ಮಕ್ಕಳ ಸಮರ ಕಲೆ ಪ್ರದರ್ಶನ ನಿಮ್ಮ ಮನಸ್ಸಿಗೆ ಹಿಡಿಸದೇ ಇರದು
ಬೆಂಗಳೂರು,ಸೆಪ್ಟೆಂಬರ್. 12 : ಬೆಂಗಳೂರಿನ ಜಯನಗರ 3 ನೇ ಬ್ಲಾಕ್ ನ ಚಾಮರಾಜ ಕಲ್ಯಾಣ ಮಂಟಪದಲ್ಲಿ ಶನಿವಾರ ಮಕ್ಕಳಿಂದ ಸಮರ ಕಲೆಗಳ ಅಭ್ಯಾಸ ಮತ್ತು ಪ್ರದರ್ಶನ. ಕಾಟಾ ಮತ್ತು ಕುಮಿಟೆ ಪ್ರದರ್ಶನ ನೀಡುತ್ತಿರುವ ಮಕ್ಕಳನ್ನು ನೋಡಿ ಚಪ್ಪಾಳೆ ತಟ್ಟುತ್ತಿದ್ದ ತಂದೆ ತಾಯಂದಿರು, ತರಬೇತಿ ನೀಡಿದ ಗುರುಗಳು..
ಅಖಿಲ ಭಾರತ ಸೈಬುಡೋ ಕಾಯ್ ಕರಾಟೆ ತರಬೇತಿ ಶಾಲೆ ಆಶ್ರಯದಲ್ಲಿ ಅಖಿಲ ಭಾರತ 10ನೇ ಕಾಟಾ ಕುಮಿಟೆ ಚಾಂಪಿಯನ್ ಶಿಪ್ ಆಯೋಜಿಸಲಾಗಿದೆ. ಭಾನುವಾರ ಸೆಪ್ಟೆಂಬರ್ 13 ರಂದು ಪ್ರದರ್ಶನ ಮುಂದುವರಿಯಲಿದೆ.

ಜಪಾನ್ ನ ತರಬೇತಿ ಶಾಲೆ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಪ್ರಾಢಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಆಯಾ ವಯೋಮಾನವರ ನಡುವೆ ಸ್ಪರ್ಧೆ ನಡೆಯುತ್ತಿದೆ.
ಸಂಸ್ಥೆಯ ಸಂಸ್ಥಾಪಕ ಶಿಹಾನ್ ಬಿ ಶ್ರೀಧರ್, ರಾಜ್ಯದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ದಿನೇಶ್ ಗುಂಡೂರಾವ್, ಕೃಷಿ ಸಚಿವ ಕೃಷ್ಣ ಭೈರೇಗೌಡ, ಜೆಡಿಎಸ್ ನಾಯಕ ರೇವಣ್ಣ , ನೂತನ ಮೇಯರ್ ಮಂಜುನಾಥ ರೆಡ್ಡಿ ಸೇರಿದಂತೆ ಅನೇಕರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೆಣ್ಣು ಮಕ್ಕಳಿಗೂ ಸ್ವಯಂ ರಕ್ಷಣಾ ವಿದ್ಯೆ ಕಲಿಯುವ ಅಗತ್ಯವಿರುವ ಇಂದಿನ ಕಾಲದಲ್ಲಿ ಮಕ್ಕಳ ಪ್ರದರ್ಶನವನ್ನು ಒಮ್ಮೆ ನೋಡಬಹುದು. ಬಿಡುವಾಗಿದ್ದರೆ ನೀವು ಒಮ್ಮೆ ಜಯನಗರಕ್ಕೆ ಭೇಟಿ ಇತ್ತು ಮಾರ್ಷಲ್ ಕಲೆಗಳ ಬಗ್ಗೆ ಇರುವ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.













Click it and Unblock the Notifications