Driverless Metro: ಬೆಂಗಳೂರಲ್ಲೂ ಓಡಾಡಲಿವೆ ಚಾಲಕ ರಹಿತ ಮೆಟ್ರೋ ರೈಲು, ವಿಶೇಷತೆ ಏನು?, ಮಾಹಿತಿ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ 2023 ನಲ್ಲಿ ಎಲ್ಲರನ್ನು ಆಕರ್ಷಿಸಿದ BEML ತಯಾರಿಸಿದ ಚಾಲಕ ರಹಿತ ಮೆಟ್ರೋ ರೈಲುಗಳು ಬೆಂಗಳೂರಿನಲ್ಲಿ ಓಡಾಡಲಿವೆ, ಈ ರೈಲುಗಳ ವಿಶೇಷತೆ ತಿಳಿಯಿರಿ.
ಬೆಂಗಳೂರು, ಫೆಬ್ರವರಿ 15: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್ ಶೋ 2023 ನಲ್ಲಿ ಎಲ್ಲರನ್ನು ಆಕರ್ಷಿಸಿದ BEML ತಯಾರಿಸಿದ ಚಾಲಕ ರಹಿತ ಮೆಟ್ರೋ ರೈಲುಗಳು ಬೆಂಗಳೂರಿನಲ್ಲಿ ಓಡಾಡಲಿವೆ.
ಈ ಚಾಲಕನಿಲ್ಲದೇ ಓಡಾಡುವ ಈ ಮೆಟ್ರೋ ರೈಲುಗಳನ್ನು ಬಿಇಎಂಎಲ್ (Bharat Earth Movers Limited- BEML) ತಯಾರಿಸಿದೆ. ಈ ಮೂಲಕ ಭಾರತದಲ್ಲಿ ಚಾಲಕ ರಹಿತ ಮೆಟ್ರೋ ರೈಲು ತಯಾರಿಸಿದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೂ ಬಿಇಎಂಎಲ್ ಪಾತ್ರವಾಗಿದೆ.
ಚಾಲಕ ರಹಿತ ಮೆಟ್ರೋ ರೈಲು ಏರೋ ಇಂಡಿಯಾ (Aero India 2023)ದಲ್ಲಿ ಪ್ರದರ್ಶನಕ್ಕೆ ಇತ್ತು. ಗಮನ ಸೆಳೆದಿದೆ. ಬಿಇಎಂಎಲ್ ತಾನು ತಯಾರಿಸಿದ ರೈಲುಗಳ ಪೈಕಿ 25 ಅನ್ನು ಬೃಹತ್ ನಗರ ಮುಂಬೈಗೆ ಪೂರೈಸಿದೆ. ಆದರೆ ಅಲ್ಲಿ ಸೂಕ್ತ ಚಾಲನಾ ವ್ಯವಸ್ಥೆಯಂತಹ ಮೂಲಸೌಕರ್ಯ ಇಲ್ಲದಿರುವುರಿಂದ ಚಾಲಕ ಸಹಿತವಾಗೇ 2 ಲೇನ್‌ಗಳಲ್ಲಿ ಓಡಾಡುತ್ತಿವೆ ಎನ್ನಲಾಗಿದೆ.

