ಪ್ರೀತಿಯ ಕಲಾಂ ತಾತಾನಿಗೆ ನಮನ ಸಲ್ಲಿಸಿದ ಮೊಮ್ಮಕ್ಕಳು

ಬೆಂಗಳೂರು, ಜುಲೈ, 29 : ಮಕ್ಕಳೆಂದರೆ ಎಲ್ಲರಿಗೂ ಬಲು ಪ್ರೀತಿ. ಅವರೊಂದಿಗೆ ಬೆರೆತರಂತೂ ಬಿಡಿ ನಮಗೆ ಇನ್ನೊಂದು ಪ್ರಪಂಚದ ನೆನಪಾಗುವುದೇ ಇಲ್ಲಾ.. ಅಲ್ವ. ಹಿಂದೆ ಜವಾಹರಲಾಲ್ ನೆಹರು ಅವರನ್ನು ಮಕ್ಕಳು ಪ್ರೀತಿಯಿಂದ 'ಚಾಚಾ' ಎಂದು ಕರೆಯುತ್ತಿದ್ದರೆ, ಇಂದು ಅಬ್ದುಲ್ ಕಲಾಂ ರನ್ನು ಮಕ್ಕಳು ಬಹಳ ಅಕ್ಕರೆಯಿಂದ 'ತಾತಾ' ಎಂದು ಸಂಬೋಧಿಸುತ್ತಿದ್ದರು.

ಮಕ್ಕಳೊಂದಿಗೆ ಬೆರೆತೆರೆ ನಮ್ಮ ವಯೋಸಹಜ ಮನೋಭಾವಗಳು ಮರೆತು ಹೋಗಿ ಅವರ ಆಟ, ತುಂಟಾಟ, ತರ್ಲೆಗಳು, ನಗು, ಚೆಲ್ಲಾಟಗಳು, ಆಲೋಚನೆಗಳು, ಪ್ರಶ್ನೆಗಳು, ಉತ್ತರಗಳೊಂದಿಗೆ ಬೆರೆತು ನಾವು ಪುಟ್ಟ ಮಕ್ಕಳಾಗಿ ಬಿಡ್ತೇವೆ. ಅಲ್ಲದೇ ಕೆಲವೊಮ್ಮೆ ಮಕ್ಕಳು ಜೋರಾಗಿ ನಕ್ಕರೆ ನಾವು ಜೋರಾಗಿ ನಕ್ಕು, ಅವರೊಂದಿಗೆ ಕುಣಿದು ಬಿಟ್ಟು ಮನೆಯವರಿಂದ ಸ್ವಲ್ಪ ಗಾಂಭೀರ್ಯವಾಗಿರೆಂದು ಒಮ್ಮೊಮ್ಮೆ ಬೈಸಿಕೊಂಡಿರ್ತೇವೆ....[ಡಾ. ಅಬ್ದುಲ್ ಕಲಾಂ ನೆನಪಿನಲ್ಲಿ ಹುಟ್ಟಿತೊಂದು ಟ್ವಿಟ್ಟರ್ ಪುಟ]

An inclination love submitted grandchildren to grandfather abdul kalam

ಹೌದು....ಜಾತಿ-ಧರ್ಮ. ವರ್ಗ-ವರ್ಣ, ಹುದ್ದೆ, ಸ್ಥಾನ-ಅಧಿಕಾರ ಇವೆಲ್ಲವನ್ನು ಮೀರಿಸಿದ್ದು ಮಕ್ಕಳ ಪ್ರೀತಿ. ಈ ಮಾತು ನಿಜವಾಗಿಯೂ ಮಕ್ಕಳೊಂದಿಗೆ ಬೆರೆಯುವ, ಭವ್ಯ ದೇಶದ ಭವಿಷ್ಯವಿರುವುದು ತರಗತಿಗಳಲ್ಲಿ ಎಂದು ನಂಬಿದ್ದ ಕಲಾಂ ಅವರಿಗೆ ಹೇಳಿ ಮಾಡಿಸಿದಂತಿದೆ. ಅವರು ಮಕ್ಕಳಿಗೆ ಕೊಡುವ ಪ್ರೀತಿ, ನೀಡುವ ಗೌರವ ಅದು ಅಕ್ಷರಕ್ಕೆ ನಿಲುಕದ್ದು. ಪದಗಳಿಗೆ ಮೀರಿದ್ದು. [ಮಿಸೈಲ್ ಮ್ಯಾನ್ ಕಲಾಂಗೆ ಗಣ್ಯರ ಅಂತಿಮ ನಮನ]

