ಬೆಂಗಳೂರು: ಆಫ್ರಿಕಾ ಪ್ರಜೆಗಳ ಮೇಲೆ ಮಾರಣಾಂತಿಕ ಹಲ್ಲೆ
ಬೆಂಗಳೂರು, ಮಾ, 12: ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ ಆರೋಪದಡಿ ಮೂವರು ವಿದೇಶಿ ಪ್ರಜೆಗಳ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಯುವತಿ ಸೇರಿದಂತೆ ಮೂವರು ವಿದೇಶಿ ಪ್ರಜೆಗಳ ಮೇಲೆ ಕೊತ್ತನೂರು ಸಮೀಪದ ಭೈರತಿಯಲ್ಲಿ ಸೋಮವಾರ ತಡ ರಾತ್ರಿ ಹಲ್ಲೆ ನಡೆದಿದೆ.
ಆಫ್ರಿಕಾ ಮೂಲದ ಜಾನ್, ಹೆನ್ರಿ ಹಾಗೂ ಜಾನ್ ಸೋದರಿ ಹಲ್ಲೆಗೊಳಗಾದವರು. ಭೈರತಿ ಸಮೀಪ ಹೋಟೆಲ್ ವೊಂದರಲ್ಲಿ ಊಟ ಮುಗಿಸಿ ಹಿಂದಿರುಗುತ್ತಿದ್ದಾಗ ಹಲ್ಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ಭಾರತೀಯನ ಮೇಲಿನ ಹಲ್ಲೆ ಸತ್ಯ ಚಿಚ್ಚಿಡುವ ವಿಡಿಯೋ]

ಅತಿವೇಗವಾಗಿ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ವಿದೇಶೀಯರು ಜೋರಾಗಿ ಕಿರುಚುತ್ತಿದ್ದರು. ಅಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದನ್ನು ಸ್ಥಳೀಯರು ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ ಎಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ.
ವಿದೇಶೀಯರ ವರ್ತನೆಯಿಂದ ಕೋಪಗೊಂಡ ಸ್ಥಳೀಯರು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಈ ದಾಳಿಯಿಂದ ತಪ್ಪಿಸಿಕೊಂಡ ಜಾನ್ ಸೋದರಿ ಹಾಗೂ ಗೆಳೆಯ ಹತ್ತಿರ ಪ್ರಾರ್ಥನಾ ಮಂದಿರಕ್ಕೆ ಹೋಗಿ ಆಶ್ರಯ ಪಡೆದಿದ್ದಾರೆ. ಆದರೆ, ಜನರ ಕೈಗೆ ಸಿಕ್ಕ ಜಾನ್ ಗೆ ಜನ ಏಟು ನೀಡಿದ್ದಾರೆ. ಹಲ್ಲೆ ಪರಿಣಾಮ ಜಾನ್ ಮತ್ತು ಹೆನ್ರಿಗೆ ಗಾಯಗಳಾಗಿವೆ.[ರಜೆ ನೀಡದ್ದಕ್ಕೆ ಮಾಲೀಕನ ಪತ್ನಿಯನ್ನೇ ಕೊಲೆಗೈದ ನೌಕರ!]
ಹಲ್ಲೆಗೊಳಗಾದವರ ಪೈಕಿ ಜಾನ್ ಸೋದರಿ ಹಾಗೂ ಹೆನ್ರಿ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಸಹೋದರಿಯ ಯೋಗಕ್ಷೇಮ ವಿಚಾರಿಸುವ ಸಲುವಾಗಿ ಜಾನ್ ಬೆಂಗಳೂರಿಗೆ ಬಂದಿದ್ದರು. ಸೋಮವಾರ ರಾತ್ರಿ ಭೈರತಿಯಲ್ಲಿ ತಂಗಿಯನ್ನು ಭೇಟಿಯಾದ ಜಾನ್ ನಂತರ ಆಕೆ ಜತೆ ಹೋಟೆಲ್‌ನಲ್ಲಿ ಊಟ ಮಾಡಿದ್ದರು.
ರಾತ್ರಿ ಪಾರ್ಟಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ತಮ್ಮನ್ನು ಅಡ್ಡಗಟ್ಟಿದ ಸ್ಥಳೀಯರು ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟು ಹಲ್ಲೆ ನಡೆಸದ್ದಾರೆ. ಅಲ್ಲದೇ ತಮ್ಮ ವಾಚ್, ಮೊಬೈಲ್ ಹಾಗೂ ಪರ್ಸ್ ದೋಚಿದ್ದಾರೆ ಎಂದು ಗಾಯಾಳು ಜಾನ್ ಆರೋಪಿಸಿದ್ದಾರೆ.[ಚುಡಾಯಿಸಿದ್ದನ್ನು ಪ್ರಶ್ನಿಸಿದ ಮಣಿಪುರ ವಿದ್ಯಾರ್ಥಿಗೆ ಥಳಿತ]
ಕೊತ್ತನೂರು ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶೀಯರು ನೆಲೆಸಿದ್ದಾರೆ. ಕುಡಿದ ಅಮಲಿನಲ್ಲಿ ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications