ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Aero India 2023 Ticket Price : ಬೆಂಗಳೂರಿನಲ್ಲಿ ಏರೋ ಇಂಡಿಯಾ 2023: ಟಿಕೆಟ್ ದರಗಳನ್ನು ಪರಿಶೀಲಿಸಿ

|
Google Oneindia Kannada News

ಬೆಂಗಳೂರು, ಡಿಸೆಂಬರ್‌, 14: 14ನೇ ಆವೃತ್ತಿಯ 2023ರ ಏರ್ ಶೋ ಫೆಬ್ರವರಿ 13ರಿಂದ ಬೆಂಗಳೂರು ನಗರದ ಹೊರವಲಯದಲ್ಲಿರುವ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದೆ. ಈ ಬಾರಿ ಏರೋ ಇಂಡಿಯಾದ ಟಿಕೆಟ್‌ಗಳ ದರಗಳಲ್ಲಿ ಯಾವುದೇ ಏರಿಕೆ ಇಲ್ಲ ಎಂದು ದಿ ಹಿಂದೂ ವರದಿ ಮಾಡಿದೆ.

Aero India 2023 Dates: ಬೆಂಗಳೂರಲ್ಲಿ 2023ನೇ ಸಾಲಿನ ಏರ್‌ಶೋಗೆ ದಿನಾಂಕ ನಿಗದಿAero India 2023 Dates: ಬೆಂಗಳೂರಲ್ಲಿ 2023ನೇ ಸಾಲಿನ ಏರ್‌ಶೋಗೆ ದಿನಾಂಕ ನಿಗದಿ

ಏರೋ ಇಂಡಿಯಾ ವೈಮಾನಿಕ ಪ್ರದರ್ಶನವು ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ಫೆಬ್ರವರಿ 13 ರಿಂದ 17, 2023 ರವರೆಗೆ ನಡೆಯಲಿದೆ. 2023ರ ಆವೃತ್ತಿಯ ಟಿಕೆಟ್‌ ದರಗಳು 2021ರ ಆವೃತ್ತಿಯನ್ನು ಹೋಲುತ್ತವೆ ಎನ್ನಲಾಗಿದೆ. ಏರ್‌ಶೋನ ಮೊದಲ ಮೂರು ದಿನಗಳ ವ್ಯಾಪಾರದ ಪಾಸ್‌ಗಳಿಗೆ ಭಾರತೀಯ ಪ್ರಜೆಗಳಿಗೆ 5,000 ರೂಪಾಯಿ, ವಿದೇಶಿ ಪ್ರಜೆಗಳಿಗೆ 150 ಡಾಲರ್‌ ಬೆಲೆಯನ್ನು ನಿಗದಿಪಡಿಸಲಾಗಿದೆ. ಇನ್ನು ಎರಡು ದಿನಗಳ ಸಾರ್ವಜನಿಕ ಪಾಸ್‌ಗಳಿಗೆ ಭಾರತೀಯರಿಗೆ 2,500 ರೂಪಾಯಿ ಮತ್ತು ವಿದೇಶಿ ಪ್ರಜೆಗಳಿಗೆ 50 ಡಾಲರ್‌ ವೆಚ್ಚವಾಗಲಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

