ಅಕ್ರಮ ಗೋಹತ್ಯೆ ಬಗ್ಗೆ ಮೋದಿಗೆ ದೂರಿದ ನಟಿ ಐಂದ್ರಿತಾ ರೈ: ಪೊಲೀಸರಿಂದ ಸ್ಪಷ್ಟನೆ
ಬೆಂಗಳೂರು, ಸೆಪ್ಟೆಂಬರ್ 8: ರಾಜ್ಯದಲ್ಲಿ ಹೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ನಿನ್ನೆ ರಾತ್ರಿ ಟ್ರಕ್‌ನಲ್ಲಿ ಹಸುವಿನ ತ್ಯಾಜ್ಯವನ್ನು ಸಾಗಿಸಲಾಗುತ್ತಿತ್ತು. ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರು ನಿರಾಕರಿಸುತ್ತಿದ್ದಾರೆ. ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ನಟಿ ಐಂದ್ರಿಯಾ ರೈ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.
ನಟಿ ಐಂದ್ರಿತಾ ರೈ ಅವರು ಗೋಹತ್ಯೆ ಕಾನೂನು ಬಾಹಿರ ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬೆಂಗಳೂರು ನಗರ ಪೊಲೀಸ್, ಬೆಂಗಳೂರು ನಗರ ಪೊಲೀಸ್ ಕಮಿಷನರ್, ಬೊಮ್ಮನಹಳ್ಳಿ ಪೊಲೀಸ್ ಠಾಣೆ, ಬೆಂಗಳೂರು ಆಗ್ನೆಯ ವಿಭಾಗದ ಡಿಸಿಪಿಗೆ ಎಕ್ಸ್‌ನಲ್ಲಿ ಟ್ಯಾಗ್ ಮಾಡಿದ್ದರು.

ನಟಿ ಐಂದ್ರಿತಾ ರೇ ಆರೋಪಕ್ಕೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಸ್ಪಷ್ಟನೆ ನೀಡಿದ್ದು, ಪಾಲಿಕೆ ಪಶು ವೈದ್ಯರು ಪರಿಶೀಲನೆ ನಡೆಸಿದ್ದಾರೆ. ಅದು ಹಸುವಿನ ತ್ಯಾಜ್ಯವಲ್ಲ ಎಂದು ವೈದ್ಯರು ದೃಡಪಡಿಸಿದ್ದಾರೆ. ಕಸಾಯಿಖಾನೆಯಿಂದ ತಮಿಳುನಾಡು ಕಡೆಗೆ ತ್ಯಾಜ್ಯ ಸಾಗಣೆ ಮಾಡಲಾಗುತ್ತಿತ್ತು, ತ್ಯಾಜ್ಯ ಸಾಗಣೆ ಸಂಬಂಧ ಸಾಗಣೆದಾರ ಪರ್ಮಿಟ್ ಹೊಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
Enquiry into the incident @bommanalli PS it's been confirmed that the commodities found in the vehicle included bones,horns,hides &animal byproducts were not from the cows& it was certified by BBMP Animal husbandry East slaughter house to the authorized trader.
— C K Baba, IPS (@DCPSEBCP) September 7, 2023
ಸೆಪ್ಟೆಂಬರ್ 6 ರಂದು, ರೇ ಸಾಮಾಜಿಕ ಮಾಧ್ಯಮ X ನಲ್ಲಿ ವೀಡಿಯೊವನ್ನು ಅವರು ಪೋಸ್ಟ್ ಮಾಡಿದರು, ಇದರಲ್ಲಿ ಪ್ರಾಣಿಗಳ ದೇಹದ ಭಾಗಗಳು ಕಂಡುಬಂದಿದ್ದವು. ಟ್ರಕ್ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿದೆ ಮತ್ತು ಪೊಲೀಸರು ಎಫ್‌ಐಆರ್ ದಾಖಲಿಸಲು ನಿರಾಕರಿಸುತ್ತಿದ್ದಾರೆ ಎಂದು ನಟಿ ಹೇಳಿಕೊಂಡಿದ್ದಾರೆ. ನಟ ತನ್ನ ಪೋಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಸಹ ಟ್ಯಾಗ್ ಮಾಡಿದ್ದರು.












Click it and Unblock the Notifications