ಆಂಬಿಡೆಂಟ್ ಕೇಸ್: ತನಿಖಾಧಿಕಾರಿಗಳ ವಿರುದ್ಧವೇ ಆರೋಪ

ಬೆಂಗಳೂರು, ನವೆಂಬರ್ 22 : ಕಳೆದ ಎರಡು ವಾರಗಳಿಂದ ಆಂಬಿಡೆಂಟ್ ಗ್ರೂಪ್ ಬಹಳ ಸುದ್ದಿಯಲ್ಲಿದೆ. ವಂಚನೆ ಪ್ರಕರಣದಲ್ಲಿ ಸುದ್ದಿಯಾಗಿದ್ದ ಗ್ರೂಪ್ ಈಗ ಪೊಲೀಸ್ ಅಧಿಕಾರಿಗಳ ವಿರುದ್ಧ ಹಲವು ಆರೋಪಗಳನ್ನು ಮಾಡಿದೆ.

ಸಿಸಿಬಿ ಎಸಿಪಿಯಾಗಿದ್ದ ಎಚ್.ಎನ್.ವೆಂಕಟೇಶ ಪ್ರಸನ್ನ ಅವರನ್ನು ನಗರ ಅಪರಾಧ ದಾಖಲೆಗಳ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೆ ಮುನ್ನ ಆಂಬಿಡೆಂಟ್ ಪ್ರಕರಣದ ತನಿಖೆಯನ್ನು ವೆಂಕಟೇಶ್ ಅವರು ನಡೆಸುತ್ತಿದ್ದರು.

ಆಂಬಿಡೆಂಟ್ ಗ್ರೂಪ್ ತನ್ನ ಫೇಸ್‌ಬುಕ್ ಪುಟದಲ್ಲಿ ಎಚ್.ಎನ್.ವೆಂಕಟೇಶ ಪ್ರಸನ್ನ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದೆ. ಈ ಪ್ರಕರಣದ ತನಿಖೆಯನ್ನು ಎಚ್.ಎನ್.ವೆಂಕಟೇಶ ಅವರ ಕೈಯಲ್ಲಿ ಮಾಡಿಸಬಾರದು ಎಂದು ಸಂಸ್ಥೆ ಒತ್ತಾಯಿಸಿದೆ.

Ambident made allegations against IO HN Venkatesh Prasanna

ಪ್ರಕರಣವೊಂದರಲ್ಲಿ ಉದ್ಯಮಿಗಳನ್ನು ಬ್ಲಾಕ್‌ಮೇಲ್ ಮಾಡಿ ಎಚ್.ಎನ್.ವೆಂಕಟೇಶ ಪ್ರಸನ್ನ ಅವರು ಕೋಟಿ ಕೋಟಿ ಹಣವನ್ನು ಪಡೆದಿದ್ದಾರೆ ಎಂದು ಆಂಬಿಡೆಂಟ್ ಗಂಭೀರ ಆರೋಪ ಮಾಡಿದೆ.

ಅಲೋಕ್ ಕುಮಾರ್ ಮತ್ತು ಡಿಸಿಪಿ ಗಿರೀಶ್ ಮೂಲಕ ತನಿಖೆ ನಡೆಸಿದರೆ ನೊಂದವರಿಗೆ ನ್ಯಾಯ ಸಿಗಲಿದೆ. ಎಚ್.ಎನ್.ವೆಂಕಟೇಶ ಪ್ರಸನ್ನ ಅವರಿಂದ ತನಿಖೆ ಬೇಡ ಎಂದು ಫೇಸ್‌ಬುಕ್‌ ಪೋಸ್ಟ್‌ಗಳನ್ನು ಶೇರ್ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+