ಬೆಂಗಳೂರಿನಲ್ಲಿ ನಟಿ ಆಶಿಕಾ ರಂಗನಾಥ್ ಸಂಬಂಧಿ ಆತ್ಮಹತ್ಯೆ
ಬೆಂಗಳೂರು, ನವೆಂಬರ್ 30: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪಗಳು ಉಂಟಾಗಿ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ನಡೆದಿವೆ. ಇದೀಗ ನಟಿ ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಾಗಾದ್ರೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ನಟಿ ಆಶಿಕಾ ರಂಗನಾಥ್ ಅವರ ಸಂಬಂಧಿ ಯುವತಿ ಡ್ರಗ್ ಅಡಿಕ್ಟ್ ಯುವಕನ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಪಾಂಡುರಂಗ ನಗರದಲ್ಲಿ ನಡೆದಿದೆ. ಹಾಸನ ಮೂಲದ ಯುವತಿ ಅಚಲ (22) ನವೆಂಬರ್ 22ರಂದು ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ, 10 ದಿನ ಕಳೆದರೂ, ಸಾಕ್ಷ್ಯಗಳಿ ಇದ್ದರೂ ಸಹ ಆರೋಪಿಯನ್ನು ಬಂಧಿಸದೇ ಇರುವುದು ಯುವತಿ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರುವ ಹೊತ್ತಲೇ ಯುವತಿ ಅಚಲ ತನ್ನ ದೂರದ ಸಂಬಂಧಿ ಮಯಾಂಕ್ ಜೊತೆ ಸ್ನೇಹ ಹೊಂದಿದ್ದರು. ಇದೇ ವೇಳೆ ಪ್ರೀತಿಸುವುದಾಗಿ ನಂಬಿಸಿ ಮಯಾಂಕ್ ಮದುವೆಗೆ ಮೊದಲೇ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದ. ಡ್ರಗ್ ಅಡಿಕ್ಟ್ ಆಗಿದ್ದ ಮಯಾಂಕ್ ಪದೇ ಪದೇ ಸಂಪರ್ಕಕ್ಕೆ ಪೀಡಿಸುತ್ತಿದ್ದ. ಇದಕ್ಕೆ ಅಚಲ ಒಪ್ಪದ ಕಾರಣ ದೈಹಿಕ ಹಲ್ಲೆ ನಡೆಸಿ ಮಾನಸಿಕವಾಗಿಯೂ ಕಿರುಕುಳ ನೀಡುತ್ತಿದ್ದ. ಪದೇ ಪದೇ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿ ಕಣ್ಣೀರಿಟ್ಟಿದ್ದಾರೆ.
ನಟಿ ಆಶಿಕಾ ರಂಗನಾಥ್ ಮಾವನ ಮಗಳೂ ಆಗಿರುವ ಅಚಲ ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ತಯಾರಿ ನಡೆಸಿದ್ದಳು. ಈ ವೇಳೆಯೇ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಮಯಾಂಕ್ ಹಾಗೂ ಆತನ ತಾಯಿ ಮೈನಾ ವಿರುದ್ಧ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗಳ ಸಾವಿಗೆ ಕಾರಣ ಆದವರನ್ನು ಬಂಧಿಸಿ ಎಂದು ಯುವತಿ ಪೋಷಕರು ಆಗ್ರಹಿಸಿದ್ದಾರೆ.
ಬೆಂಗಳೂರಿನಂತಹ ನಗರ ಪ್ರದೇಶಗಳಲ್ಲಿ ಇಂತಹ ಘಟನೆಗಳು ಈಗಾಗಲೇ ಸುಮಾರು ನಡೆದಿವೆ. ಗಂಡ-ಹೆಂಡತಿ ಜಗಳ ಹಾಗೂ ಪ್ರೀತೀಯ ವಿಚಾರಕ್ಕೆ ಜಗಳವಾಗಿ ಕೊನೆಗೆ ಕೊಲೆಯಲ್ಲಿ ಅಂತ್ಯವಾದ ಉದಾಹರಣೆಗಳಿವೆ.












Click it and Unblock the Notifications