• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

59 ಕ್ಕೆ ಕಂಟಕ: ಅನಂತ್ ತಂದೆ ನುಡಿದಿದ್ದ ಭವಿಷ್ಯ ನಿಜವಾಯ್ತು!

|
   Ananth Kumar Demise : ಕೊನೆಗೂ ಅನಂತ್ ಕುಮಾರ್ ಬಗ್ಗೆ ತಮ್ಮ ತಂದೆ ನುಡಿದ ಭವಿಷ್ಯ ನಿಜವಾಯ್ತು

   ಬೆಂಗಳೂರು, ನವೆಂಬರ್ 13: 'ನಿನಗೆ ರಾಜಯೋಗವಿದೆ, ಆದರೆ 59 ನೇ ವರ್ಷಕ್ಕೆ ನಿನಗೆ ಕಂಟಕವೊಂದು ಬಂದೆರಗುತ್ತದೆ. ಅದರಿಂದ ಪಾರಾದರೆ ನೀನು ದೀರ್ಘಕಾಲ ಬದುಕುತ್ತೀಯಾ' ಎಂದು ಅನಂತ್ ಕುಮಾರ್ ಅವರಿಗೆ ಅವರ ತಂದೆ ನಾರಾಯಣ ಶಾಸ್ತ್ರಿಗಳೇ ಹೇಳಿದ್ದರು.

   ಅನಂತ್ ಅಂತಿಮ ಯಾತ್ರೆ LIVE: ಚಿತೆಗೆ ಅಗ್ನಿ ಸ್ಪರ್ಶ ಮಾಡಿದ ಸಹೋದರ

   ನಮ್ಮ ತಂದೆ ನನ್ನ ಬಗ್ಗೆ ಈ ರೀತಿ ಭವಿಷ್ಯ ನುಡಿದಿದ್ದಾರೆ ಎಂದು ಆಗಾಗ ಆಪ್ತರ ಬಳಿ ಅನಂತ್ ಕುಮಾರ್ ಅವರೇ ಹೇಳುತ್ತಿದ್ದರು. ಆದರೆ ಕಾಕತಾಳೀಯವೋ ಏನೋ, ಅವರ ತಂದೆ ನುಡಿದ ಭವಿಷ್ಯವೇ ನಿಜವಾದಂತಾಗಿದೆ. ಸರಿಯಾಗಿ 59 ನೇ ವರ್ಷಕ್ಕೇ ಅವರು ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಅಸುನೀಗಿದ್ದಾರೆ.

   ಅನಂತ್ ಕುಮಾರ್ ಅಂತ್ಯ ಸಂಸ್ಕಾರ ಯಾರು ನೆರವೇರಿಸಲಿದ್ದಾರೆ?

   ರೈಲ್ವೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ನಾರಾಯಣ ಶಾಸ್ತ್ರಿ ಅವರು ಪ್ರವೃತ್ತಿಯಲ್ಲಿ ಜ್ಯೋತಿಷ್ಯ ಹೇಳುವ ಅಭ್ಯಾಸ ಇಟ್ಟುಕೊಂಡಿದ್ದರು. ಶಾಸ್ತ್ರಿ ಮನೆತನವಾದ್ದರಿಂದ ಅವರ ಕುಟುಂಬದಲ್ಲಿ ಹಲವರು ಜ್ಯೋತಿಷ್ಯ ನುಡಿಯಬಲ್ಲವರಾಗಿದ್ದರು.

   ಆದರೆ ತಂದೆ ನುಡಿದ ಭವಿಷ್ಯದಂತೆ ಅನಂತ್ ಕುಮಾರ್ ತಮ್ಮ 59 ವರ್ಷ ವಯಸ್ಸಿನಲ್ಲೇ ಅಕಾಲಿಕ ಮರಣವನ್ನಿಪ್ಪಿದ್ದು ದುರಂತವೇ ಸರಿ.

   ಅನಂತ್ ಎಂದರೆ... ಕಣ್ಣೀರುಕ್ಕಿಸುವಂತೆ ಆಪ್ತ ಸ್ನೇಹಿತ ಬರೆದ ಸಾಲುಗಳು

   ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಅವರು ಚಿಕಿತ್ಸೆ ಫಲಕಾರಿಯಾಗದೆ ನ.12 ರಂದು ಇಹಲೋಕ ತ್ಯಜಿದರು.

   English summary
   Ananth Kumar's father Narayan Shastri once predicted that, Ananth Kumar will face critical condition in his 59th year.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X