ಡಿ.ಕೆ. ಶಿವಕುಮಾರ್‌ಗೆ ಸಿಎಂ ಪಟ್ಟ ಕಟ್ಟಲು ಸಕಲ ಸಿದ್ಧತೆ?
ಲೋಕಸಭೆ ಚುನಾವಣೆ 2024ರ ಫಲಿತಾಂಶ ಇನ್ನೇನು ಹೊರಬೀಳಲಿದೆ. ನಾಳೆ ಇಷ್ಟೊತ್ತಿಗೆ ಕೇಂದ್ರದಲ್ಲಿ ಯಾರು ಅಧಿಕಾರ ಹಿಡಿಯುತ್ತಾರೆ? ಬಿಜೆಪಿ ಅಥವಾ ಕಾಂಗ್ರೆಸ್? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿರುತ್ತದೆ. ಆದರೆ ಇದಕ್ಕಿಂತಲೂ ಹೆಚ್ಚಾಗಿ ಕರ್ನಾಟಕ ರಾಜಕೀಯದಲ್ಲಿ ಸಂಚಲನ ಸೃಷ್ಟಿ ಮಾಡುವ ಸುದ್ದಿಯೊಂದು ಹೊರಬಿದ್ದಿದೆ. ಅದು ಏನೆಂದರೆ ಲೋಕಸಭೆ ಚುನಾವಣೆ 2024ರ ಫಲಿತಾಂಶ ಬಂದ ನಂತರ, ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಸ್ಥಾನವೇ ಬದಲಾಗಿ ಹೋಗಲಿದೆಯಂತೆ!
2023 ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಅಬ್ಬರದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಈ ಮೂಲಕ ಬಿಜೆಪಿ ಹೈಕಮಾಂಡ್ ನಾಯಕರ ಶ್ರಮ ಫಲ ನೀಡಿರಲಿಲ್ಲ. ಗ್ಯಾರಂಟಿ ಯೋಜನೆ ಮತ್ತು ಮತದಾರರಿಗೆ ಕಾಂಗ್ರೆಸ್ ನೀಡಿದ್ದ ಆಶ್ವಾಸನೆಗಳ ಆಧಾರದಲ್ಲಿ ಅಧಿಕಾರ ಸಿಕ್ಕಿತ್ತು. ಈ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿಎಂ ಸಿದ್ದರಾಮಯ್ಯ & ಡಿಸಿಎಂ ಡಿ.ಕೆ. ಶಿವಕುಮಾರ್‌ರ ನಡುವೆ ಪೈಪೋಟಿ ನಡೆದಿತ್ತು. ಕೊನೆಗೆ ಸಿದ್ದರಾಮಯ್ಯ 2ನೇ ಬಾರಿಗೆ ಸಿಎಂ ಆಗಿ ಆಯ್ಕೆಯು ಆಗಿದ್ದಾರೆ. ಇದೇ ಸಮಯದಲ್ಲಿ ಸ್ಫೋಟಕ ವಿಚಾರವೊಂದು ಈಗ ಕುತೂಹಲ ಕೆರಳಿಸಿದ್ದು, ಕರ್ನಾಟಕದಲ್ಲಿ ಸಿಎಂ ಸ್ಥಾನ ಬದಲಾಗುತ್ತೆ ಎಂಬ ಸುದ್ದಿ ಹಲ್‌ಚಲ್ ಎಬ್ಬಿಸಿದೆ.

ಕರ್ನಾಟಕದಲ್ಲಿ ಸಿಎಂ ಚೇಂಜ್?
ಅಂದಹಾಗೆ ಕರ್ನಾಟಕದಲ್ಲಿ ಸಿಎಂ ಸ್ಥಾನ ಚೇಂಜ್ ಆಗುತ್ತೆ, ಬೇರೆಯವರಿಗೆ ಸಿಎಂ ಪಟ್ಟವನ್ನ ಕಟ್ಟುತ್ತಾರೆ ಅನ್ನೋ ಸುದ್ದಿ ಪದೇ ಪದೇ ಓಡಾಡುತ್ತದೆ. ಆದರೆ ಇದಕ್ಕೆ ಒಂದು ಕ್ಲಾರಿಟಿ ಈ ಕ್ಷಣದ ತನಕ ಸಿಕ್ಕಿಲ್ಲ. ಹೀಗಿದ್ದಾಗಲೇ ಲೋಕಸಭೆ ಚುನಾವಣೆ 2024ರ ಫಲಿತಾಂಶ ಹತ್ತಿರವೇ ಇರುವಾಗ ಸ್ಫೋಟಕ ಸುದ್ದಿಯೊಂದು ಸಂಚಲನ ಸೃಷ್ಟಿ ಮಾಡಿದೆ.
