Air India: ಬರೋಬ್ಬರಿ 20 ಗಂಟೆ ತಡವಾಗಿ ಹೊರಟ ಏರ್ ಇಂಡಿಯಾ, ಮೂರ್ಛೆ ಹೋದ ಪ್ರಯಾಣಿಕರು!
ಬೆಂಗಳೂರು, ಮೇ. 31: ಗುರುವಾರ ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನವು ಸುಮಾರು 20 ಗಂಟೆಗಳ ಕಾಲ ತಡವಾಗಿ ಹೊರಟು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ವಿಮಾನವನ್ನು ಹತ್ತಲು ಮತ್ತು ಯಾವುದೇ ಎಸಿ ಇಲ್ಲದೆ ಉಸಿರುಗಟ್ಟುವ ವಾತಾವರಣದಲ್ಲಿ ಪ್ರಯಾಣಿಕರು ಪರಿತಪಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳು ವೈರಲ್ ಆಗಿವೆ. ಎಸಿ ಇಲ್ಲದೆ ಉಸಿರುಗಟ್ಟುವ ವಾತಾವರಣದಲ್ಲಿ ಕೆಲವು ಮಂದಿ ಮೂರ್ಛೆ ತಪ್ಪಿ ಬಿದ್ದಿರುವ ಘಟನೆಯೂ ನಡೆದಿದೆ. ಕೆಲವರು ತಲೆ ಸುತ್ತಿ ಬಿದ್ದು ಸುಧಾರಿಸಿಕೊಂಡಿದ್ದಾರೆ. ಅಲ್ಲಲ್ಲೇ ಮಲಗಿದ್ದಾರೆ. ಬಳಿಕ ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಮಕ್ಕಳು ಮತ್ತು ಮಹಿಳೆಯರ ಪಾಡು ಹೇಳತೀರದ್ದಾಗಿದೆ.

20 ಗಂಟೆ ತಡವಾಗಿ ಹೊರಟ ವಿಮಾನ!
ಗುರುವಾರ ಮಧ್ಯಾಹ್ನ ಟೇಕ್ ಆಫ್ ಆಗಬೇಕಿದ್ದ ಸ್ಯಾನ್ ಫ್ರಾನ್ಸಿಸ್ಕೋ ವಿಮಾನವು 20 ಗಂಟೆಗಳ ವಿಳಂಬದ ನಂತರ ಇಂದು ಬೆಳಗ್ಗೆ 11 ಗಂಟೆಗೆ ಹೊರಡಲಿದೆ. ಗುರುವಾರ, ಟ್ವಿಟರ್‌ನಲ್ಲಿ ಪತ್ರಕರ್ತೆ ಶ್ವೇತಾ ಪುಂಜ್ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಮಾನ ಸಂಖ್ಯೆ AI 183ರಲ್ಲಿ ಈ ಘಟನೆ ನಡೆದಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಇದ್ದ ವಿಮಾನದಲ್ಲಿ ಪ್ರಯಾಣಿಕರಲ್ಲಿ ಕೆಲವರು ಮೂರ್ಛೆ ಹೋಗಿದ್ದಾರೆ. ಬಳಿಕ ಅವರನ್ನು ವಿಮಾನದಿಂದ ಕೆಳಗಿಳಿಯಲು ಹೇಳಲಾಯಿತು ಎಂದು ತಿಳಿಸಿದ್ದಾರೆ.

ತಾಂತ್ರಿಕ ದೋಷದಿಂದಾಗಿ ನಿರ್ಗಮನ ಸಮಯವನ್ನು ಮತ್ತೆ ನೀಡಲಾಗಿದೆ. ಶುಕ್ರವಾರ ಮಧ್ಯಾಹ್ನ ವಿಮಾನವು ತನ್ನ ಪ್ರಯಾಣವನ್ನು ಪ್ರಾರಂಭಿಸುವ ಸಾಧ್ಯತೆಯಿದೆ. ವಲಸೆಯ ಔಪಚಾರಿಕತೆಗಳು ಪೂರ್ಣಗೊಂಡ ಕಾರಣ ಡಿಬೋರ್ಡ್ ಮಾಡಿದ ಪ್ರಯಾಣಿಕರಿಗೆ ಟರ್ಮಿನಲ್‌ಗೆ ಪ್ರವೇಶಿಸಲು ಅವಕಾಶವಿಲ್ಲ ಎಂದು ಮತ್ತೊಬ್ಬ ಪ್ರಯಾಣಿಕರು ತಿಳಿಸಿದ್ದಾರೆ. ಇನ್ನು, ಹಿರಿಯ ಪ್ರಯಾಣಿಕರ ಸಂಬಂಧಿಕರು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications