ಬೆಂಗಳೂರು ಪ್ರಯಾಣಿಕರಿಗೆ ಸಿಹಿ ಸುದ್ದಿ: ಈ 2 ಮಾರ್ಗದಲ್ಲಿ ಹೆಚ್ಚುವರಿ ಬಸ್‌ಗಳ ಸಂಚಾರ ಆರಂಭ, ವಿವರ
ಬೆಂಗಳೂರು, ಮೇ 26: ಬೆಂಗಳೂರಿನ ಜನಸಂಖ್ಯೆ ಹೆಚ್ಚುತ್ತಿದೆ. ಇತ್ತ ಕೊರೊನಾ ನಂತರ ಜನರು ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿನ ಪ್ರಮಾಣದ ಬಳಕೆಯತ್ತ ಒಲವು ತೋರುತ್ತಿದ್ದಾರೆ. ಹೀಗಾಗಿ ನಗರದ ಈ ಮಾರ್ಗದಲ್ಲಿ ಬಿಎಂಟಿಸಿಯು ಹೆಚ್ಚುವರಿ ಬಸ್‌ಗಳ ಸೇವೆಗೆ ಅವಕಾಶ ಕಲ್ಪಿಸಲಾಗಿದೆ.
ಮಾರ್ಗ ಸಂಖ್ಯೆ 501 ಎನ್ನಲಾಗುವ ನಗರದ ನಾಯಂಡಹಳ್ಳಿ ಜಂಕ್ಷನ್‌ನಿಂದ ಹೆಬ್ಬಾಳಕ್ಕೆ ಹೆಚ್ಚುವರಿ ಬಸ್‌ಗಳ ಸೇವೆಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಒದಗಿಸಿದೆ. ಈ ಮಾರ್ಗದಲ್ಲಿ ಮೇ 25ರಂದು ಗುರುವಾರದಿಂದಲೇ ಬಸ್‌ಗಳು ಸಂಚಾರ ಆರಂಭಿಸಲಿವೆ. ಇದರಿಂದಾಗಿ ಈ ಭಾಗದ ಸಾವಿರಾರು ಜನರಿಗೆ ಸಂಚಾರ ಸುಗಮವಾಗಿದೆ.

ಬಿಎಂಟಿಸ್ ಬಸ್‌ಗಳು ನಾಯಂಡಹಳ್ಳಿ ಜಂಕ್ಷನ್‌ನಿಂದ ಸಾಂಚಾರ ಆರಂಭಿಸಿದರೆ ಅಲ್ಲಿಂದ ನೇರವಾಗಿ ನಾಗರಭಾವಿ ವೃತ್ತ, ಸುಮನಹಳ್ಳಿ ಜಂಕ್ಷನ್, ಲೂರ್ದಬಾಯಿ ಸಮುದಾಯ ಭವನ, ಬಿಡಿಎ ಬಸ್ ಬೇ ಮಾರ್ಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಕಾಲೋನಿ, ಗೊರಗುಂಟೆಪಾಳ್ಯ, ಬಿಇಎಲ್ ವೃತ್ತದ ಮೂಲಕ ಸಾಗಿ ದೇವಿನಗರ ಕ್ರಾಸ್ ಮಾರ್ಗವಾಗಿ ಹೆಬ್ಬಾಳ್ ತಲುಪುತ್ತವೆ. ಈ ಬಸ್ ಗಳು ಕಾರ್ಯಾಚರಣೆ ಮಾಡಲಿವೆ.
ಈ ಮಾರ್ಗದ ಜೊತೆಗೆ ಕೆಂಗೇರಿ ಟಿಟಿಎಂಸಿಯಿಂದ ಕೊಮ್ಮಘಟ್ಟ ಕ್ರಾಸ್, ವಿಶ್ವೇಶ್ವರಯ್ಯ ಬಡಾವಣೆ, ಉಪಕಾರ್ ಬಡಾವಣೆ ಕ್ರಾಸ್, ಮುದ್ದಯ್ಯನಪಾಳ್ಯ ಜಂಕ್ಷನ್, ಸುಂಕದಕಟ್ಟೆ, ಪೀಣ್ಯ 2ನೇ ಹಂತದ ಮಾರ್ಗವಾಗಿ ಜಾಲಹಳ್ಳಿ ಕ್ರಾಸ್‌ವರೆಗಿನ ಮಾರ್ಗದ ಸಂಖ್ಯೆ 515ಕ್ಕೂ ಹೆಚ್ಚುಯಾಗಿ ಬಿಎಂಟಿಸಿ ನಿಗಮವು ಐದು ಬಸ್‌ಗಳನ್ನು ಗುರುವಾರ ಪಚಯಿಸಿದೆ.
ಈ ಮಾರ್ಗದಲ್ಲಿ ಮೆಟ್ರೋ ಇಲ್ಲದೇ ಎಲ್ಲ ಪ್ರಯಾಣಿಕರು ಬಸ್ ಇಲ್ಲವೇ ಆಟೋಗಳನ್ನೇ ಅವಲಂಬಿಸಿದ್ದರು. ಆಟೋಗಳಿಗೆ ಹೆಚ್ಚಿನ ದುಡ್ಡು ಕೊಡಬೇಕಿತ್ತು. ತುರ್ತು ಸಂದರ್ಭದಲ್ಲಿ ಸಾಕಷ್ಟು ತೊಂದರೆಯಾಗಿತ್ತು. ಇದೀಗ ಆ ಸಮಸ್ಯೆ ಬಗೆಹರಿದಿದೆ. ಕಡಿಮೆ ಅವಧಿಯಲ್ಲಿ ಸುರಿಕ್ಷಿತವಾಗಿ ಜನರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ.

