Get Updates
Get notified of breaking news, exclusive insights, and must-see stories!

Actress Tamanna Bhatia: ಸಿಂಧಿ ಶಾಲೆಯಲ್ಲಿ ಮಕ್ಕಳಿಗೆ ತಮನ್ನಾ ಭಾಟಿಯ ಬಗ್ಗೆ ಬೋಧನೆ- ಪೋಷಕರ ಆಕ್ಷೇಪ

ಬೆಂಗಳೂರು, ಜೂನ್ 27: ನಟನೆ, ತಮ್ಮ ಸೌಂದರ್ಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಇತ್ತೀಚೆಗೆ ವೆಬ್‌ಸಿರೀಸ್ ನಲ್ಲಿ ಬೋಲ್ಡ್ ದೃಶ್ಯಗಳಿಂದ ಮೂಲಕ ಸುದ್ದಿಯಾಗಿದ್ದ ನಟಿ ತಮನ್ನಾ ಭಾಟಿಯಾ (Tamannaah Bhatia) ಕುರಿತ ಅಧ್ಯಾಯ ಶಾಲಾ ಪಠ್ಯಪುಸ್ತಕದಲ್ಲಿ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಕರ್ನಾಟಕದ ಬೆಂಗಳೂರಿನ ಹೆಬ್ಬಾಳದಲ್ಲಿರುವ 'ಸಿಂಧಿ ಹೈಸ್ಕೂಲ್' (Tamannaah Bhatia) ನಲ್ಲಿನ ಪಠ್ಯದಲ್ಲಿ ನಟಿ ತಮನ್ನಾ ಭಾಟಿಯಾ ಕುರಿತ ಅಧ್ಯಾಯ ಸೇರಿಸಲಾಗಿದೆ. ಇದಕ್ಕೆ ಇಲ್ಲಿ ಓದುತ್ತಿರುವ ಏಳನೇ ತರಗತಿ ಮಕ್ಕಳ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ. ಈ ಕುರಿತು ಅವರೆಲ್ಲ ದೂರು ದಾಖಲಿಸಿದ್ದಾರೆ.

Actress Tamanna Bhatia Related Chapter in Bengaluru Sindhi School 7th Class Textbook Parents Oppose

ಇನ್ನೂ ಅನುಪಯುಕ್ತ ಅಧ್ಯಾಯ ಸೇರ್ಪಡೆ ಕುರಿತು ಪೋಷಕರು ಶಾಲೆಯ ಆಡಳಿತದ ಗಮನಕ್ಕೆ ತಂದರು. ಆದರೆ ಶಾಲಾ ಆಡಳಿತ ಮಂಡಳಿ ಏನು ತಿಳಿಸದೇ 'ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್' ಸಂಪರ್ಕಿಸುವಂತೆ ಒತ್ತಾಯಿಸಿದೆ ಎಂದು ತಿಳಿದು ಬಂದಿದೆ.

ಯಶಸ್ವಿ ಸದಸ್ಯರ ಬಗ್ಗೆ ಬೋಧನೆ ಸೂಕ್ತ

ಸಿಂಧಿ ಸಮುದಾಯದ ನಟ ರಣವೀರ್ ಸಿಂಗ್ (Actor Ranveer Singh) ಅವರಂತಹ ಸಮುದಾಯದ ಪ್ರಮುಖ ಮತ್ತು ಯಶಸ್ವಿ ಸದಸ್ಯರನ್ನು ಅಧ್ಯಾಯದಲ್ಲಿ ಸೇರಿಸಿದರೆ ಯಾವುದೇ ವಿರೋಧ ಇಲ್ಲ. ಆದರೆ ತಮನ್ನಾಗೆ ಸಂಬಂಧಿಸಿದ ವಿಷಯ ಸೇರ್ಪಡೆ ಸರಿಯಲ್ಲ ಎಂದು ಪೋಷಕರು ಹೇಳಿದರು.

Actress Tamanna Bhatia Related Chapter in Bengaluru Sindhi School 7th Class Textbook Parents Oppose

ಹೆಬ್ಬಾಳದ ಸಿಂಧಿ ಶಾಲೆಯು ಈ ಸಮುದಾಯದ 7ನೇ ತರಗತಿಯ ಪಠ್ಯಪುಸ್ತಕ ಒಳಗೊಂಡಿದೆ. ಅದರಲ್ಲಿ ಒಂದು ಅಧ್ಯಾಯವು ದೇಶದ ವಿಭಜನೆಯ ನಂತರದ ಜೀವನ, ಸಿಂಧ್‌ನಲ್ಲಿ ವಲಸೆ, ಸಮುದಾಯ ಮತ್ತು ಕಲಹ, 1947 ರಿಂದ 1962 ಕುರಿತಾದ ಅಂಶಗಳು ಇವೆ. ಭಾಷಾ ಅಲ್ಪಸಂಖ್ಯಾತರಾದ ಸಿಂಧಿ ಸಮುದಾಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲು ಅವಕಾಶ ಮಾಡಿಕೊಡಲಾಗಿದೆ.

