ಸದಾಶಿವ ಆಯೋಗ ತಿರಸ್ಕರಿಸಲು ಒತ್ತಾಯಿಸಿ ಬೃಹತ್ ಪ್ರತಿಭಟನೆ

ಬೆಂಗಳೂರು, ಅಕ್ಟೋಬರ್, 20 : ನ್ಯಾ ಸದಾಶಿವ ಆಯೋಗದ ವರದಿ ತಿರಸ್ಕರಿಸಲು ಮತ್ತು ಕುಲಕಸುಬಿನ ಮೇಲೆ ಹೇರಿರುವ ವಿವಿಧ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸುವ ಸಲುವಾಗಿ ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯು ನವೆಂಬರ್ 2ರ ಸೋಮವಾರ ಬೆಳಿಗ್ಗೆ 11ಗಂಟೆಯಿಂದ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯು ಕೈಗೊಂಡಿರುವ ಪ್ರತಿಭಟನಾ ಮೆರವಣಿಗೆ ಬೆಂಗಳೂರಿನ ಟೌನ್ ಹಾಲ್ ನಿಂದ ಆರಂಭವಾಗಿ ಸುಮಾರು 11ಗಂಟೆಗೆ ಮೌರ್ಯಹೋಟೆಲ್ ಹತ್ತಿರದ ಗಾಂಧಿ ಸ್ಮಾರಕ ಬಳಿ ತಲುಪುತ್ತದೆ. ಅಲ್ಲಿ ನೂರಾರು ಜನರ ಉಪಸ್ಥಿತಿಯಲ್ಲಿ ಪ್ರತಿಭಟನೆ ಮುಂದುವರೆಯಲಿದೆ ಎಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ರಾಜ್ಯಾಧ್ಯಕ್ಷ ವೈ ಕೊಟ್ರೇಶ್ ಮಾಹಿತಿ ನೀಡಿದರು.[ಕಳಸಾ-ಬಂಡೂರಿ ಹೋರಾಟಕ್ಕೆ ಸಿರಿಮನೆ ನಾಗರಾಜು ಬೆಂಬಲ]

Akhila Karnataka Bhovi Yuvavedike organize protest against Sadashiva Aayoga Varadi , November 2nd

ರಾಜ್ಯದಲ್ಲಿ ಬೋವಿ, ಲಂಬಾನಿ, ಕೊರಮ ಇನ್ನಿತರ ಪರಿಶಿಷ್ಟ ಜಾತಿಯ ಸಮುದಾಯಗಳು ಅತ್ಯಂತ ಹಿಂದುಳಿದ, ಅಸಂಘಟಿತ ಶ್ರಮಿಕ ಸಮುದಾಯಗಳಾಗಿವೆ. ಇತ್ತೀಚಿಗೆ ರಾಜ್ಯದಲ್ಲಿ ಚರ್ಚೆಗೆ ಈಡಾಗಿರುವ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ತರಲು ಒತ್ತಡ, ಪ್ರಭಾವ ಬೀರುತ್ತಿರುವ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನ ಮಾಡುತ್ತಿವೆ.

ಈ ಆಯೋಗದ ವರದಿಯು ಅವೈಜ್ಞಾನಿಕ , ಅಸಂವಿಧಾನಿಕ, ಕಾನೂನು ಬಾಹಿರ ಮತ್ತು ಅನೈತಿಕವಾದಂತಹ ಅಪಾಯಕಾರಿ ವರದಿಯಾಗಿದೆ. ಇದನ್ನು ರಾಜ್ಯ ಸರ್ಕಾರ ತಿರಸ್ಕರಿಸುವುದರ ಮೂಲಕ ಪರಿಶೀಲನೆ ಮಾಡಬೇಕು. ಈ ವರದಿ ಜಾರಿಗೆ ಬಂದರೆ 99 ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಅಖಿಲ ಕರ್ನಾಟಕ ಭೋವಿ ಯುವ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ವಿ.ಜಯಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+