ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಎಎಲ್ ವಿಮಾನ ದುರಂತ ; ವಾಯುಪಡೆಯಿಂದ ತನಿಖೆ ಆರಂಭ

|
Google Oneindia Kannada News

ಬೆಂಗಳೂರು, ಫೆಬ್ರವರಿ 2: ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣ ಸಮೀಪ ಮಿರಾಜ್ 2000 ತರಬೇತಿ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯು ಪಡೆ ತನಿಖೆ ಆರಂಭಿಸಿದೆ.

ಅಪಘಾತಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ಆರಂಭಿಸಿದ್ದಾರೆ, ಎಚ್​ಎಎಲ್​ ಒಳಗೆ ವಿಮಾನ ಹಾರಾಟ ನಡೆಸುವಾಗ, ತಾಂತ್ರಿಕ ತೊಂದರೆ ಉಂಟಾಗಿ ವಿಮಾನ ಸ್ಫೋಟಗೊಂಡಿದೆ.

ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು ಬೆಂಗಳೂರಿನ ಎಚ್‌ಎಎಲ್‌ ಬಳಿ ಮಿರಾಜ್ ಯುದ್ಧ ವಿಮಾನ ಪತನ, ಪೈಲಟ್ ಸಾವು

ವಿಮಾನದಲ್ಲಿ ಇಬ್ಬರು ಪೈಲೆಟ್​ಗಳು ಇದ್ದರು. ಅಪಘಾತದ ಸಮಯದಲ್ಲಿ ಇಬ್ಬರೂ ಎಜೆಕ್ಟ್ ಬಟನ್ ಪ್ರೆಸ್ ಮಾಡಿದ್ದಾರೆ. ಆದರೆ ಓರ್ವ ಪೈಲೆಟ್ ಅಪಘಾತವಾದ ವಿಮಾನದ ಮೇಲೆಯೇ ಬಿದ್ದಿದ್ದಾರೆ. ಮತ್ತೋರ್ವ ಪೈಲೆಟ್ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದರು.

Air force ordered enquiry for Miraje jetflight crash

ಕೇಂದ್ರ ಗೃಹ ಸಚಿವಾಲಯ ಈ ತನಿಖೆಯಲ್ಲಿ ಪಾಲ್ಗೊಂಡಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ವಾಯು ಪಡೆಯ ಅಧಿಕಾರಿಗಳು ತಾವೇ ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸರಿಂದ ನಿರಾಪೇಕ್ಷಣ ಪತ್ರ ಪಡೆದಿದ್ದಾರೆ.

ವಿಮಾನ ಅಪಘಾತ ಬಗ್ಗೆ ಏರ್​ಫೋರ್ಸ್ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ತಾಂತ್ರಿಕ ತನಿಖಾ ತಂಡ ಸೇರಿ ಇತರೆ ತಂಡಗಳಿಂದ ವಿಸ್ತೃತ ತನಿಖೆ ನಡೆಯಲಿದೆ. ವಿಮಾನ ಪತನಕ್ಕೆ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗಿದೆ. ಈಗ, ಅದಕ್ಕೆ ನಿಖರ ಕಾರಣ ಹುಡುಕಲು ವಾಯುಸೇನೆ ಮುಂದಾಗಿದೆ.

English summary
After the horrific incident of Miraje jetflight crash, Air force ordered for detailed enquiry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X