ಪೆರಿಫೆರಲ್‌ ವರ್ತುಲ ರಸ್ತೆ; 172 ಎಕರೆ ಹೆಚ್ಚುವರಿ ಭೂ ಸ್ವಾಧೀನ

ಬೆಂಗಳೂರು, ಅಕ್ಟೋಬರ್ 11: ಬೆಂಗಳೂರು ನಗರದ ಬಹು ನಿರೀಕ್ಷಿತ ಪಿಆರ್‌ಆರ್‌ ರಸ್ತೆ ಕಾಮಗಾರಿಗೆ 172 ಎಕರೆ ಹೆಚ್ಚುವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಯೋಜನೆಗೆ ಅಗತ್ಯವಿರುವ ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆಗೆ ಒಟ್ಟು 589.14 ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

43 ಕಿ. ಮೀ. ಇರುವ ನೈಸ್ ರಿಂಗ್ ರಸ್ತೆ ತುಮಕೂರು ರಸ್ತೆ-ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಈ ರಸ್ತೆ ಮೈಸೂರು ರಸ್ತೆ, ಕನಕಪುರ, ಬನ್ನೇರುಘಟ್ಟ ರಸ್ತೆ ಮೂಲಕ ಹಾದು ಹೋಗುತ್ತದೆ.

Additional 172 Acre Of Land For PRR Road Project

ಈಗ ಯೋಜನೆ ಸಿದ್ಧವಾಗಿರುವ ಪಿಪಿಆರ್ ರಸ್ತೆ ತುಮಕೂರು ರಸ್ತೆ, ಹೊಸೂರು ರಸ್ತೆಯನ್ನು ವಿಮಾನ ನಿಲ್ದಾಣ, ಕೆ. ಆರ್. ಪುರಂ ರೋಡ್ ಜಂಕ್ಷನ್‌ಗಳ ಮೂಲಕ ಸಂಪರ್ಕಿಸುತ್ತದೆ.

ಹೊಸದಾಗಿ 172 ಎಕರೆ ಪ್ರದೇಶವನ್ನು ಸ್ವಾಧೀನ ಮಾಡಿಕೊಳ್ಳಲು ಸರ್ಕಾರ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಇದಕ್ಕಾಗಿ ಹೆಚ್ಚುವರಿಯಾಗಿ 3000 ಕೋಟಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.

ಪೆರಿಫೆರಲ್‌ ವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಂಡ ತಕ್ಷಣ ಟೋಲ್ ಅಳವಡಿಕೆ ಮಾಡಲಾಗುತ್ತದೆ. ಒಟ್ಟು 17 ಟೋಲ್ ಬೂತ್‌ಗಳು ಈ ರಸ್ತೆಯಲ್ಲಿ ಬರುತ್ತದೆ. ಪಿಆರ್‌ಆರ್‌ ರಸ್ತೆ 65.5 ಕಿ. ಮೀ. ಎಂದು ಮೊದಲು ಅಂದಾಜಿಸಲಾಗಿತ್ತು. ಈಗ ಅದು 68.5 ಕಿ. ಮೀ. ಉದ್ದದ ಮಾರ್ಗವಾಗಲಿದೆ.

ಪೆರಿಫೆರಲ್‌ ವರ್ತುಲ ರಸ್ತೆ ಯೋಜನೆ ಮೊದಲು ಸಿದ್ಧವಾಗಿದ್ದು 2007ರಲ್ಲಿ. ಆಗ ಯೋಜನಾ ವೆಚ್ಚ 8 ಸಾವಿರ ಕೋಟಿ ಆಗಿತ್ತು. 2018ರಲ್ಲಿ ಅದನ್ನು ಪುನರ್ ರಚನೆ ಮಾಡಿದಾ ವೆಚ್ಚ 17,313 ಕೋಟಿ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+