Aero India 2023; ಭಾನುವಾರ ಬೆಂಗಳೂರಿಗೆ ಪ್ರಧಾನಿ ಮೋದಿ ಆಗಮನ
ಭಾರತದ ಪ್ರಧಾನಿ ಭಾನವಾರ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಸೋಮವಾರ ಏರ್ ಇಂಡಿಯಾ 2023 ಉದ್ಘಾಟಿಸಲಿರುವ ಮೋದಿ ಇಂದು ನಗರದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಬೆಂಗಳೂರು, ಫೆಬ್ರವರಿ 12; ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ 2023 ಸೋಮವಾರ ಆರಂಭವಾಗಲಿದ್ದು, ಮೋದಿ ಉದ್ಘಾಟಿಸಲಿದ್ದಾರೆ.
ನರೇಂದ್ರ ಮೋದಿ ಭಾನುವಾರ ರಾಜಸ್ಥಾನ ಪ್ರವಾಸ ಕೈಗೊಂಡಿದ್ದಾರೆ. ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿ ರಾತ್ರಿ 7.40ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಾಸ್ತವ್ಯ ಹೂಡಲಿದ್ದಾರೆ. ಸೋಮವಾರ ಬೆಳಗ್ಗೆ ಅವರು ಯಲಹಂಕಕ್ಕೆ ತೆರಳಲಿದ್ದು, ಬೆಳಗ್ಗೆ 9.30ಕ್ಕೆ ಏರೋ ಇಂಡಿಯಾ 2023 ಉದ್ಘಾಟಿಸಲಿದ್ದಾರೆ.

ಏರೋ ಇಂಡಿಯಾ 2023ರ ಉದ್ಘಾಟನಾ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ ಸಂಜೆ ಹೆಚ್‌ಎಎಲ್, ರಾಜಭವನದ ಸುತ್ತ ಸಂಚಾರ ದಟ್ಟಣೆ ಉಂಟಾಗಲಿದೆ. ಮೋದಿ ಸಾಗುವಾಗ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಲಿರಲಿದೆ. ಬೆಂಗಳೂರು ಪೊಲೀಸರು ಸಹ ಮೋದಿ ನಗರದಲ್ಲಿ ವಾಸ್ತವ್ಯ ಹೂಡುವುದರಿಂದ ಭಾರೀ ಭದ್ರತೆ ಕೈಗೊಂಡಿದ್ದಾರೆ.
ಏಷ್ಯಾದ ಅತಿ ದೊಡ್ಡ ಏರ್ ಶೋ; ಬೆಂಗಳೂರಿನ ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾ 2023 ಏಷ್ಯಾದ ಅತಿ ದೊಡ್ಡ ಏರ್ ಶೋ ಆಗಿದೆ. ವೈಮಾನಿಕ ಕ್ಷೇತ್ರದ ವಾಣಿಜ್ಯ ವಹಿವಾಟಿಗೆ ಇದು ಪ್ರಮುಖ ವೇದಿಕೆ.
ಭಾರತ ಮಾತ್ರವಲ್ಲ ವಿವಿಧ ದೇಶಗಳ ಪ್ರತಿನಿಧಿಗಳು ಈ ಏರ್ ಶೋನಲ್ಲಿ ಭಾಗವಹಿಸುತ್ತವೆ. ಲಕ್ಷಾಂತರ ಪ್ರತಿನಿಧಿಗಳು ಸಹ ಆಗಮಿಸುತ್ತಾರೆ. ವಿವಿಧ ಹೆಲಿಕಾಪ್ಟರ್, ವಿಮಾನಗಳ ಹಾರಾಟ ಜನರ ಗಮನ ಸೆಳೆಯುತ್ತದೆ.
ಈಗಾಗಲೇ ಏರೋ ಇಂಡಿಯಾ 2023 ಹಿನ್ನಲೆಯಲ್ಲಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ತಾಲೀಮು ನಡೆಸುತ್ತಿವೆ. ಯಲಹಂಕಕ್ಕೆ ಸಾವಿರಾರು ಜನರು ಆಗಮಿಸುವ ಹಿನ್ನಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ.
ಏರೋ ಇಂಡಿಯಾ 2023ರ ವೈಮಾನಿಕ ಪ್ರದರ್ಶನವನ್ನು ನೋಡಲು ಟಿಕೆಟ್ ಪಡೆಯಬೇಕು. ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್ ಮಾರಾಟ ನಡೆಯುತ್ತಿದೆ. ಏರೋ ಇಂಡಿಯಾ ಹಿನ್ನಲೆಯಲ್ಲಿ ಬೆಂಗಳೂರಿನ ವಿಮಾನ ನಿಲ್ದಾಣದ ವೇಳಾಪಟ್ಟಿಯನ್ನು ಸಹ ಬದಲಾವಣೆ ಮಾಡಲಾಗಿದೆ.












Click it and Unblock the Notifications