TCS Bengaluru: ಕೆಲಸದಿಂದ ತೆಗೆದಿದ್ದಕ್ಕೆ ಕುಡಿದ ಮತ್ತಿನಲ್ಲಿ ಹುಸಿಬಾಂಬ್ ಕರೆ ಮಾಡಿದ ಯುವತಿ!

ಬೆಂಗಳೂರಿನ ಹೊಸೂರು ರಸ್ತೆಯಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಥಿಂಕ್ ಕ್ಯಾಂಪಸ್‌ಗೆ ನಕಲಿ ಬಾಂಬ್ ಬೆದರಿಕೆ ಕರೆ ಬಂದಿದ್ದು, ಉದ್ಯೋಗಿಗಳಲ್ಲಿ ಭೀತಿಯನ್ನು ಉಂಟುಮಾಡಿತ್ತು.

ನ್ಯೂಸ್ 18 ವರದಿ ಮಾಡಿರುವ ಪ್ರಕಾರ, ಬಾಂಬ್ ಬೆದರಿಕೆ ಕರೆ ಬಂದ ವಿಷಯ ತಿಳಿಯುತ್ತಿದ್ದಂತೆ ಕಚೇರಿಯೊಳಗೆ ಕೆಲಸ ಮಾಡುತ್ತಿದ್ದ ನೌಕರರು ಆವರಣದಿಂದ ಹೊರ ಬಂದರು. ಮೂಲಗಳ ಪ್ರಕಾರ ಮಂಗಳವಾರ ಬೆಳಗ್ಗೆ ಕ್ಯಾಂಪಸ್‌ನ ಬಿ ಬ್ಲಾಕ್‌ಗೆ ಕರೆ ಬಂದಿತ್ತು ಎನ್ನಲಾಗಿದೆ.

ಬಾಂಬ್ ಬೆದರಿಕೆ ಕರೆ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಭಾಗದಲ್ಲಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ತಂಡ ಕ್ಯಾಂಪಸ್‌ಗೆ ಭೇಟಿ ನೀಡಿತ್ತು. ಬಾಂಬ್ ನಿಷ್ಕ್ರಿಯ ದಳ ಕೂಡ ಸ್ಥಳಕ್ಕೆ ಧಾವಿಸಿತ್ತು.

alleged-bomb-hoax-at-tcs-bengaluru

ಹುಸಿ ಬಾಂಬ್ ಬೆದರಿಕೆ

ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಅಧಿಕಾರಿಗಳು ಕಟ್ಟಡದ ಸಂಕೀರ್ಣದೊಳಗೆ ಸ್ಫೋಟಕಗಳಿಗಾಗಿ ಹುಡುಕಾಟ ಆರಂಭಿಸಿದರು. ಅದೃಷ್ಟವಶಾತ್, ಪರಿಶೀಲನೆಯ ನಂತರ ಕಟ್ಟಡದೊಳಗೆ ಅನುಮಾನಾಸ್ಪದ ಸ್ಫೋಟಕ ವಸ್ತುಗಳು ಕಂದು ಬಂದಿಲ್ಲ.

ಕರ್ನಾಟಕದ ಹುಬ್ಬಳ್ಳಿ ಜಿಲ್ಲೆಯ ಮಾಜಿ ಮಹಿಳಾ ಉದ್ಯೋಗಿಯೊಬ್ಬರು ಬಾಂಬ್ ಬೆದರಿಕೆ ಕರೆ ಮಾಡಿದ್ದಾರೆ ಎಂದು ತನಿಖೆಗಳು ತಿಳಿದು ಬಂದಿದೆ ಎಂದು ವರದಿಯಾಗಿದೆ. ಕೆಲಸದಿಂದ ತೆಗೆದಿದ್ದಕ್ಕಾಗಿ ಕಂಪನಿಯ ಮೇಲಿನ ಕೋಪದಿಂದ ಆಕೆ ಈ ಕೃತ್ಯ ಎಸಗಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ. ಕರೆ ಮಾಡಿದ ಮಹಿಳೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಇದೇ ಮೊದಲಿನ ಘಟನೆಯಲ್ಲ!

2023 ರಲ್ಲಿ ಟಿಸಿಎಸ್ ಕ್ಯಾಂಪಸ್‌ನಲ್ಲಿ ಹುಸಿ ಬಾಂಬ್ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಮೇ ತಿಂಗಳಲ್ಲಿ, ಹೈದರಾಬಾದ್‌ನ ಟಿಸಿಎಸ್ ಕ್ಯಾಂಪಸ್‌ಗೆ ನಕಲಿ ಬಾಂಬ್ ಕರೆ ಬಂದಿತ್ತು, ಇದರಿಂದಾಗಿ 1,500 ಉದ್ಯೋಗಿಗಳನ್ನು ಕ್ಯಾಂಪಸ್‌ನಿಂದ ಹೊರಕಳುಹಿಸಲಾಗಿತ್ತು.

ಹೈದರಾಬಾದ್ ಕ್ಯಾಂಪಸ್‌ನಲ್ಲಿನ ಕರೆ ಬೆಂಗಳೂರಿನ ಮಾಜಿ ಟಿಸಿಎಸ್ ಉದ್ಯೋಗಿಯಿಂದ ಬಂದಿದೆ ಎಂದು ಹೇಳಲಾಗಿದೆ, ಅವರು ಭದ್ರತಾ ವಿಭಾಗದಲ್ಲಿ ಉದ್ಯೋಗಿಯಾಗಿದ್ದರು ಮತ್ತು ನಂತರ ಕೆಲಸದಿಂದ ಅವರನ್ನು ವಜಾ ಮಾಡಲಾಗಿತ್ತು. ಈಗ ಬೆಂಗಳೂರಿನಲ್ಲಿ ವಜಾಗೊಂಡ ಮಹಿಳಾ ಉದ್ಯೋಗಿ ಹುಸಿ ಬಾಂಬ್ ಬೆದರಿಕೆ ಹಾಕಿದ್ದು, ಮಹಿಳೆಗಾಗಿ ಹುಡುಕಾಟ ಆರಂಭಿಸಲಾಗಿದೆ.

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಕಚೇರಿಗೆ ಕೆಲಸಕ್ಕೆ ಹೋಗಿದ್ದ ಉದ್ಯೋಗಿಗಳಿಗೆ ಬಾಂಬ್ ಬೆದರಿಕೆ ಕರೆ ಕ್ಷಣಕಾಲ ಆತಂಕ ಉಂಟು ಮಾಡಿದ್ದು ಸುಳ್ಳಲ್ಲ, ನಂತರ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸ್ಥಳಕ್ಕಾಗಮಿಸಿ ಇದು ಹುಸಿ ಬಾಂಬ್ ಬೆದರಿಕೆ ಎಂದು ಹೇಳಿದ ನಂತರ ಉದ್ಯೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+