ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಬರೀಶ್- ಸುಮಲತಾ ಜೀವನಪ್ರೀತಿ ತೋರಿಸುವ ಈ ವಿಡಿಯೋ ನೋಡಿದ್ದೀರಾ?

|
Google Oneindia Kannada News

Recommended Video

ಎಷ್ಟು ಚೆಂದ ಅಂಬಿ ಸುಮಲತಾ ಜೋಡಿ..! | Oneindia Kannada

ಬೆಂಗಳೂರು, ನವೆಂಬರ್ 29: ಮೊನ್ನೆ ಮೊನ್ನೆ ಅಸ್ತಂಗತವಾದ ಅಂಬರೀಶ್ ಎಂಬ ವ್ಯಕ್ತಿತ್ವದ ವೈಶಿಷ್ಟ್ಯವೇ ಹಾಗೆ. ಅಷ್ಟು ಸುಲಭಕ್ಕೆ ಅರ್ಥವಾಗುವಂತಹದ್ದಲ್ಲ. ಎದುರಿಗಿದ್ದವರು ಯಾರು ಎಂಬುದನ್ನು ನೋಡದೆ, ಯಾವ ಮುಲಾಜೂ ಇಲ್ಲದೆ ನೇರವಾಗಿ ಮಾತನಾಡುತ್ತಿದ್ದ ಅಂಬರೀಶ್, ಅದರಾಚೆಗೆ ಒಬ್ಬ ಸ್ನೇಹಜೀವಿ, ಪ್ರೇಮಜೀವಿಯೂ ಹೌದು.

ಅಂಬರೀಶ್ ಅವರ ವಿಶಿಷ್ಟ, ಒಮ್ಮೊಮ್ಮೆ ವಿಕ್ಷಿಪ್ತ ಎನಿಸುವ ಅವರ ಗುಣಗಳು ಚರ್ಚೆಯ ವಸ್ತು ಕೂಡ. ಆದರೆ, ಅಂಬರೀಶ್ ನೋಡಲು ಮತ್ತು ಮಾತಿನಲ್ಲಿ ಒರಟಾಗಿ ಕಂಡರೂ, ಅವರೊಬ್ಬರು ಬಹು ಜೀವನಪ್ರೀತಿಯ ವ್ಯಕ್ತಿಯಾಗಿದ್ದರು.

ಬದುಕನ್ನು ಹೇಗೆ ಎಂಜಾಯ್ ಮಾಡಬಹುದು ಎಂಬುದಕ್ಕೆ ಅಂಬರೀಶ್ ಉತ್ತಮ ಉದಾಹರಣೆ. ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆದು ಬಂದ ಬಳಿಕವೂ ಅದೇ ಕುಂದದ ಉತ್ಸಾಹದೊಂದಿಗೆ ಸಿನಿಮಾ ಮಾಡಿದರು, ಓಡಾಡಿದರು.

ಅಂಬರೀಶ್ ಅವರನ್ನು ಭೇಟಿ ಮಾಡಿ ಅವರಿಂದ ಬೈಗುಳ ಪಡೆದುಕೊಂಡು ಬರುವುದೇ ಅವರ ಅಭಿಮಾನಿಗಳಿಗೆ ಖುಷಿ. ಅಂಬರೀಶಣ್ಣ ಬೈದರು ಎಂದು ಸಂಭ್ರಮಿಸುವ ಎಷ್ಟೋ ಮಂದಿ ಇದ್ದಾರೆ. ಅಂಬರೀಶ್ ಅವರನ್ನು ಜನರು ಈ ರೀತಿಯೂ ಪ್ರೀತಿಸಿದರು. ಅಂಬರೀಶ್, ಹೀಗೆ ಗದರಿಸುತ್ತಲೇ ಪ್ರೀತಿಸಿದರು.

ಪತ್ನಿ ಸುಮಲತಾ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದರು ಅಂಬರೀಶ್‌?ಪತ್ನಿ ಸುಮಲತಾ ನಂಬರ್ ಅನ್ನು ಏನೆಂದು ಸೇವ್ ಮಾಡಿದ್ದರು ಅಂಬರೀಶ್‌?

ಅಂಬರೀಶ್ ನಿಧನದ ಬಳಿಕ ಅವರ ಆಯಾಸದ ಜತೆಗೂ ಕಮ್ಮಿಯಾಗದ ಉತ್ಸಾಹವನ್ನು ತೋರಿಸುವ ವಿಡಿಯೋಗಳು ಈಗ ವಾಟ್ಸಾಪ್, ಫೇಸ್‌ ಬುಕ್ ಮುಂತಾದೆಡೆ ಹರಿದಾಡುತ್ತಿವೆ.

