Actress Ramya: ಬೆಂಗಳೂರಲ್ಲಿ ನಟಿ ರಮ್ಯಾ ಪ್ರತ್ಯಕ್ಷ, ವಕೀಲರ ಸಮೇತ ಕೋರ್ಟ್‌ಗೆ ಹಾಜರ್, ಏನಿದು ಪ್ರಕರಣ?
ಬೆಂಗಳೂರು, ಜನವರಿ 07: ಚಿತ್ರರಂಗ ಮತ್ತು ರಾಜಕಾರಣದಲ್ಲಿ ಸದ್ದು ಮಾಡಿದ್ದ ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ರಾಜಧಾನಿ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಚೆಂದದ ಚೆಲುವೆ ಯಾವ ಸಿನಿಮಾ ಮಾಡುತ್ತಿಲ್ಲ. ರಾಜಕಾರಣದಲ್ಲೂ ಇಲ್ಲ. ಅವರು ಎಲ್ಲಿದ್ದಾರೋ ಎಂದು ಯಾರಿಗೋ ಗೊತ್ತಿರಲಿಲ್ಲ. ಇದೀಗ ದಿಢೀರನೇ ಬೆಂಗಳೂರಿನ ವಾಣಿಜ್ಯ ನ್ಯಾಯಾಲಯಕ್ಕೆ ಬಂದು ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾರೆ. ಏನಿದು ಪ್ರಕರಣ?..
''ನನ್ನ ಅನುಮತಿ ಪಡೆಯದೇ ಸಿನಿಮಾ ಟ್ರೈಲರ್, ಸಿನಿಮಾದಲ್ಲಿ ನನಗೆ ಸಂಬಂಧಿಸಿದ ದೃಶ್ಯದ ತುಣುಕುಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಯಾವ ಅನುಮತಿ ಪಡೆದಿಲ್ಲ. ನನಗೆ ಪರಿಹಾರವಾಗಿ 1 ಕೋಟಿ ರೂಪಾಯಿ ನೀಡುವಂತೆ ಕೋರಿ'' ವಾಣಿಜ್ಯ ನಾಯಾಲಯದ ಮೆಟ್ಟಿಲೇರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಮ್ಯಾ ಇಂದು ಮಂಗಳವಾರ ಜನವರಿ 7ರಂದು ಕೋರ್ಟ್‌ಗೆ ತಮ್ಮ ವಕೀಲರ ಸಮೇತರಾಗಿ ಹಾಜರಾಗಿದ್ದಾರೆ.

ಕನ್ನಡದಲ್ಲಿ ಕಳೆದ ವರ್ಷ ಬಿಡುಗಡೆ ಆಗಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ನಿರ್ಮಾಪಕರು ಸೇರಿದಂತೆ ಚಿತ್ರತಂಡದ ವಿರುದ್ಧ ರಮ್ಯಾ ಗರಂ ಆಗಿದ್ದರು. ಇದೇ ಸಿನಿಮಾದಲ್ಲಿ ನಟಿಸಿದ್ದ ನಟಿ ರಮ್ಯಾ ಅವರ ದೃಶ್ಯಗಳನ್ನು ಅನುಮತಿ ಇಲ್ಲದೇ ಬಳಸಿದ್ದಾರೆ. ಈ ಬಗ್ಗೆ ಅನುಮತಿ ಪಡೆದಿರಲಿಲ್ಲ, ಒಪ್ಪಂದ, ಅಗ್ರಿಮೆಂಟ್ ಆಗಿರಲಿಲ್ಲ ಎಂದು ಅವರು ಕೋರ್ಟ್‌ಗೆ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಲಾಯರ್ ಸಮೇತ ರಮ್ಯಾ ಹಾಜರ್
ಕಳೆದ ವರ್ಷ 2024ರ ಜುಲೈ 24ರಂದು ಸ್ಯಾಂಡಲ್‌ವುಡ್‌ನಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಎಂಬ ಸಿನಿಮಾ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ನಟಿ ರಮ್ಯಾ ಸಹ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ಪ್ರಾಧ್ಯಾಪಕಿ ಆಗಿ ಬಣ್ಣ ಹಚ್ಚಿದ್ದರು. ಇದನ್ನು ನೋಡಿದ ಅವರ ಫ್ಯಾನ್ಸ್, ಸ್ಯಾಂಡಲ್‌ವುಡ್ ಮಂದಿ ರಾಜಕಾರಣದಲ್ಲಿ ಬ್ಯೂಸಿ ಇದ್ದ ಚೆಂದದ ಚೆಲುವೆ ಮರಳಿ ಬಣ್ಣದ ಲೋಕಕ್ಕೆ ಕಾಲಿಟ್ಟರು ಎಂದು ಫುಲ್ ಖುಷ್ ಆಗಿದ್ದರು.
ಅದೇನಾಯಿತೋ ಗೊತ್ತಿಲ್ಲ. ಸಿನಿಮಾ ಬಿಡುಗಡೆಗೂ ಮೊದಲೇ ನಟಿ ರಮ್ಯಾ ಅವರು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ನಿರ್ಮಾಪಕರು ಮತ್ತು ಚಿತ್ರತಂಡದ ವಿರುದ್ಧ ಕೇಸ್ ಹಾಕಿದರು. 01 ಕೋಟಿ ರೂಪಾಯಿ ಪರಿಹಾರಕ್ಕಾಗಿ ಅವರು ಆಗ್ರಹಿಸಿದರು.