ಮಕ್ಕಳಿಂದ ತಾತಾ ಎಂದು ಕರೆಸಿಕೊಳ್ಳುತ್ತಿದ್ದ ಕಲಾಂ ಅವರ ದಿನಚರಿಯಲ್ಲಿ ಸಾಮಾನ್ಯವಾಗಿ ಒಂದಲ್ಲಾ ಒಂದು ಶಾಲಾ ಭೇಟಿ, ಶಾಲಾ ಹೆಸರು ಇದ್ದೇ ಇರುತ್ತಿತ್ತು. ಮಕ್ಕಳಲ್ಲಿನ ಆಲೋಚನೆಗಳು ಜ್ಞಾನ ಭಂಡಾರದ ಮೂಲ ಎಂದು ಅರಿತಿದ್ದ ಕಲಾಂ ತಾತಾ ಮಕ್ಕಳು ಕೇಳುವ ಪ್ರತಿಯೊಂದು ಪ್ರಶ್ನೆಗಳು ನಮ್ಮನ್ನು ನಿತ್ಯ ಅಧ್ಯಯನಶೀಲರನ್ನಾಗಿಸುವುದರ ಜೊತೆಗೆ ಅವರ ನಿಸ್ವಾರ್ಥ ಮನೋಭಾವ ನಮ್ಮಲ್ಲೂ ಬೆಳೆಯುತ್ತದೆ ಎಂದು ಅರಿತ್ತಿದ್ದರು.[ಅಬ್ದುಲ್ ಕಲಾಂರ ಜೀವನ ಮತ್ತು ಸಾಧನೆ ಚಿತ್ರಗಳು]

'ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬ ನುಡಿಗಟ್ಟಿನ ಅರ್ಥ ಅರಿತಿದ್ದ ಕಲಾಂ ಭವಿಷ್ಯದ ಭರವಸೆಯ ದೀವಿಗೆಗಳಾದ ಮಕ್ಕಳ ಒಲವನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದರು. ಇವರ ಅಗಲಿಕೆಯಿಂದ ದುಃಖತಪ್ತರಾದ ಮಕ್ಕಳು ಕೆಲವೆಡೆ ಕೆಂಪು ಗುಲಾಬಿ ಹಿಡಿದು ನಮನ ಸಲ್ಲಿಸಿದರೆ, ಇನ್ನು ಕೆಲವು ಶಾಲಾ ಮಕ್ಕಳು ಮೇಣದಬತ್ತಿ ಹತ್ತಿಸಿ 'ಮತ್ತೆ ಎಂದು ಬರುವಿರಾ ನಮ್ಮೊಂದಿಗೆ ಬೆರೆಯಲು' ಎಂದು ಕಂಬನಿ ಮಿಡಿದಿದ್ದಾರೆ. ಇವರ ಅಗಲಿಕೆ ನಾಡಿಗೆ ತುಂಬಲಾರದ ನಷ್ಟ ಎಂದು ಇಡೀ ನಾಡಿನ ಜನತೆ ಭಾವಿಸಿದೆ.