ಹಳೆಯ ಹಾಡಿಗೆ ನೃತ್ಯ

ಅಂಬರೀಶ್ ಮತ್ತು ಸುಮಲತಾ ತೆಲುಗಿನ ಹಳೆಯ ಹಾಡೊಂದಕ್ಕೆ ನರ್ತಿಸುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದು ಅಂಬರೀಶ್ ಮತ್ತು ಸುಮಲತಾ ಅವರ ನಡುವಿನ ಪ್ರೀತಿ ಬಾಂಧವ್ಯವನ್ನು ಸಾಬೀತುಪಡಿಡುವ ವಿಡಿಯೋ. ಜತೆಗೆ ಅವರಿಬ್ಬರ ಜೀವನಪ್ರೀತಿಯನ್ನು ಬಿಂಬಿಸುವ ವಿಡಿಯೋ ಕೂಡ.

ಈ ವಯಸ್ಸಿನಲ್ಲಿಯೂ, ಅನಾರೋಗ್ಯದ ನಡುವೆಯೂ ಬದುಕನ್ನು ಮೋಹಿಸುವ ಕಲೆ ಎಲ್ಲರಿಗೂ ಒಲಿಯುದಿಲ್ಲ. ಅದರಲ್ಲಿಯೂ ಸುದೀರ್ಘ ಕಾಲ ದಾಂಪತ್ಯದಲ್ಲಿ ಅದೇ ಮಧುರ ಬಂಧವನ್ನು ಉಳಿಸಿಕೊಳ್ಳುವುದೂ ಕಷ್ಟ. ಅಂತಹವರಿಗೆ ಅಂಬಿ-ಸುಮಲತಾ ದಾಂಪತ್ಯ ಮಾದರಿ. ಅಂಬರೀಶ್ ಅವರನ್ನು ಕಳೆದುಕೊಂಡ ಸಂದರ್ಭದಲ್ಲಿ ಅವರ ಈ ಉತ್ಸಾಹವನ್ನು ಬಿಂಬಿಸುವ ವಿಡಿಯೋ ಎಂತಹವರ ಕಣ್ಣಿನಲ್ಲಿಯೂ ನೀರು ಜಿನುಗಿಸುತ್ತದೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಮನವಿಬೆಂಗಳೂರಿನ ರೇಸ್ ಕೋರ್ಸ್ ರಸ್ತೆಗೆ ಅಂಬರೀಶ್ ಹೆಸರಿಡಲು ಮನವಿ

ಮಂಚಿ ಮನಸುಲು ಚಿತ್ರದ ಹಾಡು

ಮಂಚಿ ಮನಸುಲು ಚಿತ್ರದ ಹಾಡು

ಅಂಬರೀಶ್ ಮತ್ತು ಸುಮಲತಾ ನರ್ತಿಸಿದ್ದು 1962ರಲ್ಲಿ ಬಿಡುಗಡೆಯಾದ ತೆಲುಗಿನ 'ಮಂಚಿ ಮನಸುಲು' ಚಿತ್ರದ 'ಮಾಮ ಮಾಮ ಮಾಮ' ಎಂಬ ಹಾಡಿಗೆ. ಅದುರ್ತಿ ಸುಬ್ಬರಾವ್ ನಿರ್ದೇಶನದ ಈ ಚಿತ್ರದಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್ ಮತ್ತು ಸಾವಿತ್ರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಕೆ.ವಿ. ಮಹದೇವನ್ ಈ ಸಿನಿಮಾಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು.

ಡಿ.ಹೊಸೂರಲ್ಲಿ ಅಂಬಿ ಪ್ರತಿಮೆ ನಿರ್ಮಿಸಿದ ಅಭಿಮಾನಿಗಳು ಡಿ.ಹೊಸೂರಲ್ಲಿ ಅಂಬಿ ಪ್ರತಿಮೆ ನಿರ್ಮಿಸಿದ ಅಭಿಮಾನಿಗಳು

