮುಖ್ಯ ಉದ್ದೇಶವೂ ಹೌದು. ಯು.ಆರ್. ಅನಂತಮೂರ್ತಿ ಅವರ ಕೃತಿಗಳ ಓದು/ವಿಮರ್ಶೆ, ರಾಜಕೀಯ ಮತ್ತು ಸಾಮಾಜಿಕ ನಿಲುವುಗಳು ಕುರಿತಂತೆ ಆಸಕ್ತರು ಬರಹಗಳನ್ನು ನೀಡಬಹುದು. ಆಯ್ದ ಬರಹಗಳು 'ಸಂಚಿಕೆ'ಯಲ್ಲಿ ಪ್ರಕಟವಾಗುತ್ತವೆ. ಇದು ಕಿರಿಯರು ಮಾಡುತ್ತಿರುವ ಅಭಿನಂದನಾ ಗ್ರಂಥವಾಗಿದೆ.[ಅನಂತಮೂರ್ತಿಗೆ ಪತ್ರ :ಯಾರು ನಿಜವಾದ ಫ್ಯಾಸಿಸ್ಟ್ ?]

* ಬರಹಕ್ಕೆ ಯಾವುದೇ ಮಿತಿ ಹಾಗೂ ನಿರ್ಬಂಧಗಳಿಲ್ಲ.
* ಪೂರ್ವಾಗ್ರಹಪೀಡಿತವಾಗಿರಬಾರದೆಂಬುದು ನಮ್ಮ ವಿನಂತಿ.
* ಬರಹದೊಂದಿಗೆ ನಿಮ್ಮ ಪೂರ್ತಿ ವಿಳಾಸ ಮತ್ತು ಸಣ್ಣ ಪರಿಚಯ ಇರಲಿ.
* 23 ನೇ ಜೂನ್ 2014 ರ ಒಳಗೆ ತಲುಪಲಿ.
* ಯುಆರ್ ಅನಂತಮೂರ್ತಿ ಅವರ ಕುರಿತ ಕವಿತೆ , ಅವರ ಸಾಹಿತ್ಯ ಕುರಿತ ಟಿಪ್ಪಣಿ, ವಿಮರ್ಶೆ ಹಾಗೂ ಅವರ ಸಾಮಾಜಿಕ ಮತ್ತು ರಾಜಕೀಯ ನಿಲುವುಗಳ ಕುರಿತ ಬರಹಗಳನ್ನು ಕಳಿಸಬಹುದು.
* ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ರಾಜೇಂದ್ರ ಪ್ರಸಾದ್ ಫೇಸ್ ಬುಕ್ ಐಡಿ
* ನಿಮ್ಮ ಲೇಖನಗಳನ್ನು ಇಮೇಲ್ ಮಾಡಿ : [email protected]
* ವಿಳಾಸ : ರಾಜೇಂದ್ರ ಪ್ರಸಾದ್, ನೋ.72 , ಭೂಮಿಗೀತ, 6 ನೇ ತಿರುವು , ಉದಯಗಿರಿ , ಮಂಡ್ಯ -571 401











Click it and Unblock the Notifications