ಹೆಚ್ಚುವರಿ ಬಸ್ ಬಿಟ್ಟ ಬಗ್ಗೆ ಸಾರಿಗೆ ಇಲಾಖೆ ನಿರ್ಧಾರ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಯಾಣಿಕರೊಬ್ಬರು, ಈ ಎರಡು ಮಾರ್ಗಗಳಲ್ಲಿ ಪ್ರತಿ 15 ನಿಮಿಷಗಳ ಅಂತರದಲ್ಲಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿವೆ. ಈ ಮೊದಲು ಇಲ್ಲಿಂದ ಬೇರೆಡೆಗೆ ತೆರಳುವುದು ತ್ರಾಸದಾಯಕವಾಗಿತ್ತು ಎಂದು ಅವರು ಹೇಳಿದರು.
ಬಸ್ ಬಿಡಿಭಾಗಗಳ ಕಳವು: ಸಿಬ್ಬಂದಿಯೇ ಶಾಮೀಲು
ವಿವಿಧ ಮಾರ್ಗಗಳಲ್ಲಿ ಕಾರ್ಯಾಚರಣೆ ಮಾಡಿ ಬಂದು ನಿಲ್ಲುವ ಬಿಎಂಟಿಸಿ ಬಸ್ ಗಳ ಬಿಡಿಭಾಗಗಳನ್ನು ಡಿಪೋಗಳಲ್ಲಿಯೇ ಕಳ್ಳತನವಾಗುತ್ತಿವೆ. ಈ ಬಗ್ಗೆ ವ್ಯಾಪಕ ಆರೋಪ ಕೇಳಿ ಬಂದಿತ್ತು. ಇದರ ನಡುವೆ ಶಾಂತಿನಗರ ಡಿಪೋ-3ರಲ್ಲಿ ಬಿಡಿಭಾಗಗಳ ಕಳವು ಕೃತ್ಯದಲ್ಲಿ ಭದ್ರತಾ ಸಿಬ್ಬಂದಿಯೇ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಬೇಲಿಯೇ ಎದ್ದು ಹೋಲ ಮೇದಂತೆ ಎಂಬ ಮಾತು ಅಕ್ಷರಶಃ ಬಿಎಂಟಿಸಿಯಲ್ಲಿ ನಿಜವಾಗಿದೆ.
ಡಿಪೋದಲ್ಲಿ ಬಸ್‌ಗಳ ಬಿಡಿಭಾಗಗಳನ್ನು ಕಳವು ಮಾಡಿಕೊಂಡು ಹೋಗಲು ಸಿಬ್ಬಂದಿ ನಟೇಶ್ ಎಂಬಾತನೇ ಕಳ್ಳರಿಗೆ ಅವಕಾಶ ಮಾಡಿಕೊಡುತ್ತಿದ್ದ ಎಂಬುದು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರಿಂದ ಬಯಲಾಗಿದೆ. ಕಳೆದ ಮೇ 16ರಂದು ರಾತ್ರಿ ಪಾಳಿ ಕೆಲಸಕ್ಕೆ ನಿಯೋಜನೆಗೊಂಡಿದ್ದ ನಟೇಶ್. ಅದೇ ರಾತ್ರಿ ಖಾಸಗಿ ಗೂಡ್ಸ್ ವಾಹನದಲ್ಲಿ ಬಂದಿದ್ದ ನೂರ್, ಗೇರ್ ಬಾಕ್ಸ್, ಬೆಲ್ ಹೌಸಿಂಗ್ ಸೇರಿ ಇನ್ನಿತರೆ ಬಿಡಿಭಾಗಗಳ ಕಳ್ಳತನವಾಗಿದೆ ಎಂದು ಪೊಲೀಸರು ವಿಚಾರಣೆ ವೇಳೆ ಬಾಯಿ ಬಿಡಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.












Click it and Unblock the Notifications