ವಿಡಿಯೋಗೆ ಅಪಾರ ಮೆಚ್ಚುಗೆ

ವಿಡಿಯೋಗೆ ಅಪಾರ ಮೆಚ್ಚುಗೆ

ಅಂಬರೀಶ್ ಮತ್ತು ಸುಮಲತಾ ಅವರ ಜೋಡಿಯನ್ನು 'ನ್ಯೂಡೆಲ್ಲಿ', 'ಆಹುತಿ', 'ನಮ್ಮೂರ ಹಮ್ಮೀರ' ಸಿನಿಮಾಗಳಲ್ಲಿ ನೋಡಿದವರಿಗೆ ಆ ಸಿನಿಮಾಗಳಲ್ಲಿನ ಪ್ರೇಮಗೀತೆಗಳಿಗೂ, ಈ ವಿಡಿಯೋಕ್ಕೂ ಅಂತಹ ದೊಡ್ಡ ವ್ಯತ್ಯಾಸ ಕಾಣಿಸಲಾರದು. ಸಿನಿಮಾಕ್ಕಾಗಿ ಕ್ಯಾಮೆರಾ ಮುಂದೆ ನಟಿಸಿದಂತೆ ಕಾಣಿಸಿದರೂ, ಅವರ ನಡುವಿನ ಕೆಮಿಸ್ಟ್ರಿ ಅದ್ಭುತವಾಗಿತ್ತು. ಮದುವೆಯಾಗಿ 28 ವರ್ಷ ಕಳೆದಿದ್ದರೂ ಆ ಹೊಂದಾಣಿಕೆಯಲ್ಲಿ ಯಾವ ವ್ಯತ್ಯಾಸವೂ ಕಾಣಿಸುವುದಿಲ್ಲ. ಇಬ್ಬರೂ ಬದುಕನ್ನು ಮತ್ತು ತಮ್ಮ ಪ್ರೀತಿಯನ್ನು ಎಷ್ಟು ಸಂಭ್ರಮಿಸಿದ್ದರು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ.

ಮತ್ತೊಂದು ವಿಡಿಯೋ ವೈರಲ್

ಅಂಬರೀಶ್ ಅವರದು ಬತ್ತದ ಹುಮ್ಮಸ್ಸು ಎನ್ನುವುದಕ್ಕೆ ಮತ್ತೊಂದು ವಿಡಿಯೋ ಕೂಡ ಉದಾಹರಣೆ. ತಾವು ಕೊನೆಯದಾಗಿ ನಟಿಸಿದ್ದ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ 'ಹೇ ಜಲೀಲ' ಹಾಡಿಗೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಮತ್ತು ಮಗ ಅಭಿಷೇಕ್ ಅವರ ಕೈ ಕೈ ಹಿಡಿದು ನರ್ತಿಸಿದ್ದ ವಿಡಿಯೋ ಸಹ ವೈರಲ್ ಆಗಿದೆ. ತಮ್ಮ ಕೊನೆಯ ಉಸಿರು ಎಳೆಯುವ ಕಡೆಯ ದಿನಗಳವರೆಗೂ ಅಂಬರೀಶ್ ಹೇಗಿದ್ದರು ನೋಡಿ.

ಅಂಬರೀಶ್ ಪಾಲಿನ 'ದೇವತೆ'

ಅಂಬರೀಶ್ ಪಾಲಿನ 'ದೇವತೆ'

ಅಂಬರೀಶ್ ಅವರ ಅನಾರೋಗ್ಯದ ಸಂದರ್ಭದಲ್ಲಿ ಸುಮಲತಾ ಮಗುವಿನಂತೆ ಕಾಳಜಿ ವಹಿಸಿ ನೋಡಿಕೊಂಡಿದ್ದರು. ಅಂಬರೀಶ್ ಅವರ ಶಕ್ತಿಯೂ ಅವರಾಗಿದ್ದರು. ಅಂಬರೀಶ್ ಅವರ ಬದುಕು ಹಳಿ ತಪ್ಪುವಂತೆ ಕಂಡಾಗ ಅದನ್ನು ಸರಿದಾರಿಗೆ ತಂದವರು ಸುಮಲತಾ. ಹೀಗಾಗಿ ಅಂಬರೀಶ್ ತಮ್ಮ ಮೊಬೈಲ್‌ನಲ್ಲಿ ಸುಮಲತಾ ಅವರ ಹೆಸರನ್ನು 'ಗಾಡೆಸ್' (ದೇವತೆ) ಎಂದು ಸೇವ್ ಮಾಡಿಕೊಂಡಿದ್ದರಂತೆ. ಅಂಬರೀಶ್ ಪಾಲಿಗೆ ದೇವತೆಯಂತೆಯೇ ಸುಮಲತಾ ಅವರನ್ನು ನೋಡಿಕೊಂಡಿದ್ದರು.

English summary
A video of Ambarish and Sumalatha dancing for a old Telugu Song Mama Mama Mama goes viral in Social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X