ನನ್ನ ಅನುಮತಿ ಇಲ್ಲದೇ ನನ್ನ ವಿಡಿಯೋ ಕ್ಲಿಪ್ ಬಳಿಸಿದ್ದಾರೆ ಎಂದು ಅವರು ಅಸಮಾಧಾನ ತೋರ್ಪಡಿಸಿದ್ದರು. ಈ ಬಗ್ಗೆ ಯಾವ ಒಪ್ಪಂದ ಆಗಿರಲಿಲ್ಲ ಎಂದು ದೂರಿದ್ದರು. ಇದಕ್ಕೆ ನಿರ್ಮಾಪಕರು ನಾವು ಅವರ ಅನುಮತಿ ಪಡೆದಿದ್ದೇವೆ ಎಂದು ಆರೋಪಕ್ಕೆ ತಿರುಗೇಟು ಕೊಡುವ ಮೂಲಕ ಕೋರ್ಟ್ ಮಾಹಿತಿ ನೀಡಿದ್ದರು.
ವಾದ ವಿವಾದ ಆಲಿಸಿದ್ದ ಕೋರ್ಟ್ ಸದ್ಯ ಸಿನಿಮಾ ಬಿಡುಗಡೆ ಆಗಲಿ ಎಂದು ಹೇಳಿದ್ದರು. ಅದರಂತೆ ಸಿನಿಮಾ ಬಿಡುಗಡೆ ಆಗಿ ಸ್ಯಾಂಡಲ್ ವುಡ್‌ನಲ್ಲಿ ಒಂದು ಹಂತದ್ದ ಸದ್ದು ಮಾಡಿತ್ತು. ಜೊತೆಗೆ ನಟಿ ರಮ್ಯಾ ಅವರ ಕೋರ್ಟ್ ಪ್ರಕರಣ ಸದ್ದು ಮಾಡಿತ್ತು.
ಲಾಯರ್ ಸಮೇತ ಹಾಜರ್, ದಾಖಲೆ ಸಲ್ಲಿಕೆ?
ಈ ಪ್ರಕರಣ ಸಂಬಂಧ ಇಂದು ಮಂಗಳವಾರ ಬೆಂಗಳೂರು ವಾಣಿಜ್ಯ ಕೋರ್ಟ್ ಅಗತ್ಯ ಮಾಹಿತಿ ನೀಡಲು ಹಾಜರಾಗಿದ್ದಾರೆ. ತಮ್ಮ ವಕೀಲರ ಸಮೇತರಾಗಿ ನಟಿ ನ್ಯಾಯಾಲಯಕ್ಕೆ ಬಂದಿದ್ದಾರೆ. ಇಂದು ಅವರು ತಾವು ಮಾಡಿರುವ ಆರೋಪಕ್ಕೆ ಸಾಕ್ಷ್ಯ, ಮಾಹಿತಿ ಒದಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿತ್ರರಂಗಕ್ಕೆ ರೀ ಎಂಟ್ರಿ ಬಗ್ಗೆ ರಮ್ಯಾ ಏನಂದ್ರು?
ವಾಣಿಜ್ಯ ನ್ಯಾಯಾಲಯಕ್ಕೆ ಹಾಜರಾಗಿ ಕೆಲವು ಹೊತ್ತಿನ ಬಳಿಕ ಹೊರ ಬಂದ ನಟಿ ರಮ್ಯಾ ಅವರು ಸುದ್ದಿಗಾರರ ಜೊತೆಗೆ ಮಾತನಾಡಿದ್ದಾರೆ. ಈ ವೇಳೆ ಪ್ರಕಟಣದ ಬಗ್ಗೆ ಗುಟ್ಟು ಬಿಟ್ಟುಕೊಡದ ಅವರು, ಪ್ರಕರಣ ಕೋರ್ಟ್‌ನಲ್ಲಿ ನಡೆಯುತ್ತಿದೆ. ಅದಕ್ಕಾಗಿ ಬಂದಿದ್ದೇನೆ ಎಂದರು.
ಮತ್ತೆ ರಾಜಕೀಯಕ್ಕೆ ಬರುವುದರ ಬಗ್ಗೆ ಯಾವುದೇ ಯೋಚನೆ ನನ್ನಲ್ಲಿ ಇಲ್ಲ ಎಂದಿರುವ ಅವರು ಸಿನಿಮಾ ರಂಗಕ್ಕೆ ಮರು ಪ್ರವೇಶದ ಬಗ್ಗೆಯು ಮಾತನಾಡಿದ್ದಾರೆ.
ಒಂದೊಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಖಂಡಿತವಾಗಿ ನಾನು ನಟನೆ ಮಾಡಲು ಸಿದ್ಧವಿದ್ದೇನೆ. ಒಳ್ಳೆಯ ಕಥೆ ಬರಲಿ ನೋಡೋಣ. ನಾನು ಕೂತೂಹಲದಿಂದ ಕಾಯುತ್ತಿದ್ದೇನೆ. ಆದರೆ ರಾಜಕೀಯ ಮರು ಪ್ರವೇಶ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರ ಫ್ಯಾನ್ಸ್ ನಟಿ ರಮ್ಯಾ ಮತ್ಯಾವಾಗ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ನಟಿಸೋದು ಎಂದು ಕಾಯುತ್ತಿದ್ದಾರೆ. ಅದಕ್ಕೆ ಕಾಲವೇ ಉತ್ತರ ನೀಡಲಿದೆ.












Click it and Unblock the Notifications