Get Updates
Get notified of breaking news, exclusive insights, and must-see stories!

Breaking; ಪೊಲೀಸರಿಂದ ವಕೀಲ ಜಗದೀಶ್ ಬಂಧನ

ಬೆಂಗಳೂರು, ಫೆಬ್ರವರಿ 13; ಭಾನುವಾರ ಬೆಳಗ್ಗೆ ಪೊಲೀಸರು ವಕೀಲ ಜಗದೀಶ್ ಕೆ. ಎನ್. ಮಹಾದೇವ್ ಬಂಧಿಸಿದ್ದರು. ಅವರ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಜಗದೀಶ್ ಕೋವಿಡ್ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ.

ಪೊಲೀಸರು 1ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಜಗದೀಶ್ ಹಾಜರುಪಡಿಸಿದರು. ಜಗದೀಶ್ ಕೆ. ಎನ್. ಮಹಾದೇವ್‌ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.

ವಕೀಲ ಜಗದೀಶ್ ಬಂಧನ; ಬೆಂಗಳೂರಿನ ಹಲಸೂರು ಗೇಟ್ ಠಾಣೆ ಪೊಲೀಸರು ವಕೀಲ, ಆಮ್ ಆದ್ಮಿ ಪಕ್ಷದ ನಾಯಕ ಜಗದೀಶ್ ಕೆ. ಎನ್. ಮಹಾದೇವ್ ಬಂಧಿಸಿದ್ದಾರೆ. ನ್ಯಾಯಾಧೀಶರ ಮುಂದೆ ಸಂಜೆ ಅವರನ್ನು ಹಾಜರುಪಡಿಸುವ ನಿರೀಕ್ಷೆ ಇದೆ.

ಶುಕ್ರವಾರ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ವಕೀಲ ಜಗದೀಶ್‌ ಬಂಧಿಸಲಾಗಿದೆ. ಗಲಾಟೆ ಪ್ರಕರಣದ ಬಗ್ಗೆ ಎರಡು ದಿನದಿಂದ ಭಾರೀ ಚರ್ಚೆ ನಡೆಯುತ್ತಿತ್ತು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ವಕೀಲರನ್ನು ಅವಾಚ್ಯಶಬ್ದಗಳಿಂದ ನಿಂದಿಸಿದ ಕೆ. ಎನ್. ಜಗದೀಶ್ ಮಹಾದೇವ್ ವಿರುದ್ಧ ಶನಿವಾರ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್‌ಗೆ ದೂರ ನೀಡಿದ್ದರು.

Advocate Jagadish Arrested By Bengaluru Police

ಕೋರ್ಟ್ ಆವರಣದಲ್ಲಿ ನಡೆದ ಗಲಾಡೆ ವಿಚಾರದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು, ಪವಿತ್ರವಾದ ನ್ಯಾಯ ದೇವತೆಯ ಅಂಗಳದಲ್ಲಿ ಶಾಂತಿಯಿಂದ ಕಾರ್ಯ ನಿರ್ವಹಿಸಲು ವಕೀಲರಿಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು.

ಈ ಕುರಿತು ಫೇಸ್ ಬುಕ್ ಪೋಸ್ಟ್ ಹಾಕಿದ್ದ ವಿವೇಕ್ ಸುಬ್ಬಾರೆಡ್ಡಿ, 'ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಎಲ್ಲಾ ಘಟನೆಗಳನ್ನೂ ಬೆಂಗಳೂರು ವಕೀಲರ ಸಂಘ ಗಂಭೀರವಾಗಿ ಪರಿಗಣಿಸಿದೆ. ಕಪ್ಪು ಕೋಟು ಧರಿಸಿ ನ್ಯಾಯಕ್ಕಾಗಿ ಹೋರಾಡುವ ಪ್ರತಿಯೊಬ್ಬ ವಕೀಲರ ಯೋಗಕ್ಷೇಮವೇ ವಕೀಲರ ಸಂಘದ ಮುಖ್ಯ ಉದ್ದೇಶ. ನಾನು ಚುನಾವಣೆಗೂ ಮುಂಚೆ ಕೊಟ್ಟ ಭರವಸೆಯಂತೆ ವಕೀಲರ ಹಿತರಕ್ಷಣೆಗೆ ಸದಾ ಸಿದ್ಧನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ವಕೀಲ ಮಿತ್ರರ ಬಗ್ಗೆ ಹಗುರವಾಗಿ ಮಾತನಾಡುವುದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಕೀಲರನ್ನು ಅವಾಚ್ಯಶಬ್ದಗಳಿಂದ ನಿಂದಿಸಿದ ಕೆ.ಎನ್ ಜಗದೀಶ್ ಮಹಾದೇವ್ ಅವರ ವಿರುದ್ಧ ಇಂದು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂಥ್ ಅವರಿಗೆ ದೂರು ಸಲ್ಲಿಸಲಾಯ್ತು' ಎಂದು ಹೇಳಿದ್ದರು.

ಶುಕ್ರವಾರ ಕೆ. ಎನ್. ಜಗದೀಶ್ ಮಹಾದೇವ್ ಸಹೋದ್ಯೋಗಿಗಳು, ಜಗದೀಶ್ ಪುತ್ರನ ಆರ್ಯನ್ ಜೊತೆ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ದಾಖಲೆಗಳನ್ನು ಸಲ್ಲಿಸಲು ಹೋಗುತ್ತಿದ್ದಾಗ ಆರ್ಯನ್ ಮೇಲೆ ಹಲ್ಲೆ ನಡೆದಿತ್ತು.

ಆರ್ಯನ್ ಮೇಲೆ 20 ಜನರು ಕೋರ್ಟ್ ಆವರಣದಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಕೆ. ಎನ್. ಜಗದೀಶ್ ಮಹಾದೇವ್ ಪೊಲೀಸರಿಗೆ ದೂರು ನೀಡಿದ್ದರು. ಆರ್ಯನ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಫೇಸ್ ಬುಕ್ ಲೈವ್ ಮೂಲಕ ಮಾಹಿತಿ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+