ಆದರೆ ಮಕ್ಕಳು ನೀವು ಕೊಡುವ ಪ್ರೀತಿ ನಾವು ಇಂದು ಕಳೆದು ಕೊಂಡವಲ್ಲಾ..."ನೀವು ಅಂದು ಕೊಟ್ಟ ಒಂದು ಥ್ಯಾಂಕ್ಸ್, ಒಂದು ನಗು, ನೀವಾಡಿದ ಮಾತು, ನಿಮ್ಮೊಂದಿಗೆ ನನ್ನದೊಂದು ಫೋಟೋ, ನಿಮಗೆ ನಾನು ಕೇಳಿದ ಪ್ರಶ್ನೆ, ನಿಮ್ಮ ಉತ್ತರ, ನೀವು ಮಾಡಿದ ಸನ್ಮಾನ, ನಿಮ್ಮದೊಂದು ಆಟೋಗ್ರಾಫ್' ಎಂದು ಎಲ್ಲವನ್ನು ನೆನಕೆಯ ಬುತ್ತಿಯಲ್ಲಿ ಇಟ್ಟುಕೊಂಟು ಹಲವಾರು ಮಕ್ಕಳು ಭಾವ ತಪ್ತರಾಗಿದ್ದಾರೆ. ಮಕ್ಕಳ ಭಾವಪೂರ್ಣ ಶ್ರದ್ಧಾಂಜಲಿಯ ಕೆಲವು ತುಣುಕುಗಳು ಅವರ ಪ್ರಾರ್ಥನೆ ಇಲ್ಲಿದೆ ನೋಡಿ....

ಕಲಾಂ ತಾತಾನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಾಲಾ ಬಾಲಾಕಿ

ಕಲಾಂ ತಾತಾನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಾಲಾ ಬಾಲಾಕಿ

ಅಳದಿರು ಕಂದಾ... ಭವ್ಯ ಭಾರತದ ಕನಸನ್ನು ನನಸು ಮಾಡುವೆ ಎಂದು ಈಗಾಗಲೇ ಹಸಿರು ಮೇಣದ ಬತ್ತಿ ಹಿಡಿದು ಹಸಿರು ನಿಶಾನೆ ಸೂಚಿಸಿದ್ದೀಯಾ...ಒಮ್ಮೆ ಕಣ್ಣು ತೆರೆದು ನೋಡು ನಗು ಮೊಗದ ಕಲಾಂ ತಾತಾನನ್ನು...ಕಲಾಂ ತಾತಾ ಬಯಸಿದ್ದು ನಿನ್ನ ನಗುವನ್ನು....ಅಳುವನ್ನಲ್ಲ....

ಮಕ್ಕಳೆಂಬ ಹೂಗಳ ನಡುವೆ ವಿರಾಜಮಾನವಾದ ಕಲಾಂ ಭಾವಚಿತ್ರ

ಮಕ್ಕಳೆಂಬ ಹೂಗಳ ನಡುವೆ ವಿರಾಜಮಾನವಾದ ಕಲಾಂ ಭಾವಚಿತ್ರ

ಭಾರತದ ಮೊಟ್ಟ ಮೊದಲ ಪ್ರಧಾನ ಮಂತ್ರಿ ಹಾಗೂ ಮಕ್ಕಳಿಂದ ಪ್ರೀತಿಯಿಂದ ಚಾಚಾ ಎಂದು ಕರೆಸಿಕೊಳ್ಳುತ್ತಿದ್ದ ಜವಾಹರಲಾಲ್ ನೆಹರು ಅವರ ಕೋಟಿನಲ್ಲಿ ಕೆಂಗುಲಾಬಿ ರಾರಾಜಿಸುತ್ತಿತ್ತು. ಇಂದು ಕಲಾಂ ಅಗಲಿಕೆಗಾಗಿ ಮಕ್ಕಳು ಕೆಂಗುಲಾಬಿ ಹಿಡಿದು ಕಲಾಂ ಸಲಾಂ ಎಂಬ ಶೀರ್ಷಿಕೆ ಅಡಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ. ಮಕ್ಕಳ ಪ್ರೀತಿ ಕಂಡು ಕಲಾಂ ಮನದಲ್ಲೇ ಸಂತಸ ಭಾವರಾಗಿದ್ದಾರೆ.

ತಾತಾ ನಾವು ನಿಮ್ಮಂತೆಯೇ ನಡೆಯುತ್ತೇವೆ.

ತಾತಾ ನಾವು ನಿಮ್ಮಂತೆಯೇ ನಡೆಯುತ್ತೇವೆ.

