Aero India 2023: ಏರೋ ಶೋ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ವಿಷಯಗಳು
ಬೆಂಗಳೂರು, ಫೆಬ್ರವರಿ. 12: ಸೋಮವಾರದಿಂದ ಆರಂಭವಾಗಲಿರುವ ಏರೋ ಇಂಡಿಯಾ ಶೋಗೆ ಬೆಂಗಳೂರು ಸಜ್ಜಾಗಿದ್ದು, ಯಲಹಂಕ ಏರ್ ಸ್ಟೇಷನ್‌ನಲ್ಲಿ ಈಗಾಗಲೇ ರಿಹರ್ಸಲ್ ಶುರುವಾಗಿದೆ. ಜಾಗತಿಕವಾಗಿ ಗಮನ ಸೆಳೆಯುತ್ತಿರುವ ಐದು ದಿನಗಳ ಈ ಏರ್ ಶೋ ಫೆಬ್ರವರಿ 17 ರಂದು ಕೊನೆಗೊಳ್ಳಲಿದೆ.
14ನೇ ಆವೃತ್ತಿಯ ಏರ್ ಶೋಗೆ ಬಿಎಂಟಿಸಿಯಿಂದ ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಿದೆ. ನಗರ ಸಂಚಾರಿ ಪೊಲೀಸರು ಮಾರ್ಗ ಬದಲಾವನೆ ಬಗ್ಗೆ ಈಗಾಗಲೇ ಸಲಹೆ ನೀಡಿದ್ದಾರೆ.
ಏರೋ ಇಂಡಿಯಾ ಶೋ 2023 ಬಗ್ಗೆ ತಿಳಿದುಕೊಳ್ಳಬೇಕಾದ ಐದು ವಿಷಯಗಳು.
1. ಈ ಬಾರಿಯ ದ್ವೈವಾರ್ಷಿಕ ಏರೋ ಇಂಡಿಯಾ ಪ್ರದರ್ಶನದಲ್ಲಿ ಒಟ್ಟು 809 ಪ್ರದರ್ಶಕರು ಭಾಗವಹಿಸಲಿದ್ದಾರೆ. ಅದರಲ್ಲಿ 110 ವಿದೇಶಿ ಪ್ರದರ್ಶಕರು ಮತ್ತು 699 ಭಾರತೀಯ ಪ್ರದರ್ಶಕರು ಭಾಗವಹಿಸಲಿದ್ದಾರೆ.

2. ಅನೇಕ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಆಗಸದಲ್ಲಿ ಪ್ರದರ್ಶನ ನೀಡುತ್ತವೆ. ಇದರಲ್ಲಿ ರಕ್ಷಣಾ ಪ್ರದರ್ಶನವನ್ನು ಸಹ ನಿಗದಿಪಡಿಸಲಾಗಿದೆ. ಈ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಐದು ದಿನಗಳ ವೇಳಾಪಟ್ಟಿಯಲ್ಲಿ ಅನೇಕ ಏರೋಬ್ಯಾಟಿಕ್ ಪ್ರದರ್ಶನಗಳು ಸಹ ಇವೆ.
3. ಐಎಎಫ್‌ನ ತೇಜಸ್ ವಿಮಾನವು ಹಗುರವಾದ, ಹೆಚ್ಚು ಸೂಪರ್‌ಸಾನಿಕ್ ಫೈಟರ್ ಆಗಿದ್ದು, ಏರೋ ಇಂಡಿಯಾ ಪ್ರದರ್ಶನದಲ್ಲಿ ಹೈಲೈಟ್ ಆಗುವ ನಿರೀಕ್ಷೆಯಿದೆ.
4. ನಗರದಲ್ಲಿ ಏರೋ ಇಂಡಿಯಾ ಶೋ ನಡೆಯುವುದರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನಗಳ ಮೇಲೆ ಭಾರಿ ಪರಿಣಾಮ ಬೀರಲಿದೆ. ಬೆಂಗಳೂರಿನಲ್ಲಿ ಏರ್ ಶೋ ನಡೆಯುತ್ತಿರುವ ಕಾರಣ ವಿಮಾನ ರದ್ದತಿ ಮತ್ತು ವಿಮಾನಗಳ ವಿಳಂಬದ ಬಗ್ಗೆ ವಿಮಾನಯಾನ ಸಂಸ್ಥೆಗಳು ಈಗಾಗಲೇ ಪ್ರಯಾಣಿಕರಿಗೆ ಎಚ್ಚರಿಕೆ ನೀಡುತ್ತಿವೆ.

5. ಏರೋ ಇಂಡಿಯಾ ಶೋ ಫೆಬ್ರವರಿ 16 ಮತ್ತು 17 ರಂದು ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ. ಏರ್ ಶೋಗೆ ಹೋಗಲು ಬಯಸುವವರು ಪ್ರತಿ ಟಿಕೆಟ್‌ಗೆ 2500 ರೂಪಾಯಿ ಪಾವತಿಸಬೇಕು. ಈ ಟಿಕೆಟ್‌ಗಳನ್ನು ಅಧಿಕೃತ ವೆಬ್‌ಸೈಟ್ aeroindia.gov.in ನಲ್ಲಿ ಖರೀದಿಸಬಹುದು.












Click it and Unblock the Notifications