Amit Shah Road Show In Bengaluru: ಈ ಮಾರ್ಗಗಳಲ್ಲಿ ಹೋದರೆ ಟ್ರಾಫಿಕ್ ಹೆಚ್ಚು: ಬದಲೀ ಮಾರ್ಗಗಳ ವಿವರ ಇಲ್ಲಿದೆ
ರಾಜ್ಯ ಚುನಾವಣಾ ಕಣ ರಂಗೇರಿದ್ದು ದೆಹಲಿ ನಾಯಕರು ರಾಜ್ಯದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ರಾಜಕೀಯ ಪಕ್ಷಗಳ ರೋಡ್ ಶೋಗಳಿಂದ ಜನ ಪರದಾಡುವಂತಾಗಿದೆ. ಮೇ 2 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನ ಆಡುಗೋಡಿ ಸಿಗ್ನಲ್‌ನಿಂದ ಹೊಸೂರು ರಸ್ತೆಯಲ್ಲಿರುವ ಟೋಟಲ್ ಮಾಲ್‌ವರೆಗೂ ರೋಡ್ ಶೋ ನಡೆಸಲಿದ್ದಾರೆ.
ರೋಡ್ ಶೋ ನಡೆಯುವ ಮಾರ್ಗದಲ್ಲಿ ಪೊಲೀಸರು ವಾಹನ ಸಂಚಾರವನ್ನು ನಿರ್ಬಂಧಿಸಲಿದ್ದು ಪರ್ಯಾಯ ಮಾರ್ಗವನ್ನು ಬಳಸುವಂತೆ ಮನವಿ ಮಾಡಿದ್ದಾರೆ. ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಪರ್ಯಾಯ ಮಾರ್ಗಗಳ ವಿವರವನ್ನು ಬೆಂಗಳೂರು ಸಂಚಾರ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಡಾ. ಮರಿಗೌಡ ರಸ್ತೆಯಿಂದ ಮಡಿವಾಳ ಚೆಕ್‌ಪೋಸ್ಟ್‌ಗೆ ಕಡೆಗೆ ಬರುವ ವಾಹನಗಳು ಡೈರಿ ಸರ್ಕಲ್‌ನಲ್ಲಿ ಬಲತಿರುವು ಪಡೆದು ಬನ್ನೇರುಘಟ್ಟ ರಸ್ತೆ ಮುಖಾಂತರ ಸಂಚರಿಸಲು ಕೋರಲಾಗಿದೆ. ಎಲೆಕ್ಟ್ರಾನಿಕ್‌ಸಿಟಿಯಿಂದ ಬೆಂಗಳೂರು ನಗರದ ಕಡೆಗೆ ಚಲಿಸುವ ವಾಹನಗಳು ವೀರಸಂದ್ರ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ನೈಸ್ ರಸ್ತೆಯ ಮುಖಾಂತರ ಸಂಚರಿಸಿ ಬನ್ನೇರುಘಟ್ಟ ರಸ್ತೆ ಮುಖಾಂತರ ಸಂಚರಿಸಬಹುದಾಗಿದೆ.
ಹೊಸೂರು ಲಷ್ಕರ್ ರಸ್ತೆಯಿಂದ ಚೆಕ್‌ಪೋಸ್ಟ್ ಜಂಕ್ಷನ್‌ಗೆ ಬರುವ ವಾಹನಗಳು ಆನೆಪಾಳ್ಯ ಜಂಕ್ಷನ್‌ನಲ್ಲಿ ಬಲತಿರುವು ಪಡೆದು, ಡೈರಿ ಸರ್ಕಲ್‌ನಿಂದ ಬನ್ನೇರುಘಟ್ಟ ರಸ್ತೆ ಮುಖಾಂತರ ಚಲಿಸಲು ಸೂಚನೆ ನೀಡಿದ್ದಾರೆ.
ಹೊರವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಯಲ್ಲಿ ಮಾರತ್ ಹಳ್ಳಿ ಕಡೆಯಿಂದ ಬರುವವರು ಸಿಲ್ಕ್ ಬೋರ್ಡ್ ಮುಖಾಂತರ ಎಲೆಕ್ಟ್ರಾನಿಕ್ ಸಿಟಿ, ಬಿಟಿಎಂ ಲೇ ಔಟ್ ಹಾಗೂ ಬನಶಂಕರಿ ಕಡೆಗೆ ಹೋಗುವ ವಾಹನಗಳು ಹೆಚ್‌ಎಸ್‌ಆರ್ ಲೇಔಟ್ 14ನೇ ಮೈನ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸಂಚರಿಸಬಹುದಾಗಿದೆ.
ಹೆಚ್‌ಎಸ್‌ಆರ್ ಕಡೆಯಿಂದ ಬರುವ ವಾಹನಗಳಿಗೆ ಬಲ ತಿರುವು ಪಡೆಯುವುದನ್ನು ಮತ್ತು ಬಿಟಿಎಂ ಲೇಔಟ್ ಕಡೆಯಿಂದ ಬರುವ ವಾಹನಗಳಿಗೆ ಎಡ ತಿರುವು ಪಡೆಯುವುದನ್ನು ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ರದ್ದು ಮಾಡಲಾಗಿದೆ. ಬದಲಾಗಿ ಹೆಚ್‌ಎಸ್‌ಆರ್ ಕಡೆಯಿಂದ ಬರುವ ವಾಹನಗಳು 14ನೇ ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಮುಂದೆ ಸಾಗಲು ತಿಳಿಸಲಾಗಿದೆ. ಬಿಟಿಎಂ ಲೇಔಟ್ ಕಡೆಯಿಂದ ಬರುವ ವಾಹನಗಳು ಜಯದೇವ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಬನ್ನೇರುಘಟ್ಟ ರಸ್ತೆಯಲ್ಲಿ ಸಂಚರಿಸಬಹುದಾಗಿದೆ.
ಇನ್ನರ್ ರಿಂಗ್ ರಸ್ತೆಯಿಂದ ಬಂದು ಕೃಪಾನಿಧಿ ಜಂಕ್ಷನ್‌ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್‌ಗೆ ಬರುವ ವಾಹನಗಳು ಸೋನಿವರ್ಲ್ಡ್ ಸಿಗ್ನಲ್‌ನಲ್ಲಿ ಹೆಚ್‌ಎಸ್‌ಆರ್ 14ನೇ ಮುಖ್ಯರಸ್ತೆ ಮುಖಾಂತರ ಸಂಚರಿಸಲು ತಿಳಿಸಲಾಗಿದೆ. ಬೇಗೂರು ರಸ್ತೆ ಮತ್ತು ಚಿಕ್ಕನಹಳ್ಳಿ ಕಡೆಯಿಂದ ಸಿಲ್ಕ್‌ಬೋರ್ಡ್ ಕಡೆಗೆ ಬರುವ ವಾಹಗಳು ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ಬಲತಿರುವು ಪಡೆದಯ ಕೂಡ್ಲು ಗೇಟ್ ಜಂಕ್ಷನ್-ಹೆಚ್‌ಎಸ್‌ಆರ್ ಲೇಔಟ್ ಮೂಲಕ ಸಂಚರಿಸುವುಂತೆ ಸೂಚಿಸಲಾಗಿದೆ.












Click it and Unblock the Notifications