ಅದೇ ರೀತಿ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೂ ಡ್ರೈವರ್ ಇಲ್ಲದ ಮೆಟ್ರೋ ರೈಲುಗಳು ಓಡಾಡಲಿವೆ. ಈಗಾಗಲೇ ಬಿಇಎಂಲ್ ಉತ್ಪಾದನಾ ಘಟಕದಲ್ಲಿ ರೈಲುಗಳು ಸಿದ್ಧವಾಗುತ್ತಿವೆ.
ಈ ಮೆಟ್ರೋ ರೈಲಿನ ವಿಶೇಷತೆ ಏನು?
ಈ ಚಾಲಕ ರಹಿತ ಮೆಟ್ರೋ ರೈಲುಳನ್ನು ನಿಯಂತ್ರಣಾ ಕೊಠಡಿಯಿಂದ (Control room) ನಿರ್ವಹಿಸಲಾಗುತ್ತದೆ. ಈ ರೈಲು ಒಟ್ಟು ಆರು ಬೋಗಿಗಳನ್ನು ಹೊಂದಿರಲಿದೆ. ಒಂದು ರೈಲಿನಲ್ಲಿ ಸುಮಾರು 2000ಕ್ಕೂ ಹೆಚ್ಚು ಮಂದಿ ಒಂದೇ ಬಾರಿಗೆ ಪ್ರಯಾಣಿಸಬಹುದು. ಪ್ರತಿ ಗಂಟೆಗೆ 80 ಕಿಲೋ ಮೀಟರ್ ಗರಿಷ್ಠ ವೇಗದಲ್ಲಿ ಪ್ರಯಾಣಿಸುವ ಸಾಮರ್ಥ್ಯ ಈ ರೈಲಿ ಇದೆ. ಉಕ್ಕು ಸಹಿತ ಬೋಗಿಯನ್ನು ಇವು ಹೊಂದಿರಲಿವೆ. ಬೋಗಿಗಳು ತುಸು ದೊಡ್ಡದಾಗಿದ್ದು, ಒಳಗೆ ಸಿಸಿಟಿವಿ ಅಳವಡಿಸಲಾಗಿದೆ.
ಇಂತಹ ರೈಲುಗಳು ನಗರದಲ್ಲಿ ಸಂಚರಿಸಬೇಕಾದರೆ ಅವುಗಳಿಗೆಂದೆ ಪ್ರತ್ಯೇಕವಾಗಿ ಮೇಲ್ಭಾಗದಲ್ಲಿ ಪ್ರತ್ಯೇಕ ಎಲೆಕ್ಟ್ರಿಕ್ ಲೈನ್ ಹಾಕಬೇಕು. ಒಟ್ಟು 20 ಕಿಲೋ ವೋಲ್ಟ್ ವಿದ್ಯುತ್ ಬಳಸಿಕೊಂಡು ಸಂಚಾರ ಸೇವೆ ನೀಡುತ್ತದೆ. ಬೆಂಗಳೂರಿನಲ್ಲಿ ಸದ್ಯಕ್ಕಿರುವ ನಮ್ಮ ಮೆಟ್ರೊ 750 ಕಿಲೋ ವೋಲ್ಟ ವಿದ್ಯುತ್ ಬಳಕೆ ಮಾಡಿಕೊಂಡು ಸಂಚರಿಸುತ್ತದೆ ಎಂದು ಬಿಇಎಂಎಲ್ ಅಧಿಕಾರಿಯೊಬ್ಬರು ತಿಳಿಸಿದರು ಎಂದು ಬೆಂಗಳೂರು ವೈರ್ ವರದಿ ಮಾಡಿದೆ.

ದೇಶದಲ್ಲೇ ಮೊದಲ ಬಾರಿಗೆ ಚಾಲಕರಿಲ್ಲ ಮೆಟ್ರೋ ರೈಲು ಸಂಚಾರ ನಡೆಸಿದೆ. ಅದೇ ರೀತಿ ಬೆಂಗಳೂರಿನಲ್ಲಿ ಓಡಾಟ ನಡೆಸಬೇಕಾದರೆ ಪ್ರತ್ಯೇಕ ಹಳಿ/ ವಿದ್ಯುತ್ ವೈರ್ ಅಳವಡಿಕೆ ಅಗತ್ಯವಿದೆ. ಈಗಿರುವ ಮೆಟ್ರೋ ಹಳಿಗಳ ಮೇಲೆ ಪ್ರಯಾಣ ಅಸಾಧ್ಯ. ಹೀಗಿದ್ದರೂ ಭವಿಷ್ಯದಲ್ಲಿ ನಗರದಲ್ಲಿ ಚಾಲಕ ರಹಿತ ಮೆಟ್ರೋ ಸೇವೆ ನಿರೀಕ್ಷಿಸಬಹುದಾಗಿದೆ.












Click it and Unblock the Notifications