ಸಿದ್ದರಾಮಯ್ಯ ಕಾಂಗ್ರೆಸ್‌ನ ಆಮದು ರಾಜಕಾರಣಿ: ಅನಂತ ಕುಮಾರ್

ಬೆಂಗಳೂರು, ಏಪ್ರಿಲ್ 30: ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಆಮದು ರಾಜಕಾರಣಿಯಾಗಿದ್ದು, ಅದರ ಪಕ್ಷದ ರಾಷ್ಟ್ರೀಯ ನಾಯಕರೂ ಕೂಡ ಒರಿಜಿನಲ್ ಭಾರತೀಯರಲ್ಲ, ಸೋನಿಯಾ ಗಾಂಧಿ ಕೂಡ ಇಟಲಿಯಿಂದ ಆಮದು ಮಾಡಿಕೊಂಡ ಕಾಂಗ್ರೆಸ್ ಪಕ್ಷದ ನಾಯಕಿ ಎಂದು ಕೇಂದ್ರ ಸಚಿವ ಅನಂತ ಕುಮಾರ್ ಲೇವಡಿ ಮಾಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರು ಇಂಪೋರ್ಟೆಡ್, ಯಾರು‌ ನೆಲದ ಮಕ್ಕಳು ‌‌ಎಂಬುದನ್ನು ಅವರು ‌ನೆನಪಿಡಬೇಕು. ನರೇಂದ್ರ ಮೋದಿ, ಅಮಿತ್ ಶಾ, ಯಡಿಯೂರಪ್ಪ, ಅನಂತಕುಮಾರ್ ನಾವೆಲ್ಲಾ ಈ ನೆಲದ ‌ಮಕ್ಕಳು ಇದು ಯಾವುದೂ ಗೊತ್ತಿಲ್ಲದೇ ಸಿದ್ದರಾಮಯ್ಯ ಪ್ರಚಾರ ಮಾಡುತ್ತಿದ್ದಾರೆ.

Ananth Kumar criticises Siddaramaiha is imported politician

ನಮ್ಮದೊಂದು ರಾಜ್ಯ ಇದೆ, ನಮ್ಮದೊಂದು ದೇಶ ಇದೆ, ಸೋನಿಯಾ ಮತ್ತು ರಾಹುಲ್ ಗಾಂಧಿ ಯಾವ ರಾಜ್ಯಕ್ಕೆ ಸೇರಿದವರು? ಅಮಿತ್ ಶಾ ಮತ್ತು ಕುಮಾರಸ್ವಾಮಿ ಭೇಟಿ‌ ವಿಚಾರ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ಒಳ ಒಪ್ಪಂದ ಇದೆ ಸಿದ್ದರಾಮಯ್ಯ ಎಷ್ಟು ಸಲ ದೇವೇಗೌಡರ ಮನೆಗೆ ಹೋಗಿಲ್ಲ ಜೆಡಿಎಸ್ ಮತ್ತು ಕಾಂಗ್ರೆಸ್ ‌ನಡುವೆ ಒಳ ಒಪ್ಪಂದ ಮತ್ತು ಹೊರ ಒಪ್ಪಂದ ಇದೆ ಬಿಬಿಎಂಪಿ ಯಲ್ಲಿ ಹೊಂದಾಣಿಕೆ ಇಂದ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+