ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಏರ್ ಟ್ಯಾಕ್ಸಿ ಸೌಲಭ್ಯ?
ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗಲು ಏರ್ ಟ್ಯಾಕ್ಸಿ ಸೌಲಭ್ಯ ನೀಡಬೇಕು. ಕೇಂದ್ರ ಸರ್ಕಾರ ನೇಮಿಸಿದ್ದ ಸಂಸದೀಯ ಸಮಿತಿಯ ಸೂಚನೆ.
ಬೆಂಗಳೂರು, ಜೂನ್ 13: ಬೆಂಗಳೂರು ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗೆ ತಲುಪುವ ಮಾರ್ಗದಲ್ಲಿ ಎದುರಾಗುವ ದಟ್ಟ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಲಹೆ ನೀಡಿರುವ ಸಂಸದೀಯ ಸಮಿತಿಯೊಂದು ಬೆಂಗಳೂರು ನಗರದಿಂದ ಕೆಂಪೇಗೌಡ ವಿಮಾನ ನಿಲ್ದಾಣದವರೆಗೆ ಹೆಲಿ ಟ್ಯಾಕ್ಸಿ ಸೌಲಭ್ಯ ನೀಡಬೇಕೆಂದು ಸಲಹೆ ಮಾಡಿದೆ.
ಬೆಂಗಳೂರು, ಹೈದರಾಬಾದ್ ಸೇರಿದಂತೆ ದೇಶದ ಕೆಲವು ಮಹಾನಗರಗಳಲ್ಲಿ ಇರುವ ಟ್ರಾಫಿಕ್ ಸಮಸ್ಯೆಯಿಂದಾಗಿ ಪ್ರವಾಸೋದ್ಯಮ, ಸಾರಿಗೆ ಸೌಕರ್ಯಗಳು ಬಾಧೆಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಲೋಕಸಭೆ ಹಾಗೂ ರಾಜ್ಯ ಸಭೆ ಸದಸ್ಯರುಳ್ಳ ಸಮಿತಿಯೊಂದನ್ನು ರಚಿಸಿ ಆ ಬಗ್ಗೆ ವರದಿ ನೀಡುವಂತೆ ಕೋರಿತ್ತು.

ಸಂಸದ ಮುಕುಲ್ ರಾಯ್ ನೇತೃತ್ವದ ಈ ಸಮಿತಿಯು ಬೆಂಗಳೂರು ಸೇರಿದಂತೆ ನಾನಾ ಮಹಾನಗರಗಳಲ್ಲಿ ಇರುವ ಟ್ರಾಫಿಕ್ ಸಮಸ್ಯೆಯನ್ನು ಅಧ್ಯಯನ ಮಾಡಿ ಅದರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ.
ಅದರಂತೆ, ಬೆಂಗಳೂರಿನಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಲು ಹೆಲಿ ಟ್ಯಾಕ್ಸಿ ಸೇವೆ ನೀಡಬೇಕೆಂದು ಸಲಹೆ ನೀಡಿದೆ.












Click it and Unblock the Notifications