Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಆಯುಷ್ ಮಳಿಗೆ ಉದ್ಘಾಟಿಸಿದ ನಟಿ ತಮನ್ನಾ

ಬೆಂಗಳೂರು, ಸೆಪ್ಟೆಂಬರ್ 09: ಬೆಂಗಳೂರಿನಲ್ಲಿ ಮೊಟ್ಟಮೊದಲ ಲಿವರ್ ಆಯುಷ್ ಥೆರಪಿ ಸ್ಟೋರ್ ಆರಂಭವಾಗಿದೆ. ತನ್ನದೇ ಬ್ರ್ಯಾಂಡ್ ಆಗಿರುವ ಲಿವರ್ ಆಯುಷ್‍ನ ಈ ಥೆರಪಿ ಸ್ಟೋರ್ 5000 ವರ್ಷದಷ್ಟು ಅತ್ಯಂತ ಪುರಾತನವಾದ ಆಯುರ್ವೇದ ಜ್ಞಾನವನ್ನು ತಂದಿದೆ. ಲಿವರ್ ಆಯುಷ್‍ನ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ತಮನ್ನಾ ಭಾಟಿಯಾ ಅವರು ಈ ಲಿವರ್ ಆಯುಷ್ ಸ್ಟೋರ್ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು, ಸಂಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಮೂಲಕ ಗ್ರಾಹಕರು ಎದುರಿಸುತ್ತಿರುವ ಈ ಆಧುನಿಕವಾದ ಸೌಂದರ್ಯದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನೆರವಾಗಲಿದೆ. ಆಯುರ್ವೇದ ವಿಜ್ಞಾನದ ಪ್ರಚಾರದಲ್ಲಿ ತೊಡಗಿರುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಎವಿಪಿ-'ಆರ್ಯ ವೈದ್ಯ ಫಾರ್ಮಸಿ' ಜತೆ ಒಪ್ಪಂದ ಮಾಡಿಕೊಂಡಿದ್ದು, ಈ ಮೂಲಕ ಲಿವರ್ ಆಯುಷ್‍ನ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ನೀಡಲಿದೆ.

ಲಿವರ್ ಆಯುಷ್ ಥೆರಪಿ ಸ್ಟೋರ್ ವಿಶೇಷವಾದ ಆಯುರ್ವೇದ ಸೇವೆಗಳನ್ನು ನೀಡಲಿದೆ. ಇಲ್ಲಿ ಆಯುರ್ವೇದ ವೈದ್ಯರಿಂದ ಉಚಿತ ಕನ್ಸಲ್ಟೇಶನ್ ಸೇವೆಯೂ ಲಭ್ಯವಿದೆ. ಈ ಮೂಲಕ ತ್ವರಿತವಾಗಿ ದೋಷ ವಿಶ್ಲೇಷಣೆ ಮಾಡಿ ಅದನ್ನು ಶಮನ ಮಾಡುವ ಸೂಕ್ತ ಉತ್ಪನ್ನಗಳು ಮತ್ತು ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಅದೂ ಕೂಡ ಗ್ರಾಹಕರ ದೇಹಕ್ಕೆ ಹೊಂದಿಕೊಳ್ಳುವಂತಹ ಔಷಧಗಳನ್ನು ನೀಡಲಾಗುತ್ತದೆ.

Actress Tamannaah Bhatia inaugurates Lever Ayush Indiranagar
ಆಯುರ್ವೇದ ಒಂದು ಪುರಾತನವಾದ ಸಮಗ್ರ ಚಿಕಿತ್ಸಾ ಪದ್ಧತಿಯಾಗಿದೆ. ಪುರಾತನ ಕಾಲದಿಂದಲೂ ಈ ಪದ್ಧತಿ ಜಾರಿಯಲ್ಲಿದ್ದು, ಇದೀಗ ಮೇಲ್ದರ್ಜೆಗೇರುತ್ತಿರುವ ಜೀವನಶೈಲಿ ಮತ್ತು ಆರೋಗ್ಯದಲ್ಲಿ ಆಗುತ್ತಿರುವ ಏರುಪೇರುಗಳನ್ನು ಸಮತೋಲಿತವಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.


