ಇಂದು ಏರೋ ಇಂಡಿಯಾಗೆ ತೆರೆ,ಹರಿದು ಬಂತು ಬಂಡವಾಳ
ಬೆಂಗಳೂರು,ಫೆಬ್ರವರಿ 05:ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಇಂದು ತೆರೆ ಬೀಳಲಿದೆ.ಉಕ್ಕಿನ ಹಕ್ಕಿಗಳ ಆರ್ಭಟ ನಿಲ್ಲಲಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೊನೆಯ ದಿನವಾದ ಇಂದು ಮಧ್ಯಾಹ್ನ ಯಲಹಂಕ ವಾಯುನೆಲೆಗೆ ಭೇಟಿ ನೀಡಿ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ವಿದೇಶಿ ಗಣ್ಯರನ್ನು ಭೇಟಿ ಮಾಡಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕಳೆದೆರೆಡು ದಿನಗಳಿಂದ ನಡೆದ ವೈಮಾನಿಕ ಪ್ರದರ್ಶನದಲ್ಲಿ ದೇಶಿ ನಿರ್ಮಿತ ತೇಜಸ್,ಭಾರತೀಯ ವಾಯುಪಡೆಯ ಬತ್ತಳಿಕೆಯಲ್ಲಿರುವ ಸುಖೋಯ್,ರಫೇಲ್ ಯುದ್ಧ ವಿಮಾನಗಳು ಬಾನಿನಲ್ಲಿ ಕಸರತ್ತು ನಡೆಸಿತ್ತು.

ಈ ಬಾರಿಯ ಏರೋ ಶೋನಲ್ಲಿ ಅಮೆರಿಕದ ಬಿಇಒ ಬಾಂಬರ್ ವಿಮಾನ ಹೊರತುಪಡಿಸಿದರೆ ವಿದೇಶಿ ವಿಮಾನಗಳಾವುವೂ ಆಗಮಿಸದೆ ಇರುವುದು ಕೆಲವರಲ್ಲಿ ನಿರಾಸೆ ಮೂಡಿಸಿತ್ತು.
ವಿದೇಶದಿಂದ ಬಂದಿರುವ ಬೋಯಿಂಗ್,ಏರ್‌ಬಸ್,ಲುಫ್ತಾಂಜಾ,ಲಾಕ್ಹಿನ್‌ಹೆಡ್ ಸೇರಿದಂತೆ ಹಲವು ಕಂಪನಿಗಳು ಭಾರತೀಯ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದು, ಸಾವಿರಾರು ಕೋಟಿ ರೂಗಳ ಬಂಡವಾಳ ಹರಿದುಬಂದಿದೆ.
ಈಗಾಗಲೇ ಎಚ್‌ಎಎಲ್‌ನಲ್ಲಿ ಎಲ್‌ಸಿಎ ತೇಜಸ್ ತಯಾರಿಕೆಗೆ 48 ಸಾವಿರ ಕೋಟಿ ರೂ. ಒಪ್ಪಂದವಾಗಿದ್ದು,ಇದೇ ರೀತಿ ಹಲವು ದೇಶೀಯ ಕಂಪನಿಗಳಿಗೆ ವಿದೇಶಿ ಕಂಪನಿಗಳು ಹೂಡಿಕೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ.












Click it and Unblock the Notifications