Get Updates
Get notified of breaking news, exclusive insights, and must-see stories!

Bengaluru: 100ನೇ ಜನೌಷಧಿ ಕೇಂದ್ರ ಉದ್ಘಾಟನೆ, ಇನ್ನೊಂದು ವಾರದಲ್ಲಿ ಮತ್ತೆ 100 ನಮ್ಮ ಕ್ಲಿನಿಕ್ ಆರಂಭ: CM

ಬೆಂಗಳೂರಿನಲ್ಲಿ ಈಗಾಗಲೇ 100 ನಮ್ಮ ಕ್ಲಿನಿಕ್ ಆರಂಭಿಸಿರುವ ರಾಜ್ಯ ಸರ್ಕಾರ ಇನ್ನೊಂದು ವಾರದಲ್ಲಿ ಮತ್ತೆ ನೂರು ನಮ್ಮ ಕ್ಲಿನಿಕ್‌ ಪ್ರಾರಂಭಿಸಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರು, ಮಾರ್ಚ್ 07: ಬೆಂಗಳೂರಿನಲ್ಲಿ ಈಗಾಗಲೇ 100 ನಮ್ಮ ಕ್ಲಿನಿಕ್ ಆರಂಭಿಸಿರುವ ರಾಜ್ಯ ಸರ್ಕಾರ ಇನ್ನೊಂದು ವಾರದಲ್ಲಿ ಮತ್ತೆ ನೂರು ನಮ್ಮ ಕ್ಲಿನಿಕ್‌ ಪ್ರಾರಂಭಿಸಲಿದ್ದೇವೆ. ಈ ಮೂಲಕ ನಗರದ ನಾಗರಿಕರ ಆರೋಗ್ಯ ಕುರಿತು ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವಾಲಯದ ವತಿಯಿಂದ ಜಯನಗರದಲ್ಲಿ ಆಯೋಜಿಸಿದ್ದ ಜನೌಷಧಿ ದಿವಸ್ ಆಚರಣೆ-2023 ಮತ್ತು ಜಯನಗರದಲ್ಲಿ ಸ್ಥಾಪನೆಯಾದ 100ನೇ ಜನೌಷಧಿ ಕೇಂದ್ರ ಅವರು ಉದ್ಘಾಟಿಸಿದರು. ಈ ವೇಳೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಹ ಪಾಲ್ಗೊಂಡಿದ್ದರು.

Bengaluru: Again 100 Namma Clinics will be open in one week, Says CM Bommai

ನಾಗರಿಕರ ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ವಾರ್ಡಿಗೂ 'ನಮ್ಮ ಕ್ಲಿನಿಕ್' ಪ್ರಾರಂಭ ಮಾಡಲಾಗುವುದು. ಇದೇ ವಾರ ಇನ್ನೂ 100 ನಮ್ಮ ಕ್ಲಿನಿಕ್‌ಗೆ ಚಾಲನೆ ನೀಡಲಿದ್ದೇವೆ. ನಗರದಲ್ಲಿ ಸುಮಾರು 19 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು (PHC) ಮೇಲ್ದರ್ಜೆಗೆ ಏರಿಸಲಾಗುತ್ತದೆ. 4 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಎಲ್ಲೆಡೆ ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಇಂದು ಸಂಚಾರಿ ಆಸ್ಪತ್ರೆಯನ್ನೂ ಹಾಗೂ ಡಯಾಲಿಸಿಸ್ ಕೇಂದ್ರವನ್ನೂ ಉದ್ಘಾಟಿಸಲಾಗಿದೆ. ಇದರಿಂದಾಗಿ ಆರೋಗ್ಯ ಕ್ಷೇತ್ರ ಬಲಗೊಳ್ಳುತ್ತಿದೆ. ರೋಗಿಗಳ ಮೊಗದಲ್ಲಿ ಮಂದಹಾಸ ನೋಡಿದಾಗ ಸಾರ್ಥಕ ಭಾವ ಮೂಡುತ್ತದೆ ಎಂದು ಅವರು ವಿವರಿಸಿದರು.

ಆಡಳಿತಗಾರರಿಗೆ ಕಳಕಳಿ ಇರಬೇಕು

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಬಡವರಿಗೆ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ನೀಡುವ ಕಾರ್ಯಕ್ರಮ ಇರಲಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆ ಜಾರಿಯಾಗಿದೆ. ಇದು ಅವರಿಗೆ ಬಡವರ ಮೇಲಿರುವ ಕಾಳಜಿ ಏನು ಎಂಬುದು ಗೊತ್ತಾಗುತ್ತದೆ. ಬಡತನ ಅನುಭವಿಸಿದಾಗ, ಹತ್ತಿರದಿಂದ ನೋಡಿ ಬಡವರ ಸಂಕಷ್ಟವನ್ನು ತಿಳಿದುಕೊಂಡವರಿಗೆ ಮಾತ್ರ ಇಂತಹ ಕಾಳಜಿ ಬರುತ್ತದೆ. ಬಡವರ ಕಷ್ಟ ಅರ್ಥಮಾಡಿಕೊಂಡ ಪ್ರಧಾನಿಗಳು ಬಡವರಿಗಾಗಿ ಸುಲಭ ಮತ್ತು ಕಡಿಮೆ ದರದಲ್ಲಿ ದೊರೆಯಬೇಕೆಂದು. ಗುಣಮುಖರಾಗಿ ಆರೋಗ್ಯವಂತರಾಗಬೇಕು. ಭಾರತ ಸಶಕ್ತವಾಗಬೇಕಾದರೆ , ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯಗಳು ತಲುಪಬೇಕೆಂದು ಇಂಥ ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.

Bengaluru: Again 100 Namma Clinics will be open in one week, Says CM Bommai

ಬದ್ಧತೆಯ ನಾಯಕತ್ವ

ಆರೋಗ್ಯಕ್ಕೆ ಮೊದಲು ಅಗತ್ಯವಿರುವುದು ಶುದ್ಧವಾದ ನೀರು, ದೇಶದ ಗ್ರಾಮಗಳಲ್ಲಿರುವ ಎಲ್ಲರ ಮನೆಗೆ ಮುಂದಿನ 5 ವರ್ಷಗಳಲ್ಲಿ ನೀರು ಕೊಡುವುದಾಗಿ ಘೋಷಿಸಿದ್ದ ಪ್ರಧಾನಿಗಳು, ನಾಯಕನಿಗೆ ಬದ್ಧತೆ, ಛಲ,ಬುದ್ಧಿವಂತಿಕೆ ಹಾಗೂ ಬುದ್ದಿವಂತಿಕೆಗೆ ಹಣ ಕೊಡುವ ಹೃದಯ ವೈಶಾಲ್ಯವಿದ್ದರೆ ಅದು ಸಾಧ್ಯವಿದೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಅಸಾಧ್ಯವಾದುದನ್ನು ಸಾಧ್ಯ ಮಾಡಲಾಗುತ್ತಿದೆ. ಅಸಾಧ್ಯವಾದುದನ್ನು ಸಾಧ್ಯ ಮಾಡುವುದೇ ನಿಜವಾದ ನಾಯಕತ್ವ. 10 ಕೋಟಿಗಳಿಂತ ಹೆಚ್ಚು ಮನೆಗಳಿಗೆ ಮೋದಿಯವರು ಶುದ್ಧವಾದ ಕುಡಿಯುವ ನೀರನ್ನು ಕೊಡುತ್ತಿದ್ದಾರೆ. ಕರ್ನಾಟಕ ಒಂದರಲ್ಲಿಯೇ 72 ವರ್ಷ ಕೇವಲ 25 ಲಕ್ಷ ಮನೆಗಳಿಗೆ ನೀರು ಕೊಡಲಾಗಿತ್ತು. ಕಳೆದ ಮೂರು ವರ್ಷಗಳಲ್ಲಿ 40 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಸಂಸದ ತೇಜಸ್ವಿ ಸೂರ್ಯ ಅವರ ಕ್ಷೇತ್ರದಲ್ಲಿ ನೂರನೇ ಜನೌಷಧಿ ಕೇಂದ್ರ ಉದ್ಘಾಟನೆಗೊಂಡಿದ್ದು, ಇಡೀ ದೇಶದಲ್ಲಿ ಸಂಸದರೊಬ್ಬರ ಕ್ಷೇತ್ರದಲ್ಲಿ ಇರುವುದು ಒಂದು ದಾಖಲೆ. ಇದು ಜನಪರ ಕಾಳಜಿಯನ್ನು ತೋರಿಸುತ್ತದೆ ಎಂದರು.

ವಾಸವಿ ಚಾರಿಟಬಲ್ ಆಸ್ಪತ್ರೆಗೆ ಅಭಿನಂದನೆಗಳನ್ನು ಸಲ್ಲಿಸಿದ ಅವರು ಕೆ.ಎಸ್.ಆರ್.ಟಿ.ಸಿ ಯಲ್ಲಿ ಆಸ್ಪತ್ರೆಯಾಗಿ ಪರಿವರ್ತನೆ ಮಾಡಿರುವುದನ್ನು ದತ್ತು ಪಡೆದು ಡಯಾಲಿಸ್ ಕೇಂದ್ರ ತೆರೆದು ಅತ್ಯುತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+