ತಾತಾ ನೀವು ನಮ್ಮ ಬಿಟ್ಟು ಹೋದಿರಲ್ಲ...ನಾವು ಅಳುವುದಿಲ್ಲ..ನೀವು ನಮ್ಮಲ್ಲಿ ಅಳುವನ್ನು ಬಯಸಿಲ್ಲ.. ನಮ್ಮಿಂದ ಶ್ರಮ ಮತ್ತು ಪರಿಶ್ರಮವನ್ನು ಬಯಸಿದ್ದೀರಿ..ಗುರಿಗಳನ್ನು ತಲುಪುವಂತೆ ನಮ್ಮನ್ನು ಪ್ರೇರೇಪಿಸಿದ್ದೀರಿ..ನಾವು ನೀವು ಹೇಳಿದಂತೆಯೇ ನಡೆಯುತ್ತೇವೆ...

ದೇವರ ನಾಡಲ್ಲಿ ಹುಷಾರಾಗಿರಿ

ದೇವರ ನಾಡಲ್ಲಿ ಹುಷಾರಾಗಿರಿ

ನಿಮಗೊಂದು ನಮ್ಮ ನಮಸ್ತೇ ತಾತಾ...ನೀವು ದೇವರ ಬಳಿ ತೆರಳಿದ್ದೀರಿ...ದೇವರಿಗೆ ನಾವು ಕೇಳಿಕೊಳ್ಳೇವೆ ನಿಮ್ಮನ್ನ ಚೆನ್ನಾಗಿ ನೋಡ್ಕೋ ಅಂತಾ...ನೀವೇನೂ ಚಿಂತಿಸ್ಬೇಡಿ..ನಾವು ನಿಮ್ಮ ಕನಸನ್ನು ನನಸು ಮಾಡ್ತೇವೆ..ನೀವು ದೇವರ ನಾಡಾಲ್ಲಿ ಹುಷಾರಾಗಿರಿ....

ಹಸಿರುವನಕ್ಕೆ ತಾತಾ ಬರುವಿರಾ...

ಹಸಿರುವನಕ್ಕೆ ತಾತಾ ಬರುವಿರಾ...

ತಾತಾ ನೀವು ಯಾವಾಗ ಬರ್ತೀರಾ...ನಾನು ನಿಮ್ಮೊಂದಿಗೆ ಹಸಿರುವನದಲ್ಲಿ ಕಾಯುತ್ತಿದ್ದೇವೆ...ನಿಮಗೊಂದು ನಮಸ್ತೇ ಹೇಳಿ, ನಿಮ್ಮೊಂದಿಗೆ ಆಟ ಆಡಲು, ಮಾತ ಕೇಳಲು...ಭಾರತರತ್ನ ಪಡೆಯಲು ಏನು ಮಾಡಬೇಕೆಂದು ತಿಳಿಸು ತಾತಾ...ನಾವು ನಿಮ್ಮ ಹಾದಿ ಹಿಡಿಯುತ್ತೇವೆ.

ಮೇಣದ ಬತ್ತಿಯ ಮಂದ ಬೆಳಕಿನಲಿ

ಮೇಣದ ಬತ್ತಿಯ ಮಂದ ಬೆಳಕಿನಲಿ

ಭವ್ಯ ಭಾರತದ ಭವಿಷ್ಯ ಶಾಲಾ ತರಗತಿಯ ಕೊನೆ ಬೆಂಚಿನಲ್ಲಿ ಎಂದು ಹೇಳಿದ ಕಲಾಂ ತಾತಾ 'ನೀವು ನಾನು ಹೇಳಿದಂತೆ ಕೇಳುವಿರಲ್ಲಾ? ನೀವು ನನ್ನಂತೆ ದೊಡ್ಡ ದೊಡ್ಡ ಕನಸನ್ನು ಕಾಣುವಿರಲ್ಲಾ? ಎಂದು ಕೇಳಿದಕ್ಕೆ..ವಿದ್ಯಾರ್ಥಿಗಳು ಅವರ ಆತ್ಮಕ್ಕೆ ನಮನ ಸಲ್ಲಿಸಿ ನೀವು ಹೇಳಿದಂತೆ ನಾವು ಕೇಳುತ್ತೇವೆ ಎಂದು ಪ್ರಮಾಣ ಸ್ವೀಕರಿಸಲು ಸಜ್ಜಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+