ತಮನ್ನಾ ಭಾಟಿಯಾ: 'ಈ ಸ್ಟೋರ್‍ನಲ್ಲಿ ಆಯುರ್ವೇದ ಉತ್ಪನ್ನಗಳನ್ನು ಖರೀದಿಸುವ ಮುನ್ನ ಅವುಗಳ ಸಾಧಕಭಾದಕಗಳನ್ನು ಪರಿಶೀಲಿಸಬಹುದು. ಇವುಗಳಲ್ಲಿ ಬಳಸಿರುವ ಪದಾರ್ಥಗಳ ಸಂಪೂರ್ಣ ಮಾಹಿತಿಯನ್ನು ಪ್ರದರ್ಶಿಸಲಾಗುತ್ತಿದೆ. ಈ ಮಾಹಿತಿಗಳನ್ನು ಪಡೆಯುವ ಮೂಲಕ ಗ್ರಾಹಕರು ಆಯುರ್ವೇದ ಉತ್ಪನ್ನಗಳ ಬಗ್ಗೆ ಅತ್ಯುತ್ತಮವಾದ ಅನುಭವಗಳನ್ನು ಪಡೆಯಬಹುದಾಗಿದೆ. ಅಲ್ಲದೇ, ಇಲ್ಲಿನ ಪರಿಣತರಿಂದ ಉತ್ಪನ್ನಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಪಡೆಯಬಹುದಾಗಿದೆ.

ಈ ಸ್ಟೋರ್ ಗೆ ಭೇಟಿ ಕೊಟ್ಟರೆ ಅಲ್ಲಿ ಸೌಂದರ್ಯವರ್ಧಕ ಉತ್ಪನ್ನಗಳನ್ನು ಶಾಪಿಂಗ್ ಮಾಬಹುದಾಗಿದೆ. ವಿಶೇಷವಾಗಿ ಇಲ್ಲಿ ಉಚಿತವಾಗಿ ಆಯುರ್ವೇದದ ಬಗ್ಗೆ ಸಲಹೆ ಪಡೆಯುವುದರ ಜತೆಗೆ ದೋಷ ಅವಲೋಕನವನ್ನೂ ಮಾಡಿಸಿಕೊಳ್ಳಬಹುದಾಗಿದೆ. ಈ ಮೂಲಕ ಗ್ರಾಹಕರು ತಮಗೆ ಯಾವ ಥೆರಪಿ ಸೂಕ್ತ ಎಂಬುದನ್ನು ಅರಿತುಕೊಳ್ಳಬಹುದಾಗಿದೆ. ಇಂತಹ ಹಲವು ಬಗೆಯ ಶ್ರೀಮಂತಪೂರಿತವಾದ ಆಯುರ್ವೇದ ಜ್ಞಾನವನ್ನು ಒಳಗೊಂಡ ಉತ್ಪನ್ನಗಳು ಮತ್ತು ಸೇವೆಗಳನ್ನು ಪಡೆಯಬಹುದಾಗಿದೆ'' ಎಂದು ವಿವರಣೆ ನೀಡಿದರು.

Actress Tamannaah Bhatia inaugurates Lever Ayush Indiranagar

'ಉತ್ತಮ ನೆನಪಿನ ಶಕ್ತಿ ಮತ್ತು ನಿದ್ರೆಗೆ ನೆರವಾಗುವ ಶಿರೋ ಪಿಚು' ಚಿಕಿತ್ಸೆಯನ್ನು ಪಡೆಯುವುದು ಸೂಕ್ತ. ಇದಲ್ಲದೇ, ಕಣ್ಣಿನ ಆರೋಗ್ಯವರ್ಧನೆಗೆ ನೇತ್ರ ಪಿಚು' ಬಗ್ಗೆ ತಿಳಿದುಕೊಂಡಿದ್ದೇನೆ. ಸೌಂದರ್ಯ ವರ್ಧನೆಗೆ ಅಗತ್ಯವಾದ ಚಿಕಿತ್ಸೆಗಳನ್ನು ಬಯಸುವವರು ಮುಖಲೇಪನ' ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ. ಈ ಚಿಕಿತ್ಸೆ ಪಡೆದರೆ ಚರ್ಮಕ್ಕೆ ಪುನಶ್ಚೇತನ ನೀಡಿ ಕಾಂತಿಯನ್ನು ಹೆಚ್ಚಿಸುತ್ತದೆ'' ಎಂದು ತಮನ್ನಾ ತಿಳಿಸಿದರು.

ಲಿವರ್ ಆಯುಷ್ ಸ್ಟೋರ್‍ನ ವಿಳಾಸ: ನಂ: 241, ಚಿನ್ಮಯ ಮಿಷನ್ ಹಾಸ್ಪಿಟಲ್ ರಸ್ತೆ, ಶಾಂತಿಸಾಗರದ ಪಕ್ಕ, ಇಂದಿರಾನಗರ, ಬೆಂಗಳೂರು- 560038.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+