Aero India 2023 in Bengaluru: Check ticket prices

ಏರ್‌ ಶೋ 2023, ಟಿಕೆಟ್‌ ದರದ ವಿವರ

ಕಳೆದ ಎರಡು ದಿನಗಳಲ್ಲಿ ಸಾಮಾನ್ಯ ಪಾಸ್‌ಗಳು ಏರ್ ಶೋ ಮತ್ತು ಪ್ರದರ್ಶನದ ಪ್ರದೇಶಕ್ಕೆ ತೆರಳಲು ಒದಗಿಸುತ್ತವೆ. ಕೇವಲ ಏರ್ ಡಿಸ್‌ಪ್ಲೇ ವೀಕ್ಷಣಾ ಪ್ರದೇಶದ ಪಾಸ್‌ಗಳನ್ನು 1,000 ರೂಪಾಯಿ, ವಿದೇಶಿ ಪ್ರಜೆಗಳಿಗೆ 50 ಡಾಲರ್‌ಗೆ ನಿಗದಿ ಮಾಡಲಾಗಿದೆ. ಹಿಂದೂ ವರದಿಯ ಪ್ರಕಾರ ಗ್ರಾಹಕರು ಡಿಸೆಂಬರ್ 31ರ ಮೊದಲು ತಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿದರೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಕಳೆದ ಆವೃತ್ತಿಯಲ್ಲಿ ಟಿಕೆಟ್‌ಗಳ ಬೆಲೆ ಭಾರತೀಯರಿಗೆ 1,000 ರೂಪಾಯಿ ಮತ್ತು ವಿದೇಶಿಯರಿಗೆ 40 ಡಾಲರ್‌ ಆಗಿತ್ತು.

ಫೆಬ್ರವರಿ 13ರಿಂದ ಏರ್‌ ಇಂಡಿಯಾ ಶೋ

ಕೇಂದ್ರ ರಕ್ಷಣಾ ಸಚಿವಾಲಯ ಪ್ರತಿ ಎರಡು ವರ್ಷಗಳಿಗೊಮ್ಮೆ ಏರ್ ಶೋ ಆಯೋಜನೆ ಮಾಡುತ್ತದೆ. ಬೆಂಗಳೂರು ನಗರ ಈ ಏರ್ ಶೋ ಆತಿಥ್ಯವನ್ನು ವಹಿಸುತ್ತದೆ. ಈ ಹಿಂದೆ ಏರ್ ಶೋ ಲಕ್ನೋಗೆ ಸ್ಥಳಾಂತರವಾಗಲಿದೆ ಎಂಬ ಸುದ್ದಿಗಳು ಹರಡಿದ್ದವು. ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಸಾವಿರಾರು ಕೋಟಿ ರೂಪಾಯಿ ಒಪ್ಪಂದಗಳಿಗೆ ಸಾಕ್ಷಿಯಾಗುತ್ತದೆ. ಅಲ್ಲದೇ ಏರ್ ಶೋ ನಡೆಯುವಾಗ ಹಕ್ಕಿಗಳ ಹಾರಾಟವನ್ನು ವೀಕ್ಷಣೆ ಮಾಡಲು ಲಕ್ಷಾಂತರ ಜನರು ಬರುತ್ತಾರೆ. ಬೆಂಗಳೂರಿನ ಯಲಹಂಕದಲ್ಲಿ 13ನೇ ಆವೃತ್ತಿಯ ಏರೋ ಇಂಡಿಯಾ ಪ್ರದರ್ಶನ 2021ರಲ್ಲಿ ನಡೆದಿತ್ತು. 14ನೇ ಆವೃತ್ತಿಯ ಪ್ರದರ್ಶನ 2023ರ ಫೆಬ್ಬವರಿ 13ರಿಂದ 17ರವರೆಗೂ ನಡೆಯಲಿದೆ. ರಕ್ಷಣಾ ಸಚಿವಾಲಯದ ಡಿಫೆನ್ಸ್ ಎಕ್ಸಿಬಿಷನ್ ಆರ್ಗನೈಜೇಷನ್ ವತಿಯಿಂದ ಏರೋ ಇಂಡಿಯಾ ಪ್ರದರ್ಶನದ ವೇಳೆ ವೈಮಾನಿಕ ಪ್ರದರ್ಶನ ನಡೆಯಲಿದೆ. ಆಕಾಶದಲ್ಲಿ ಹಲವಾರು ವಿಮಾನಗಳ ಸಾಹಸ ಪ್ರದರ್ಶನ ನೋಡುವುದು ಕಣ್ಣಿಗೆ ಹಬ್ಬವಾಗಿರುತ್ತದೆ. ಈ ಬಾರಿ ಹಕ್ಕಿಗಳ ಹಾರಾಟವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
14th edition Aero India will be held from February 13th to 17th at Yalahanka in Bengaluru city,. Check ticket prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X