Heavy Rain: ಬೆಂಗಳೂರು ಮಳೆಗೆ 16 ಕಾರ್ಮಿಕರು ಬಲಿ?
ಬೆಂಗಳೂರಿನ ಮಳೆ ಜೀವ ತೆಗೆಯುತ್ತಿದೆ, ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಶುರುವಾಗಿರುವ ರಣ ಮಳೆ ಕಳೆದ 15 ದಿನಗಳಿಂದ ಕೂಡ ಒಂದಲ್ಲ ಒಂದು ಅನಾಹುತ ಸೃಷ್ಟಿ ಮಾಡುತ್ತಿದೆ. ಮಳೆ ಇವತ್ತು ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಎಂಬ ನಿರೀಕ್ಷೆಯಲ್ಲಿ ಜನ ಕೂಡ ಇದ್ದಾರೆ. ಆದರೆ ಮಳೆ ಮಾತ್ರ ನಿಲ್ಲದೆ ಅನಾಹುತಗಳ ಸರಮಾಲೆ ಸೃಷ್ಟಿ ಮಾಡುತ್ತಿದೆ. ಹೀಗಿದ್ದಾಗಲೇ ಇಂದು ಸುರಿದ ಭಾರಿ ಮಳೆಗೆ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದು ಹೋಗಿದ್ದು, ಬೆಂಗಳೂರು ಮಳೆಗೆ 16 ಕಾರ್ಮಿಕರು ಬಲಿ?
ಕನ್ನಡಿಗರ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಇಡೀ ದಿನ ಮಳೆ ಅಬ್ಬರಿಸಿತ್ತು. ಅದರಲ್ಲೂ ರಾತ್ರಿ ಸಮಯದಲ್ಲಿ ಮಳೆ ಆಘಾತ ನೀಡಿತ್ತು. ಎಲ್ಲಿ ನೋಡಿದರೂ ಬರೀ ನೀರೇ ನೀರು ಎನ್ನುವಂತಹ ಸ್ಥಿತಿ ನಿರ್ಮಾಣ ಆಗಿತ್ತು. ಜನರು ಕೂಡ ಈ ಮಳೆ ಆರ್ಭಟ ಕಂಡು ಏನು ಮಾಡೋದು? ಅಂತಾ ಚಿಂತೆಯಲ್ಲಿ ಮುಳುಗಿದ್ದರು. ಆದರೆ ಮಳೆರಾಯ ಮಾತ್ರ ಕರುಣೆ ತೋರಿಸಿಲ್ಲ, ಬದಲಾಗಿ ಇನ್ನೂ ಹೆಚ್ಚಾಗಿರುವ ಮಳೆ ಜನರ ಜೀವ ತೆಗೆಯುತ್ತಿದೆ. ಇದೇ ರೀತಿ ಹೊಟ್ಟೆ ಪಾಡಿಗಾಗಿ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದ 16 ಬಡ ಕಾರ್ಮಿಕರ ಪರಿಸ್ಥಿತಿ ಏನಾಗಿದೆ ಗೊತ್ತಾ?

ಅಯ್ಯಯ್ಯೋ.. ಏನಿದು ಘೋರ ದುರಂತ?
ಹೌದು, ಮಹಾನಗರ ಬೆಂಗಳೂರಿನಲ್ಲಿ ತುತ್ತು ಅನ್ನಕ್ಕೆ ದಾರಿ ಆಗುತ್ತದೆ ಅಂತಾ ಕೋಟ್ಯಂತರ ಜನರು ತಮ್ಮ ತಮ್ಮ ಊರು ಬಿಟ್ಟು ಬೆಂಗಳೂರು ನಗರಕ್ಕೆ ವಲಸೆ ಬಂದಿದ್ದಾರೆ. ಹೀಗಿದ್ದಾಗ ಬೆಂಗಳೂರು ದೊಡ್ಡದಾಗಿ ಬೆಳೆದಿದ್ದು, ಅನೇಕ ಸಮಸ್ಯೆಗಳನ್ನು ಕೂಡ ಎದುರಿಸುತ್ತಿದೆ. ಅದರಲ್ಲೂ ಮಳೆಗಾಲ ಶುರುವಾದರೆ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಅದೇ ರೀತಿ ಇದೀಗ ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಾಬುಸಾಬ್ ಪಾಳ್ಯದಲ್ಲಿ ಭೀಕರ ಘಟನೆ ಸಂಭವಿಸಿದೆ.
16 ಕಾರ್ಮಿಕರ ಜೀವಕ್ಕೆ ಕುತ್ತು?
ಬೆಂಗಳೂರಿನಲ್ಲಿ ಸುರಿಯುತ್ತಿರುವ ನಿರಂತರ ಮಳೆ ಪರಿಣಾಮ, ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡವೇ ಕುಸಿದು ಬಿದ್ದಿದೆ. ಈ ಘಟನೆಯ ಪರಿಣಾಮ ಕುಸಿದು ಬಿದ್ದಿರುವ ಕಟ್ಟಡದ ಒಳಗೆ ಸುಮಾರು 16 ಕಾರ್ಮಿಕರು ಸಿಲುಕಿದ್ದಾರೆ ಎನ್ನಲಾಗಿದೆ. ಈಗಾಗಲೇ ಕೆಲವರ ಶವ ಹೊರಗೆ ತೆಗೆಯಲಾಗಿದೆ. 06 ಅಂತಸ್ತಿನ ನಿರ್ಮಾಣ ಹಂತದ ಅಪಾರ್ಮೆಂಟ್ ಕಟ್ಟಡ ಇದಾಗಿದೆ. ಈಗಾಗಲೇ ಕಟ್ಟಡ ನಿರ್ಮಾಣದ ಬಹುತೇಕ ಕೆಲಸ ಮುಗಿದಿತ್ತು ಎನ್ನಲಾಗಿದೆ. ಆದರೆ ಪೇಟಿಂಗ್ ಕೆಲಸಗಳು & ಫಿನಿಶಿಂಗ್ ವರ್ಕ್ ನಡೆಯುವಾಗ ಕಟ್ಟಡವೇ ಕುಸಿದು ಬಿದ್ದಿದೆ.
ಪೊಲೀಸರು ನೀಡಿರುವ ಮಾಹಿತಿ ಏನು?
ಇಂದು ಸಂಜೆ 4.10ರ ಸುಮಾರಿಗೆ ಕಟ್ಟಡ ಕುಸಿದಿದೆ. ಸ್ಥಳಕ್ಕೆ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಓಡೋಡಿ ಬಂದಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಟ್ಟಡ ಕುಸಿತದ ವೇಳೆ ಸ್ಥಳದಲ್ಲಿ ಸುಮಾರು 16 ಕಾರ್ಮಿಕರು ಇದ್ದರು ಎಂಬ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ. ಮೂವರ ಶವಗಳನ್ನು ಹೊರ ತೆಗೆಯಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ರಕ್ಷಣಾ ತಂಡಗಳು ಘಟನಾ ಸ್ಥಳಕ್ಕೆ ದಾವಿಸಿದ್ದು, ಅವಶೇಷಗಳ ಅಡಿ ಬದುಕಿ ಉಳಿದವರಿಗಾಗಿ ಶೋಧ ಕಾರ್ಯವೂ ನಡೆಯುತ್ತಿದೆ.












Click it and Unblock the Notifications