ವಿದ್ಯಾರ್ಥಿಗಳ ಪೋಷಕರ ವಿರೋಧ ಏಕೆ?

ಸ್ವಾತಂತ್ರ್ಯಾ ನಂತರದ ಭಾರತೀಯರ ಜನಜೀವನ ಆಧ್ಯಾಯದಲ್ಲಿ ತಮನ್ನಾ ಭಾಟಿಯಾ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ. ಅವರು ಹಸಿ ಬಿಸಿ, ಬೋಲ್ಡ್ ದೃಶ್ಯಗಳಲ್ಲಿ ನಟಿಸುತ್ತಾರೆ. ಅವರು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವರು ಮಕ್ಕಳಿಗೆ ಆದರ್ಶವಾಗಬೇಕೇ?. ಇದು ಸರಿಯಲ್ಲ ಎಂದು ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಕ್ಕಳಿಗೆ ಮತ್ತೊಂದು ಸಂಸ್ಕೃತಿಯ ಬಗ್ಗೆ ಪರಿಚಯಿಸುವ ಬಗ್ಗೆ ನಮಗೆ ಯಾವುದೇ ವಿರೋಧವಿಲ್ಲ. ಆದರೆ ಪೋಷಕರು ನಮ್ಮ ಆಕ್ಷೇಪಣೆಯು 7ನೇ ತರಗತಿ ವಿದ್ಯಾರ್ಥಿಗಳಿಗೆ ಸೂಕ್ತವಲ್ಲದ ನಟಿಯ ಅಧ್ಯಾಯ ಒಳಗೊಂಡಿದೆ. ಇದನ್ನು ವಿರೋಧಿಸಿದರೆ, ತಮ್ಮ ವಾರ್ಡ್‌ಗಳಿಗೆ ವರ್ಗಾವಣೆ ಪ್ರಮಾಣಪತ್ರ ನೀಡುವುದಾಗಿ ಶಾಲಾ ಆಡಳಿತ ಮಂಡಳಿ ಬೆದರಿಕೆ ನೀಡುತ್ತಿದೆ ಎಂದು ಪೋಷಕರು ಆರೋಪಿಸಿದರು.

ಸಿಂಧಿ ಇತರ ನಾಯಕರ ಬಗ್ಗೆ ಆಕ್ಷೇಪವಿಲ್ಲ

ಸಿಂಧಿ ಸಮುದಾಯದ ಹಿರಿಯ ಕಲಾವಿದರ ಕುರಿತ ಅಧ್ಯಾಯಗಳ ಬೋಧನೆ ಬಗ್ಗೆ ನನಗೆ ಯಾವುದೇ ಸಮಸ್ಯೆಗಳೂ ಇಲ್ಲ. ಆದರೆ ಈ ನಟಿಯ (ತಮನ್ನಾ ಭಾಟಿಯಾ) ಬಗ್ಗೆ ಕುರಿತು ನೀವು ಸಾಮಾಜಿಕ ಜಾಲತಾಣದಲ್ಲಿ ಹುಡುಕಿದರೆ ಅರೆಬರೆ ಬಟ್ಟೆಯ, ಅಸೂಕ್ತವಾದ ವಿಷಯ ಕಾಣಿಸುತ್ತದೆ. ಹೀಗಾಗಿ ಇವರ ಬಗ್ಗೆ ಮಕ್ಕಳಿಗೆ ಹೇಳಿಕೊಡುವುದು ಸೂಕ್ತ ಅಲ್ಲ ಎಂದು ಪೋಷಕರು ಆಡಳಿತ ಮಂಡಳಿಗೆ, ಸಂಬಂಧಿಸಿದ ಇಲಾಖೆಗೆ ಮನವಿ ಮಾಡಿದ್ದಾರೆ.

ಅನುಮೋದನೆ ಪಡೆಯುವುದು ಮುಖ್ಯ

ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಅವರು, ಯಾವುದೇ ಸಂದರ್ಭದಲ್ಲಿ ಒಂದು ವಿಷಯವನ್ನು ಸೇರಿಸಲು ಆ ಶಾಲೆಯು ಸಂಬಂಧಿತ ಮಂಡಳಿಯಿಂದ ಅನುಮೋದನೆ ಪಡೆಯಬೇಕಿರುತ್ತದೆ ಎಂದು ಅವರು ತಿಳಿಸಿದರು. ಸದ್ಯ ಈ ವಿವಾದದ ಬಗ್ಗೆ ಶಾಲಾ ಆಡಳಿತ ಮಂಡಳಿಯು ಬಹಿರಂಗವಾಗಿ ಉತ್ತರಿಸಿ ಗೊಂದಲ ಬಗೆಹರಿಸುವ ಕೆಲಸ ಮಾಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+