ಅಂಬಿ ಕೊನೆಯ ಸಿನಿಮಾ ಅಂಬಿ ನಿಂಗೆ ವಯಸ್ಸಾಯ್ತೋ ರಿ-ರಿಲೀಸ್, ಕಾರಣವೇನು?

ಬೆಂಗಳೂರು, ನವೆಂಬರ್ 28: ಜಾಕ್ ಮಂಜು ಹಾಗೂ ಸುದೀಪ್ ಸೇರಿ ನಿರ್ಮಾಣದ ಅಂಬರೀಶ್ ಕೊನೆಯ 'ಅಂಬಿ ನಿಂಗೆ ವಯಸ್ಸಾಯ್ತೋ' ಮತ್ತೊಮ್ಮೆ ರಿಲೀಸ್ ಆಗಲಿದೆ. ಕಾರಣ ಏನಂತೀರಾ ಮುಂದೆ ಓದಿ...

ಇದು ಅಂಬಿಯ ಕೊಡುಗೆ ಎಂದೇ ಹೇಳಬಹುದು ಎರಡು ತಿಂಗಳ ಹಿಂದೆ ಬಿಡುಗಡೆಯಾದ ಅಂಬರೀಶ್ ಅಭಿನಯದ ಈ ಸಿನಿಮಾ ಪ್ರದರ್ಶನದಿಂದ ಬಂದ ಹಣವನ್ನು ಅಂಬಿ ಕುಟುಂಬದ ಪರವಾಗಿ ಮಂಡ್ಯ ಬಸ್ ಅಪಘಾತದಲ್ಲಿ ಮಡಿದವರ ಕುಟುಂಬಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ ಇದು ಅಂಬರೀಶ್ ಅವರ ಬಯಕೆಯೂ ಕೂಡ ಆಗಿತ್ತು.

ಪಾಂಡವಪುರದ ಕರಗನಮರಡಿ ಗ್ರಾಮದ ಬಳಿ ನಾಲೆಗೆ ಬಸ್ ಬಿದ್ದು ಮೂವತ್ತು ಜನ ಮೃತಪಟ್ಟ ಸುದ್ದಿ ಕೇಳಿದ್ದ ಅಂಬರೀಶ್ ಭಾರಿ ನೋವಿಗೆ ಒಳಗಾಗಿದ್ದರು. ಇದಕ್ಕೆ ಪ್ರತಿಕ್ರಿಯೆ ಕೂಡ ನೀಡಿದ್ದರು, ಅವರ ಸಾವಿಗೆ ಆ ಆಘಾತವೂ ಕಾರಣ ಎಂದು ಹೇಳಲಾಗಿತ್ತು. ಇದರಿಂದ ಹೆಚ್ಚು ಕೊರಗಿದ್ದರು. ನಮ್ಮ ಜನಕ್ಕೆ ಹೀಗಾಯಿತಲ್ಲಾ ಎಂದು ಕಣ್ಣೀರಿಟ್ಟಿದ್ದರು. ಸ್ವತಃ ಈ ಬಗ್ಗೆ ಮಾಧ್ಯಮಗಳಲ್ಲಿ ತಾವೇ ಖುದ್ದು ಫೋನ್ ಮಾಡಿ ಮಾತನಾಡಿದ್ದರು.

Ambi Ninge Vayassayto re-release soon

ಮಂಡ್ಯ, ಬೆಂಗಳೂರು, ಮೈಸೂರು ಸೇರಿದಂತೆ ವಿದೇಶದಲ್ಲಿ ಕೂಡ ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ. ಈ ವಾರಾಂತ್ಯದಲ್ಲಿ ಅಮೇರಿಕಾದಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ. ಇತ್ತೀಚಿಗಷ್ಟೆ ಮಂಡ್ಯದ ಕರಗನಮರಡಿ ಗ್ರಾಮದ ನಾಲೆಯಲ್ಲಿ ಬಸ್ ಉರುಳಿ 30 ಜನ ಮೃತಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+