ಕಾಂಗ್ರೆಸ್ ಹೈಕಮಾಂಡ್ ನಾಯಕರು ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆಗೆ ನಾಂದಿ ಹಾಡಿದ್ದು. ಚುನಾವಣೆ ಫಲಿತಾಂಶ ಬಂದ ತಕ್ಷಣ ಕರ್ನಾಟಕದಲ್ಲಿ ಸಿಎಂ ಸ್ಥಾನದ ಬದಲಾವಣೆ ಪ್ರಕ್ರಿಯೆ ಕೂಡ ಆರಂಭ ಆಗಲಿದೆ ಎಂಬ ವದಂತಿ ಹಬ್ಬಿದೆ. ಅದರಲ್ಲೂ ಈಗ ಸಿಎಂ ಸ್ಥಾನಕ್ಕೆ ಡಿ.ಕೆ. ಶಿವಕುಮಾರ್ ಆಯ್ಕೆ ಆಗಲಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಈ ಮಾತಿಗೆ ಯಾವುದೇ ಅಧಿಕೃತ ಹೇಳಿಕೆಗಳು ಈವರೆಗೂ ಸಿಕ್ಕಿಲ್ಲ. ಹೀಗಾಗಿ ಇದನ್ನ ಗಾಳಿಸುದ್ದಿ ಎನ್ನಲಾಗುತ್ತಿದೆ.
ಕರ್ನಾಟಕದಲ್ಲಿ ರಾಜಕೀಯ ಸಂಚಲನ?
ಒಟ್ನಲ್ಲಿ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಬಳಿಕ ರಾಜಕೀಯ ಸಂಚಲನ ಸೃಷ್ಟಿಯಾಗಿ ದೊಡ್ಡ ಬದಲಾವಣೆಗಳು ಆಗಲಿವೆ ಎಂಬ ವದಂತಿ ಹಬ್ಬಿದೆ. ಆದರೆ, ಈ ಬಗ್ಗೆ ಕಾಂಗ್ರೆಸ್‌ನ ನಾಯಕರಾಗಲಿ ಅಥವಾ ಮುಖಂಡರೇ ಆಗಲಿ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಒಂದಷ್ಟು ದಿನ ಕಾದು ನೋಡಬೇಕಿದೆ. ಆ ನಂತರವೇ ಈ ಕುರಿತು ಅಧಿಕೃತ ಹೇಳಿಕೆ ಸಿಗಬಹುದು ಅಥವಾ, ಈಗ ಹಬ್ಬಿರುವ ಸುದ್ದಿ ಸುಳ್ಳು ಎಂಬ ಸ್ಪಷ್ಟನೆ ಸಿಗಬಹುದು.
ಡಿ.ಕೆ. ಸುರೇಶ್ ಗೆಲುವಿಗೆ ಬ್ರೇಕ್?
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ VS ಬಿಜೆಪಿ ನೇರವಾಗಿ ಹಣಾಹಣಿ ನಡೆಸಿವೆ. ಅತ್ತ ಒಂದು ಕಡೆ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಅವರು ಸತತ 4ನೇ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದರೆ, ಮತ್ತೊಂದ್ಕಡೆ ಬಿಜೆಪಿ & ಜೆಡಿಎಸ್ ನಾಯಕರು ಈ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದರು. ಹೀಗಿದ್ದಾಗ ಗೆಲುವಿಗೆ ಹತ್ತಿರ ಇರುವುದು ಡಿ.ಕೆ. ಸುರೇಶ್ ಅವರು ಎಂಬ ಮಾತುಗಳು ಕೇಳಿಬಂದಿದ್ದವು, ಆದರೆ ಈಗ ನೋಡಿದ್ರೆ ಡಾ. ಮಂಜುನಾಥ್ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಸರ್ಕಾರ ರಚಿಸಲು ಸರ್ಕಸ್ ಶುರು!
ಎಕ್ಸಿಟ್ ಪೋಲ್ ಭವಿಷ್ಯ ಈಗ ಸುಳ್ಳಾಗಿ ಹೋಗಿದೆ. ಅದರಲ್ಲೂ ಇಷ್ಟು ದಿನ ಕಾಂಗ್ರೆಸ್ ಪಕ್ಷ 50 ನಂಬರ್ ದಾಟಲ್ಲ ಎಂದು ಹೇಳುತ್ತಿದ್ದ ಅಂಕಿ & ಅಂಶ ಉಲ್ಟಾ ಆಗಿದೆ. ಹೀಗಿದ್ದಾಗಲೇ, ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲು ಸರ್ಕಸ್ ಕೂಡ ಶುರುವಾಗಿದೆ. ಯಾಕಂದ್ರೆ ಇನ್ನೇನು ಎರಡೂ ಮೈತ್ರಿಕೂಟಗಳು ಬಹುಮತಕ್ಕೆ ಹತ್ತಿರದಲ್ಲೇ ಇವೆ. ಹೀಗಾಗಿ ಸರ್ಕಾರ ರಚನೆ ಮಾಡಲು ಸರ್ಕಸ್ ಶುರುವಾಗಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರನ್ನ ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿ, 400 ಸ್ಥಾನ ಎಲ್ಲಿ? ಅಂತಾ ಕೇಳುತ್ತಿದ್ದಾರೆ.












Click it and Unblock the Notifications